- 2 ಎಕರೆ 3 ಗುಂಟೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿ ಜಿ. ಜಗದೀಶ ಅವರ ನೇತೃತ್ವದಲ್ಲಿ ತೆರವು
- ಅಕ್ರಮವಾಗಿ ಒತ್ತುವರಿಯಾಗಿದ್ದ ಸರ್ಕಾರಿ ಗೋಮಾಳ ತೆರವು ಕಾರ್ಯಾಚರಣೆ
ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ 13.65 ಕೋಟಿ ರೂ. ಅಂದಾಜು ಮೌಲ್ಯದ 2 ಎಕರೆ 3 ಗುಂಟೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿ ಜಿ. ಜಗದೀಶ ಅವರ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳ ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಗುಂಡುತೋಪು, ರಾಜಕಾಲುವೆ, ಸ್ಮಶಾನ, ಖರಾಬು, ತೋಪು, ಗೋಮಾಳ ರಸ್ತೆ, ಹುಲ್ಲುಬನ್ನಿ, ಸರ್ಕಾರಿ ಮತ್ತು ಸರ್ಕಾರಿ ಗೋಮಾಳ ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.
ವರ್ತೂರು ಹೋಬಳಿಯ ಮುಳ್ಳೂರು ಗ್ರಾಮದ ಸ.ನಂ 23 ಗುಂಡುತೋಪು ಒತ್ತುವರಿ ತೆರವುಗೊಳಿಸಿ 0.02 ಗುಂಟೆ, ಕೊಡತಿ ಗ್ರಾಮದ ಸ.ನಂ. 129/2ರ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ 0.02 ಗುಂಟೆ, ಸ.ನಂ. 122/2,3,4,5,6,7,8ರ 0.05 ಗುಂಟೆ, ಸ.ನಂ.36ರ ಸ್ಮಶಾನ 0.05 ಗುಂಟೆ ವಶಪಡಿಸಿಕೊಳ್ಳಲಾಗಿದೆ.
ಕೆ.ಆರ್. ಪುರ ಹೋಬಳಿಯ ಹೂಡಿ ಗ್ರಾಮದ ಸ.ನಂ. 07 ರ ಖರಾಬು ಒತ್ತುವರಿ ತೆರವುಗೊಳಿಸಿ 0.04.08 ಗುಂಟೆ, ಆನೇಕಲ್ ತಾಲೂಕಿನ ವಣಕನಹಳ್ಳಿ ಸ.ನಂ.08 ರ ತೋಪು 0.06 ಗುಂಟೆ, ಜಿಗಣಿ ಹೋಬಳಿಯ ಮಹಾಂತಲಿಂಗಾಪುರ ಗ್ರಾಮದ ಸ.ನಂ. 56 ರ ಗೋಮಾಳ 0.05 ಗುಂಟೆಗಳಾಗಿದೆ.
ಬೆಂ.ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಚೋಳನಾಯಕನಹಳ್ಳಿ ಸ.ನಂ 91ರ ಹುಲ್ಲುಬನ್ನಿಯಲ್ಲಿ 0.20 ಗುಂಟೆ, ಕೆಂಗೇರಿ ಹೋಬಳಿಯ ಕುಂಬಳಗೋಡಿನ ಸ.ನಂ 79/1ರ 0.32 ಗುಂಟೆಗಳನ್ನು ತೆರವುಗೊಳಿಸಲಾಗಿದೆ.
ಯಲಹಂಕ ಹೋಬಳಿ ಜಕ್ಕೂರು ಗ್ರಾಮದ ಸ.ನಂ 99ರ ಸರ್ಕಾರಿ ಗೋಮಾಳ ವಿಸ್ತೀರ್ಣ 0.02 ಗುಂಟೆಗಳನ್ನು ತೆರವುಗೊಳಿಸಲಾಗಿದೆ.