ಅಂತರಾಷ್ಟ್ರೀಯ ಖ್ಯಾತಿಯ ವಿದ್ವಾಂಸ ಟಿ. ವಿ. ರಾಮಪ್ರಸಾದ್ ಮತ್ತು ಪ್ರಖ್ಯಾತ ನೃತ್ಯವಿದುಷಿ ಇಂದಿರಾ ಕಡಾಂಬಿ
ಬೆಂಗಳೂರು : ಶುದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ಪರಂಪರೆಗೆ ಕಳೆದ ನಾಲ್ಕು ದಶಕಗಳಿಂದ ವಿಭಿನ್ನ ರೀತಿಯಲ್ಲಿ ಮಹೋನ್ನತ ಸೇವೆ ಸಲ್ಲಿಸುತ್ತಿದೆ ಬೆಂಗಳೂರಿನ ಅಂಬಾಲಂ ಫೌಂಡೇಶನ್. ಇದರ ರೂವಾರಿಗಳಾದ ಅಂತರಾಷ್ಟ್ರೀಯ ಖ್ಯಾತಿಯ ವಿದ್ವಾಂಸ ಟಿ. ವಿ. ರಾಮಪ್ರಸಾದ್ ಮತ್ತು ಪ್ರಖ್ಯಾತ ನೃತ್ಯವಿದುಷಿ ಇಂದಿರಾ ಕಡಾಂಬಿ ಅವರ ಕಲಾ ಸಮರ್ಪಣೆಯೂ ಮಹತ್ತರವಾದದ್ದು. ಚೆನ್ನೈ ನಂತರದಲ್ಲಿ ಈ ದಂಪತಿ ಬೆಂಗಳೂರಿನಲ್ಲಿ ನೆಲೆ ಗೊಂಡು ಇದೀಗ
ಆರಾಧನಾ ಶೀರ್ಷಿಕೆ ಅಡಿಯಲ್ಲಿ ಡಿ. 6 ಮತ್ತು 7ರಂದು ಕಲಾ ಸಮಾರಾಧನೆಯನ್ನು
ನಗರದ ಮಲ್ಲೇಶ್ವರಂ ನ ಸೇವಾ ಸದನ ಸಭಾಂಗಣದಲ್ಲಿ ಸಂಪನ್ನಗೊಳಿಸಲಿದ್ದಾರೆ. ಈ ಸಂದರ್ಭದಲ್ಲಿ ವಿಶ್ವ ಖ್ಯಾತಿಯ ವಿದ್ವಾಂಸರಿಂದ ಪ್ರಾತ್ಯಕ್ಷಿಕೆ, ಕಛೇರಿ ಮತ್ತು ಕಲಾ ಪ್ರಸ್ತುತಿಗಳನ್ನು ಆಯೋಜಿಸಿರುವುದು, ಹಿರಿಯರನ್ನು ಗೌರವಿಸುತ್ತಿರುವುದು ವಿಶೇಷವಾಗಿದೆ. ಎರಡೂ ದಿನದ ಕಾರ್ಯಕ್ರಮವನ್ನು ಗುರು ಗಳಾದ ರಾಜಂ ಮತ್ತು ಕಲಾನಿಧಿ ನಾರಾಯಣನ್ ಅವರಿಗೆ ಸಮರ್ಪಿಸಲಾಗುತ್ತಿರುವುದೂ ಧನ್ಯತೆಯ ಪ್ರತೀಕವಾಗಿದೆ.
