ವಾಯು ಮಾಲಿನ್ಯ 
ಬೆಂಗಳೂರು

ವಾಯುಮಾಲಿನ್ಯ ನಿಯಂತ್ರಣಕ್ಕೆ ಸೆನ್ಸರ್​ ಮಾನಿಟರ್​ ಕೇಂದ್ರ ಸ್ಥಾಪನೆ | monitoring center

ಪ್ರಮುಖ ಮುಖ್ಯಾಂಶಗಳು

  • ಜಿಬಿಎ ಚಿಂತನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ವಾಯುಮಾಲಿನ್ಯದ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿರುವಾಗಲೇ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿನ ವಾಯುಮಾಲಿನ್ಯ ನಿಯಂತ್ರಣಕ್ಕೆ ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ದಿಟ್ಟ ಹೆಜ್ಜೆ ಇಟ್ಟಿದೆ. ಇದರ ಭಾಗವಾಗಿ, ಪ್ರತಿ ವಾರ್ಡ್​ನಲ್ಲಿ ಗಾಳಿಯ ಗುಣಮಟ್ಟ ಸೂಚಿಸುವ ಸೆನ್ಸರ್​ ಮಾನಿಟರ್​ ಕೇಂದ್ರ ಸ್ಥಾಪಿಸಲು ಚಿಂತನೆ ನಡೆಸುತ್ತಿದೆ.
ನಗರದಲ್ಲಿ ವಾಯು ಗುಣಮಟ್ಟದ ಕುರಿತು ಕಳವಳ ದಿನೇದಿನೆ ಹೆಚ್ಚುತ್ತಿದೆ. ಚಳಿಗಾಲದ ಬಳಿಕ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ. ಈ ಹಿನ್ನೆಲೆ ನಗರದಾದ್ಯಂತ ವಾಯುಮಾಲಿನ್ಯ ಮೇಲ್ವಿಚಾರಣಾ ಮೂಲಸೌಕರ್ಯವನ್ನು ವಿಸ್ತರಿಸುವುದರಿಂದ ಸಮಸ್ಯೆ ಕುರಿತು ಎಚ್ಚರಿಕೆವಹಿಸಲು ಅನುಕೂಲವಾಗುತ್ತದೆ ಎಂಬುದು ಜಿಬಿಎ ಉದ್ದೇಶ. ವಿಾನ, ತಂತ್ರಾನ ಮತ್ತು ನೀತಿ ಅಧ್ಯಯನ ಕೇಂದ್ರ (ಸಿಎಸ್​ಟಿಇಪಿ) ಜತೆಗಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಸೆನ್ಸರ್​ ಮಾನಿಟರ್​ ಸ್ಥಾಪನೆಯಿಂದ  ಗಾಳಿಯ ಗುಣಮಟ್ಟವನ್ನು ನೀಖರವಾಗಿ ತಿಳಿಯಬಹುದು. ಅಲ್ಲದೆ ಪಿಎಂ (ಗಾಳಿಯಲ್ಲಿ ಧೂಳಿನ ಪ್ರಮಾಣ) 2.5 ಮತ್ತು ಪಿಎಂ 10 ಮಟ್ಟವನ್ನು ಹೆಚ್ಚು ನಿಖರವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ವಾಯು ಮಾಲಿನ್ಯದ ತೀವ್ರತೆ ಮತ್ತು ಮೂಲಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಕೇಂದ್ರಗಳು ನಿರ್ಣಾಯಕ ಪಾತ್ರವಹಿಸಲಿವೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.

ಸೆನ್ಸರ್​ ಮಾನಿಟರ್​ ಕೇಂದ್ರ ಮೂಲಕ ನಗರದಲ್ಲಿ ವಾಯುಮಾಲಿನ್ಯ ಹೆಚ್ಚಿಗಿರುವ ಪ್ರದೇಶಗಳನ್ನು ಅಲ್ಲಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಲಾಗುವುದು. ಕೇಂದ್ರಕ್ಕೆ 1ರಿಂದ 3 ಲಕ್ಷ ರೂ.ವರೆಗೆ ರ್ಖಚಾಗಲಿದೆ. ಮೆಟ್ರೋ, ಬಿಎಂಟಿಸಿ, ವಾರ್ಡ್​ ಕಚೇರಿಗಳ ಸಮೀಪವೂ ಸೆನ್ಸರ್​ ಅಳವಡಿಸುವ ಉದ್ದೇಶವಿದೆ.