ವಾಯು ಮಾಲಿನ್ಯ 
ಬೆಂಗಳೂರು

ರಾಜಧಾನಿಗೆ ವಾಯುಮಾಲಿನ್ಯ ಕಂಟಕ! | air pollution

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಕಳಪೆ ಸ್ಥಿತಿಗೆ ತಿರುಗಿದ ಗಾಳಿಯ ಗುಣಮಟ್ಟ
  • ಎಚ್ಚರಕೆಯಿಂದ ಇರಲು ತಜ್ಞರ ಸೂಚನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸ್ವಚ್ಛ, ಸುಂದರ ಪರಿಸರ ಹಾಗೂ ಶುದ್ಧ ಗಾಳಿಗೆ ಹಿಂದೊಮ್ಮೆ ಪ್ರಸಿದ್ಧವಾಗಿದ್ದ ಬೆಂಗಳೂರು, ಇದೀಗ ಕಳಪೆ ಗುಣಮಟ್ಟದ ಗಾಳಿಯಿಂದಾಗಿ ಸುದ್ದಿಗೆ ಗ್ರಾಸವಾಗಿದೆ. ಹೀಗೆಯೇ ಮುಂದುವರಿದರೆ, ಭವಿಷ್ಯದಲ್ಲಿ ಗಾಳಿಯ ಗುಣಮಟ್ಟ ಇನ್ನಷ್ಟು ಕುಸಿಯಲಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಸೂಚನೆ ನೀಡಿದ್ದಾರೆ.
ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ 2025ರ ಅತ್ಯಂತ ಕಳಪೆ ಗುಣಮಟ್ಟದ ಗಾಳಿ ಇದ್ದುದು ದಾಖಲಾಗಿದೆ. ಅದರ ಪ್ರಕಾರ, 170&-175 ಇದ್ದು, "ಅನಾರೋಗ್ಯಕರ ' ಮಟ್ಟದಲ್ಲಿದೆ. ಹಲವು ಭಾಗಗಳಲ್ಲಿ ಇದಕ್ಕೂ ಕಳಪೆ ಗುಣಮಟ್ಟದ ಗಾಳಿ ಕಂಡುಬಂದಿದೆ.
ಇತ್ತೀಚಿನ ವರದಿಗಳ ಪ್ರಕಾರ, ಈ ವರ್ಷ ಇನ್ನೂ ಗಾಳಿಯ ಗುಣಮಟ್ಟ ಹದಗೆಡಬಹುದು. ಕಲ್ಯಾಣನಗರದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕವು ಆಗಾಗ್ಗೆ 170 ದಾಟುತ್ತಿದ್ದು, ಇದು ನಗರದಲ್ಲೇ ಅತ್ಯಂತ ಕಳಪೆ ಮಟ್ಟದ ಗಾಳಿ ಇರುವ ಪ್ರದೇಶಗಳಲ್ಲಿ ಒಂದಾಗಿದೆ. ಸಂಚಾರಸಿಕ್ಕು ಅಧಿಕವಾಗಿರುವ ಸಿಲ್ಕ್​ಬೋರ್ಡ್​ ಜಂಕ್ಷನ್​, ನೈಟ್ರೋಜನ್​ ಡೈಆಕ್ಸೆ ೃಡ್​ ಮತ್ತು ಧೂಳಿನ ಕಣಗಳ ಅತಿದೊಡ್ಡ ಕೇಂದ್ರವಾಗಿದೆ. ಹೀಗಾಗಿ, ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ ಗಾಳಿಯ ಗುಣಮಟ್ಟ ಇನ್ನೂ ಹದಗೆಡಬಹುದೆಂದು ತಜ್ಞರು ಅಂದಾಜಿಸಿದ್ದಾರೆ.
ಧೂಳು ತುಂಬಿದ ರಸ್ತೆಗಳು, ಅತಿಯಾದ ವಾಹನಸಂಚಾರ, ನಿರಂತರ ನಿಮಾರ್ಣ ಕಾರ್ಯಗಳು ನಗರದಲ್ಲಿನ ವಾಯುಮಾಲಿನ್ಯವನ್ನು ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿವರ್ತಿಸಿವೆ. ಇದು ಕೇವಲ ಪರಿಸರ ಸಮಸ್ಯೆಯಲ್ಲ, ಆಡಳಿತಾತ್ಮಕ ಸವಾಲು ಕೂಡ ಆಗಿದೆ.
