ಡಬಲ್​ ಡೆಕ್ಕರ್​ ಮೇಲ್ಸೇತುವೆ 
ಬೆಂಗಳೂರು

ಜನವರಿಗೆ ಡಬಲ್​ ಡೆಕ್ಕರ್​ ಮೇಲ್ಸೇತುವೆ ಜನಬಳಕೆಗೆ | DOUBBLE DECKER

ಬೆಂಗಳೂರು: ಸಿಲ್ಕ್​ಬೋರ್ಡ್​ ವ್ಯಾಪ್ತಿಯಲ್ಲಿ ಸಂಚಾರ ಸಿಕ್ಕು ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ, ನಗರದ ಮೊದಲ ಡಬಲ್​ ಡೆಕ್ಕರ್​ ಮೇಲ್ಸೇತುವೆಯನ್ನು ಜನವರಿಯಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಮುಂದಾಗಿದೆ.
ರಾಗಿಗುಡ್ಡ ಎಚ್​.ಎಸ್​.ಆರ್​. ಲೇಔಟ್​ ಮಾರ್ಗದ ಈ ಮೇಲ್ಸೇತುವೆಯ ಒಂದು ಭಾಗ ಈಗಾಗಲೆ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಇನ್ನೊಂದು ಭಾಗದ ಶೇ. 80 ಕಾಮಗಾರಿಗಳು ಪೂರ್ಣಗೊಂಡಿದೆ. ಎರಡು ಕಡೆ ವಯಾಡಕ್ಟ್​ ಕೂರಿಸಬೇಕಿದೆ. ಇದು ಸೆಂಟ್ರಲ್​ ಸಿಲ್ಕ್​ಬೋರ್ಡ್​ ಮೆಟ್ರೋ ನಿಲ್ದಾಣದ ಪಕ್ಕದಲ್ಲೇ ಆಗಬೇಕಿದೆ.
2024 ಜುಲೈನಿಂದ ಕಾಮಗಾರಿ ಪ್ರಗತಿಯಲ್ಲಿದೆ. ್ಲೆ$ಓವರ್​ನ ಮೊದಲ ಹಂತದಲ್ಲಿ ವಾಹನಗಳು, 2ನೇ ಹಂತದಲ್ಲಿ ಆರ್​.ವಿ. ರಸ್ತೆ ಬೊಮ್ಮಸಂದ್ರ ನಡುವಿನ ಮೆಟ್ರೋ ಹಳದಿ ಮಾರ್ಗ ಈಗಾಗಲೆ ಕಾರ್ಯಾಚರಣೆಯಲ್ಲಿದೆ. ಈ ಯೋಜನೆಯು ಸಂಪೂರ್ಣ ಯಶಸ್ಸು ಕಂಡಾಗ ಸಿಲ್ಕ್​ಬೋರ್ಡ್​ ಜಂಕ್ಷನ್​ ಸಂಚಾರ ಸಿಕ್ಕಿಗೆ ದೊಡ್ಡ ನಿರಾಳತೆ ಸಿಗಲಿದೆ.
ಮಾರೇನಹಳ್ಳಿ ಮತ್ತೆ ಸಮಸ್ಯೆ: ಸಿಲ್ಕ್​ಬೋರ್ಡ್​ ಜಂಕ್ಷನ್​ನ ಮತ್ತೊಂದು ಬದಿಯಲ್ಲೂ ವಾಹನ ಸಂಚಾರ ಪ್ರಾರಂಭವಾದರೆ, ಮಾರೇನಹಳ್ಳಿ ಸಮೀಪ ಟ್ರಾಫಿಕ್​ ಸಂಭವಿಸುವ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಇದರಿಂದಾಗಿ ಕನಕಪುರ ರಸ್ತೆ, ಜಯದೇವ ಆಸ್ಪತ್ರೆ ಕಡೆಗೂ ಹೆಚ್ಚಿನ ವಾಹನಗಳು ಮುಖ ಮಾಡುವ ಆತಂಕವಿದೆ.