ಕಾರ್ಯಕ್ರಮಗಳ ವಿವರ: ಡಿ. 6ರಂದು ಬೆಳಗ್ಗೆ 9:30ಕ್ಕೆ ಪ್ರಖ್ಯಾತ ಕಲಾವಿದೆ ಲಲಿತಾರಾಮ್ ರಾಮಚಂದ್ರನ್ ರವರು ಎಸ್. ರಾಜಮ್ ಅವರ ಲ್ಯಾಂಡಿಂಗ್ ಕಾಂಪೋಸಿಷನ್ಸ್ ಬಗ್ಗೆ ವಿಶೇಷ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಎರಡನೇ ಅವಧಿಯಲ್ಲಿ ಬೆಳಗ್ಗೆ 10. 15 ಕ್ಕೆ ಪ್ರೊ. ಡಾ. ಪರಿಮಳಾ ಗುರುಮೂರ್ತಿ ಅವರು ಎಸ್. ರಾಜಂ ಅವರ ಮ್ಯೂಸಿಕ್ ಅಂಡ್ ಪೆಡಿಗೋಗಿ ಬಗ್ಗೆ ಪ್ರೌಢ ಉಪನ್ಯಾಸ ನೀಡಲಿದ್ದಾರೆ . ಮೂರನೇ ಅವಧಿಯಲ್ಲಿ ಬೆಳಗ್ಗೆ 11ಕ್ಕೆ ಪ್ರಖ್ಯಾತ ಕಲಾವಿದ ಟಿ.ವಿ. ರಾಮಪ್ರಸಾದ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಚೇರಿಯನ್ನು ಪ್ರಸ್ತುತಪಡಿಸಲಿದ್ದಾರೆ . ಮಧ್ಯಾಹ್ನ 2 ಗಂಟೆಗೆ ಪ್ರೊ. ಪ್ರಮೀಳಾ ಗುರುಮೂರ್ತಿ ಅವರು ‘ ಪ್ರೊಫೆಸರ್ ಪಿಎಸ್ ಶ್ರೀನಿವಾಸರಾವ್ ಅವರು ಸಂಗೀತ ಸಂಯೋಜಿಸಿದ ಜಗದೇವ ಕವಿಯ ಗೀತ ಗೋವಿಂದ ( ಹಿಂದುಸ್ತಾನಿ ರಾಗದಲ್ಲಿ)’ ವಿಷಯ ಕುರಿತು ಪ್ರೌಢ ಉಪನ್ಯಾಸ ನೀಡಲಿದ್ದಾರೆ.
ಇದೇ ಅವಧಿಯಲ್ಲಿ ವಿದುಷಿ ಇಂದಿರಾ ಕಡಾಂಬಿಯವರು ಅಭಿನಯ ಕುರಿತಾದ ವಿಶೇಷ ಕಾರ್ಯಗಾರವನ್ನು ನಡೆಸಿಕೊಳ್ಳುತ್ತಿದ್ದಾರೆ. ಸಂಜೆ 5 ಗಂಟೆಗೆ ಪಂಡಿತ್ ಅಭಿಜಿತ್ ಶೆಣೈ ಮತ್ತು ತಂಡದವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿ ನೆರವೇರಲಿದೆ .ಸಂಜೆ 6:45 ಕ್ಕೆ ಪ್ರಖ್ಯಾತ ಕಲಾವಿದ ಆನೂರು ಅನಂತ ಕೃಷ್ಣ ಶರ್ಮ ಮತ್ತು ತಂಡದವರಿಂದ ಲಯ ಲಾವಣ್ಯ ವಿಶೇಷ ವಾದ್ಯ ವೈಭವ ರಂಜಿಸಲಿದೆ.
ಡಿ. 7ರಂದು ಬೆಳಗ್ಗೆ 9:30ಕ್ಕೆ ಜಯಂತಿ ಸುಬ್ರಮಣ್ಯಂ ಮತ್ತು ನಿತ್ಯ ಕಲ್ಯಾಣಿ ವೈದ್ಯನಾಥನ್ ಅವರಿಂದ ಪ್ರೌಢ ಚರ್ಚೆ ನಡೆಯಲಿದೆ .(ವಿಷಯ: ಬಾನಿ ಮತ್ತು ಅಭಿನಯ ಕ್ಷೇತ್ರಕ್ಕೆ ಕಲಾನಿಧಿ ನಾರಾಯಣನ್ ಅವರ ಕೊಡುಗೆ) ಬೆಳಗ್ಗೆ 10:45 ಕ್ಕೆ ರಮಾ ಭಾರದ್ವಾಜ ಮತ್ತು ಇಂದಿರಾ ಕಡಾಂಬಿ ಅವರು ಸಂಯುಕ್ತ ನೃತ್ಯ ಸಮರ್ಪಣೆಯನ್ನು ಮಾಡಲಿದ್ದಾರೆ.
