ಸೀಮಂತ 
ಬೆಂಗಳೂರು

ಸಾಮೂಹಿಕ ಸೀಮಂತ, ಬಡ ಮಹಿಳೆಯರ ಆನಂದಬಾಷ್ಪ

ಯಾವುದೇ ಗರ್ಭಿಣಿಗೂ ಸೀಮಂತ ಹೀಗೆ ಮಾಡಿದರೆ ಚಂದ ಎಂಬ ಆಸೆ ಇರುತ್ತದೆ. ಆದರೆ, ಕೆಲವೊಮ್ಮೆ ಬಡತನ ಮತ್ತು ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಆ ಆಸೆ ನೆರವೇರುವುದಿಲ್ಲ. ಅಂತಹ ಎಂಟು ಬಡ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಆಯೋಜಿಸುವ ಮೂಲಕ ಬೆಂಗಳೂರಿನ ಕೆಲ ಸಮಾನ ಮನಸ್ಕರು ತಮ್ಮ ಮನಸ್ಸಿನ ಶ್ರೀಮಂತಿಕೆಯನ್ನು ಅನಾವರಣಗೊಳಿಸಿದ್ದಾರೆ. ಹೌದು, ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ಗರ್ಭಿಣಿಯರಿಗೆ ತಾಯ್ತನ ಆಚರಿಸುವ ಮತ್ತು ಭಾವನಾತ್ಮಕ ಮತ್ತು ಸಾಮಾಜಿಕ ಬೆಂಬಲವನ್ನು ವಿಸ್ತರಿಸುವ ಉದ್ದೇಶದಿಂದ ಇನ್ಫಿವಲ್ಡ್​ರ್ ಫೌಂಡೇಷನ್​ ಬೆಂಗಳೂರಿನ ಅಬಲಾಶ್ರಮದಲ್ಲಿ ಈ ಕಾರ್ಯಕ್ರಮ ಆಯೋಜಿಸಿತ್ತು.
ತಮಗೆ ಪರಿಚಯವೇ ಇಲ್ಲದ ಕೆಲ ಸಮಾನ ಮನಸ್ಕರು ತಮಗಾಗಿ ಸೀಮಂತ ಮಾಡಿದ ಕೆಲಸವನ್ನು ನೋಡಿ, ಸೀರೆಯುಟ್ಟು, ಸಿಂಗಾರಗೊಂಡು ಬಂದಿದ್ದ ಬಡ ಮಹಿಳೆಯರು ಕಂಬನಿಯಾದರು. ಸೀಮಂತ ಮಾಡಿದ ಇನ್ಫಿವರ್ಲ್ಡ್​ ಮತ್ತು ಇತರೆ ಸಂಘ-ಸಂಸ್ಥೆಗಳಿಗೆ ಧನ್ಯವಾದ ತಿಳಿಸಿದರು. ಈ ಕಾರ್ಯಕ್ರಮವು ಫಲಾನುಭವಿಗಳಿಗೆ ಸಂತೋಷ, ಘನತೆ ಹಾಗೂ ಸೇರಿದ ಭಾವನೆ ನೀಡಿದ್ದು, ನಿಜವಾಗಿಯೂ ಸ್ಮರಣೀಯ ಮತ್ತು ಪ್ರಭಾವಶಾಲಿ ಆಚರಣೆಯಾಗಿ ಮೂಡಿ ಬಂತೆಂದು ಎಂದು ಆಯೋಜಕರು ಸಂತಸ ವ್ಯಕ್ತಪಡಿಸಿದರು.