35 ವರ್ಷಗಳ ವಾಯು ಗುಣಮಟ್ಟದ ಅಂಕಿಅಂಶಗಳು ಒಂದೇ ಸಂಗತಿಯನ್ನು ಸೂಚಿಸುತ್ತವೆ. ವರ್ಷದಿಂದ ವರ್ಷಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ.
ಗಂಭೀರ ಪರಿಣಾಮ: ವೈದ್ಯರ ಪ್ರಕಾರ, ವಾಯುಮಾಲಿನ್ಯವು ಕೇವಲ ಕೆಮ್ಮು ಅಥವಾ ಉಸಿರಾಟದ ತೊಂದರೆಯಲ್ಲದೆ, ಹೃದಯ, ಸ್ನಾಯುಗಳು ಮತ್ತು ಮಿದುಳಿನ ಮೇಲೂ ಪರಿಣಾಮ ಬೀರುತ್ತಿದೆ. ಮಕ್ಕಳಲ್ಲಿ ಮತ್ತು ವೃದ್ಧ್ಧರಲ್ಲಿ ಅಲರ್ಜಿ, ಆಸ್ತಮಾ, ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು ತಮ್ಮ ಆರೋಗ್ಯ ಕಾಯ್ದುಕೊಳ್ಳಲು, ಮನೆಯಿಂದ ಹೊರಗೆ ಹೊರಟಾಗ ಮಾಸ್ಕ್​ ಧರಿಸುವುದರ ಜತೆಗೆ ಬೆಳಗ್ಗೆ ಸಂಜೆ ವೇಳೆಗೆ ಹೊರಗೆ ಹೋಗುವುದನ್ನು ಕಡಿಮೆ ಮಾಡುವಂತೆ ಸಲಹೆ ನೀಡಲಾಗಿದೆ.
ಸೆನ್ಸರ್​ ಮಾನಿಟರ್​ ಸ್ಥಾಪನೆಗೆ ಚಿಂತನೆ
ನಗರದ ವಾಯುಮಾಲಿನ್ಯ ನಿಯಂತ್ರಣಕ್ಕೆ ಜಿಬಿಎ ಪ್ರತಿ ವಾರ್ಡ್​ನಲ್ಲಿ ಗಾಳಿಯ ಗುಣಮಟ್ಟ ಸೂಚಿಸುವ ಸೆನ್ಸರ್​ ಮಾನಿಟರ್​ ಸ್ಥಾಪಿಸಲು ಚಿಂತನೆ ನಡೆಸುತ್ತಿದೆ. ಚಳಿಗಾಲದ ಬಳಿಕ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಹೆಚ್ಚಿದ್ದು, ನಗರದಾದ್ಯಂತ ವಾಯುಮಾಲಿನ್ಯ ಮೇಲ್ವಿಚಾರಣಾ ಮೂಲಸೌಕರ್ಯವನ್ನು ವಿಸ್ತರಿಸುವುದರಿಂದ ಸಮಸ್ಯೆ ಕುರಿತು ಎಚ್ಚರಿಕೆಯಿಂದ ಇರಬಹುದು ಎಂದು ಜಿಬಿಎ ಚಿಂತನೆ ನಡೆಸಿದೆ. ಕೇಂದ್ರಕ್ಕೆ ಸುಮಾರು 1 ರಿಂದ 3 ಲಕ್ಷ ರೂ. ವರೆಗೆ ರ್ಖಚಾಗಲಿದ್ದು, ಮೆಟ್ರೋ, ಬಿಎಂಟಿಸಿ, ವಾರ್ಡ್​ ಕಚೇರಿಗಳ ಸಮೀಪವೂ ಸೆನ್ಸರ್​ ಅಳವಡಿಸುವ ಯೋಜನೆ ಇದೆ ಎಂದು ತಿಳಿಸಿದೆ.
ವಿವಿಧ ಜಿಲ್ಲೆಗಳ ಅಂಕಿಅಂಶ
ರಾಜ್ಯದ ಇತರ ನಗರದಲ್ಲಿ ಇತ್ತೀಚಿನ ಗಾಳಿಯ ಗುಣಮಟ್ಟ ಸೂಚ್ಯಂಕ ಹೀಗಿದೆ. ಬೆಂಗಳೂರು& 175, ಮಂಗಳೂರು-&170, ಮೈಸೂರು &151, ಬೆಳಗಾವಿ &168, ಕಲಬುರಗಿ&90, ಶಿವಮೊಗ್ಗ &178, ಬಳ್ಳಾರಿ&189, ಹುಬ್ಬಳ್ಳಿ& 159, ಉಡುಪಿ& 166, ವಿಜಯಪುರ& 99

ಗಾಳಿ ಗುಣಮಟ್ಟ ಸೂಚ್ಯಂಕ

ಉತ್ತಮ 0-50

ಮಧ್ಯಮ 50-100
ಕಳಪೆ 100-150
ಅನಾರೋಗ್ಯಕರ 150-200
ಗಂಭೀರ 200- 300
ಅಪಾಯಕಾರಿ 300 -500+