ಅಂದು ಮಧ್ಯಾಹ್ನ 2ಗಂಟೆಗೆ ಪ್ರಖ್ಯಾತ ಕಲಾವಿದ ಟಿ.ವಿ. ರಾಮಪ್ರಸಾದ್ ಅವರು ಕೋಟೇಶ್ವರ ಅಯ್ಯರ್ ಅವರ ಸಂಯೋಜನೆಗಳ ಬಗ್ಗೆ ಕಾರ್ಯಾಗಾರವನ್ನು ನಡೆಸಿಕೊಡದಿದ್ದಾರೆ .
ಇದೆ ಅವಧಿಯಲ್ಲಿ ಕಲಾವಿದೆ ಇಂದಿರಾ ಕಡಾಂಬಿಯವರು ಅಭಿನಯ ಕುರಿತಾದ ಕಾರ್ಯಾಗಾರವನ್ನು ಸಮರ್ಪಣೆ ಮಾಡಲಿದ್ದಾರೆ. . ಸಂಜೆ 4 ಗಂಟೆಗೆ ಅಬಾಲಂ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಪ್ರಸ್ತುತಿ ನಡೆಯಲಿದೆ. ವಿದುಷಿ ಲಕ್ಷ್ಮೀ ಗೋವಿಂದನ್ ಅವರಿಂದ ಕೂಚಿ ಪುಡಿ ನೃತ್ಯ ನಂತರ ರಮಾ ವೈದ್ಯನಾಥನ್ ಅವರಿಂದ ಭರತನಾಟ್ಯ ಕಾರ್ಯಕ್ರಮವಿದೆ.
ಕಲಾವಿದರಿಗೆ ಸನ್ಮಾನ: ಈ ಬಾರಿ ಉತ್ಸವದಲ್ಲಿ ಭರತನಾಟ್ಯ ರಂಗದ ಹಿರಿಯ ಕಲಾವಿದೆ ಉಷಾ ದಾತಾರ್ ಮತ್ತು ಸಂಗೀತ ಕಲಾವಿದೆ ಮಹಾಲಕ್ಷ್ಮೀ ನಟರಾಜನ್, ತಬಲಾ ಕಲಾವಿದ ಜಗನ್ನಾಥ ಮತ್ತು ಸೌಂಡ್ ಡಿಸೈನರ್ ರವಿ ಅವರನ್ನು ಸನ್ಮಾನಿಸಲಾಗುತ್ತದೆ.
ಕರ್ನಾಟಕ ಶಾಸ್ತ್ರೀಯ ಸಂಗೀತದ ಪರಿಶುದ್ಧವಾದ ಪರಂಪರೆ ಉಳಿಯಬೇಕು. ಈ ನಿಟ್ಟಿನಲ್ಲಿ ಹೊಸ ಪೀಳಿಗೆಗೆ ಸಮರ್ಥ ಮಾರ್ಗದರ್ಶನವನ್ನು ನೀಡಬೇಕು. ವೇದಿಕೆ ಸಂಪ್ರದಾಯಗಳು ಉಳಿಯಬೇಕು. ಕಲಾ ಕ್ಷೇತ್ರದ ಹಿರಿಯರು ಮತ್ತು ಸಾಧಕರ ಸಾಧನೆಗಳನ್ನು ಪರಿಚಯಿಸಬೇಕು ಎಂಬ ನೀತಿನಲ್ಲಿ ಗದ್ದಲ ರಹಿತ ಸಂಗೀತವನ್ನು ಒಳಗಣ್ಣಿನಿಂದ ನೋಡುವ ಪ್ರವೃತ್ತಿಯನ್ನು ಹೆಚ್ಚಿಸಬೇಕು ಎಂಬ ನಿಟ್ಟಿನಲ್ಲಿ ಈ ಬಾರಿ ಹರಾಜುನ ಉತ್ಸವವನ್ನು ಹಮ್ಮಿಕೊಂಡಿದ್ದೇವೆ ...... ವಿದ್ವಾನ್ ರಾಮಪ್ರಸಾದ್ ಉತ್ಸವ ಆಯೋಜಕರು