- ಎಲ್ ಆ್ಯಂಡ್ ಟಿಯ ಕಾರ್ಯನಿರ್ವಹಣೆ ವಿಫಲತೆಗೆ ಕೆ-ರೈಡ್ ಕ್ರಮ
- ಒಪ್ಪಂದ ಶಿಸ್ತು, ಆರ್ಥಿಕ ಜಾಗ್ರತೆ ಬದ್ಧತೆ ದಢಪಡಿಸಿದೆ ಸರ್ಕಾರಿ ಸಂಸ್ಥೆ
ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಕಾರಿಡಾರ್ 2 ಮತ್ತು 4ಕ್ಕೆ ಸಂಬಂಧಿಸಿ ಎಲ್ ಆ್ಯಂಡ್ ಟಿ ಕಂಪನಿ ಪರವಾಗಿ ಯೆಸ್ ಬ್ಯಾಂಕ್ ನೀಡಿದ್ದ 57 ಕೋಟಿ ರೂ. ಮೌಲ್ಯದ ಎರಡು ಕಾರ್ಯಕ್ಷಮತಾ ಬ್ಯಾಂಕ್ ಗ್ಯಾರಂಟಿಗಳನ್ನು ಮುಟ್ಟುಗೋಲು ಹಾಕಿಕೊಂಡು ಆ ಮೊತ್ತವನ್ನು ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ ಲಿಮಿಟೆಡ್ (ಕೆ-ರೈಡ್) ನಗದೀಕರಿಸಿಕೊಂಡಿದೆ.
ಎಲ್ ಆ್ಯಂಡ್ ಟಿ ಕಂಪನಿ ತನ್ನ ಕಾರ್ಯಕ್ಷಮತಾ ಬ್ಯಾಂಕ್ ಗ್ಯಾರಂಟಿಗಳನ್ನು ಕೆ-ರೈಡ್ ಸಂಸ್ಥೆ ವಶಪಡೆಯದಂತೆ ತಡೆಯಲು ಸಲ್ಲಿಸಿದ್ದ ಮನವಿಯನ್ನು ಅರ್ಬಿಟ್ರೇಷನ್ ಟ್ರಿಬ್ಯುನಲ್ (ಮಧ್ಯಸ್ಥಿಕೆ ಪ್ರಾಧಿಕಾರ) ತಿರಸ್ಕರಿಸಿದೆ. ಹಾಗಾಗಿ ಕೆ-ರೈಡ್ ಈ ಕ್ರಮ ಕೈಗೊಂಡಿದೆ.
ಪ್ರಾಧಿಕಾರದ ಈ ತೀರ್ಪು, ಎರಡು ಕಾರಿಡಾರ್‌ಗಳ ಸಿವಿಲ್ ಕಾಮಗಾರಿ ಅನುಷ್ಠಾನದಲ್ಲಿ ಕೆ-ರೈಡ್ ನಿಲುವನ್ನು ಟ್ರಿಬ್ಯುನಲ್ ಸಮರ್ಥಿಸಿದ ಮಹತ್ವದ ನಿರ್ಧಾರವಾಗಿದೆ. ಎಲ್ ಆ್ಯಂಡ್ ಟಿ ಕಂಪನಿಯು ಒಪ್ಪಂದದ ಷರತ್ತುಗಳನ್ನು ಉಲ್ಲಂಸಿ ಅವುಗಳನ್ನು ಏಕಪಕ್ಷೀಯವಾಗಿ ರದ್ದುಪಡಿಸಿತ್ತು.
ಅಲ್ಲದೆ ಈ ಹಿಂದೆ ಎಲ್ ಆ್ಯಂಡ್ ಟಿ ಕಂಪನಿಯು ಬಿಎಸ್‌ಆರ್‌ಪಿ ಯೋಜನೆಯ ಕಾರಿಡಾರ್ 2 ಮತ್ತು 4ರ ಒಪ್ಪಂದಗಳನ್ನು ರದ್ದುಪಡಿಸಿ, ಬ್ಯಾಂಕ್ ಗ್ಯಾರಂಟಿ ವಶಪಡಿಸಿಕೊಳ್ಳುವುದನ್ನು ತಡೆಯಲು ವಾಣಿಜ್ಯ ನ್ಯಾಯಾಲಯದಿಂದ ತಾತ್ಕಾಲಿಕ ತಡೆ ಆದೇಶವನ್ನು ಪಡೆದಿತ್ತು. ಅಲ್ಲದೆ, ಒಪ್ಪಂದದ ಅರ್ಬಿಟ್ರೇಷನ್ ವಿಧಿಯನ್ನು ಬಳಸಿಕೊಂಡು, ತನ್ನ ದಾವೆಗಳನ್ನು ಮುಂದಿಟ್ಟಿತ್ತು. ಈ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನಿವತ್ತ ನ್ಯಾಯಮೂರ್ತಿಗಳನ್ನು ಒಳಗೊಂಡ ಅರ್ಬಿಟ್ರೇಷನ್ ಟ್ರಿಬ್ಯುನಲ್ ರಚಿಸಲಾಗಿತ್ತು. ನಂತರ, ವಾಣಿಜ್ಯ ನ್ಯಾಯಾಲಯವು ಎಲ್ಲ ವಿಷಯಗಳನ್ನು ಈ ಪ್ರಾಧಿಕಾರಕ್ಕೆಕ ವರ್ಗಾಯಿಸಿತು.
ಈ ಮೂಲಕ ಕೆ-ರೈಡ್ ಸಂಸ್ಥೆಯು ಒಪ್ಪಂದ ಶಿಸ್ತು, ಆರ್ಥಿಕ ಜಾಗ್ರತೆ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವಲ್ಲಿ ತನ್ನ ಬದ್ಧತೆಯನ್ನು ದಢಪಡಿಸಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.