ಬೆಂಗಳೂರು ಟೆಕ್ಶೃಂಗದಲ್ಲಿ ಎಐ ಸ್ಮಾಟ್ಬಿನ್
- ನಿಯೋಸಾಪಿಯನ್ ಒಂದು ವಿನೂತನ ಆವಿಷ್ಕಾರ
- ಕಸ ವಿಲೇವಾರಿಗೆ "ಎಐ ಸ್ಮಾರ್ಟ್ಬಿನ್'
- ಶಿಕ್ಷಣಕ್ಕಾಗಿ ಸ್ಟಡಿ 100 ಆನ್ 100
"ಎಐ' ಎಂದು ಕೇಳಿದಾಗ ಮನುಷ್ಯ ಕುತೂಹಲದಿಂದ ನೋಡುವ ದಿನಗಳು ಅಂತ್ಯವಾಗುತ್ತಿದೆ. ಜೀವನದಲ್ಲಿ ಹಾಸುಹೊಕ್ಕಾಗುವ ದಿನಗಳು ಬರುತ್ತಿದೆ. ವಿವಿಧ ಆಯಾಮಗಳಲ್ಲಿ ವ್ಯಕ್ತಿಯ ಪ್ರಬಲ ಅಸ್ತ್ರವಾಗಿ ರೂಪುಗೊಳ್ಳುತ್ತಿರುವ ಈ ತಂತ್ರಜ್ಞಾನ ಭವಿಷ್ಯವನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರು ಟೆಕ್ಶೃಂಗದಲ್ಲಿ "ಎಐ ಇಂಪ್ಯಾಕ್ಟ್'ಗೆ ಆದ್ಯತೆ ನೀಡಿದ್ದು, ಎಐ ಆಧಾರಿತ ನೂತನ ಆವಿಷ್ಕಾರಗಳು, ಸ್ಟಾರ್ಟ್ಅಪ್ಗಳು ಜನಾಕರ್ಷಣೆಗೆ ಕಾರಣವಾಗಿದೆ. ಅದರಲ್ಲಿ ಪ್ರಮುಖ ಅಂಶಗಳು ಇಂತಿವೆ...
ಕೃತಕ ಬುದ್ಧಿಮತ್ತೆ (ಎಐ) ಮನುಷ್ಯನ ಎರಡನೇ ಬುದ್ಧಿಯ ರೀತಿ ಪರಿಗಣನೆಯಾಗುತ್ತಿದೆ ಎಂದರೆ ತಪ್ಪಾಗಲಾರದು. ಅಂತಹ ಎಐ ಟೂಲ್ಗಳಲ್ಲಿ ನಿಯೋಸಾಪಿಯನ್ ಒಂದು ವಿನೂತನ ಆವಿಷ್ಕಾರ. ಇದೊಂದು ಪೆನ್ಡೆವ್ ಮಾದರಿಯಲ್ಲಿದ್ದು, ಕುತ್ತಿಗೆ ಚೈನ್ಗೆ ಹಾಕಿಯೋ ಅಥವಾ ಕೀಚೈನ್ ಆಗಿಯೇ ಬಳಸಬಹುದು. ನಿಯೋಸಾಪಿಯನ್ ಆ್ಯಪ್ಗೆ ಇದನ್ನು ಬ್ಲೂಟೂತ್ ಮೂಲಕ ಸಂಪರ್ಕ ಮಾಡಿದರೆ, ದಿನನಿತ್ಯ ನಡೆಯುವ ಸಭೆಗಳು ಮತ್ತು ಸಂಭಾಷಣೆಗಳನ್ನು ಸೆರೆಹಿಡಿಯಲು ಅನುಕೂಲವಾಗುತ್ತದೆ. ನಿಮಗೆ ಬೇಕಾದ ವಿಷಯಗಳನ್ನು ಸಂಗ್ರಹಿಸಲು, ಪ್ರಶ್ನೆಗಳನ್ನು ಕೇಳಲು, ಸಾರಾಂಶ ಬರೆಯಲು, ಕೀ ಪಾಯಿಂಟ್ ಬರೆಯಲು ಎಲ್ಲವೂ ಇದರಿಂದ ಸಾಧ್ಯವಿದೆ. ಒಮ್ಮೆ ಚಾರ್ಜ್ ಮಾಡಿದರೆ 16 ಗಂಟೆ ಬಳಸಬಹುದು. 140 ಭಾಷೆಗಳನ್ನು ಗ್ರಹಿಸಬಲ್ಲ ಡಿವೈಸ್ ಇದಾಗಿದೆ. ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಎಂಬುದು ವಿಶೇಷ. ಅಲ್ಲದೆ, ದೇಶಾದ್ಯಂತ ಬೇಡಿಕೆ ಇದ್ದು, ಪೂರ್ತಿ ನಿರ್ಮಾಣ ಬೆಂಗಳೂರಿನಲ್ಲೇ ನಡೆಯುತ್ತದೆ ಎಂದು ನಿಯೋಸಾಪಿಯನ್ ಸಂಸ್ಥೆಯ ರಜತ್ ಮಾಹಿತಿ ನೀಡಿದ್ದಾರೆ.
2. ಸ್ವಚ್ಛತೆಗೆ ಎಐ ಸ್ಮಾರ್ಟ್ಬಿನ್
ನಗರದಲ್ಲಿ ತ್ಯಾಜ್ಯ ಮರುಬಳಕೆಯ ಸಾಮರ್ಥ್ಯ ಎಷ್ಟೇ ಇದ್ದರೂ ಕಸ ವಿಂಗಡಣೆ ಸಮಸ್ಯೆಯಿಂದ ತ್ಯಾಜ್ಯ ವಸ್ತುಗಳ ಮರುಬಳಕೆಯ ಪ್ರಮಾಣ ಕಡಿಮೆಯೇ ಇದೆ. "ಎಐ ಸ್ಮಾರ್ಟ್ಬಿನ್' ಕೇವಲ ಕಸ ವಿಲೇವಾರಿಯನ್ನಷ್ಟೇ ನಡೆಸದೆ, ಆದಾಯದ ಮೂಲವಾಗಿರುವುದು ವಿಶೇಷ. ಸ್ವಚ್ಛ ಸಮಾಜದ ಗುರಿ ಹೊಂದಿರುವ ಈ ಸಂಸ್ಥೆಯು ಆರು ಭಾಗಗಳಿರುವ ವಿಶೇಷ ಕಸದಡಬ್ಬಿಯನ್ನು ತಯಾರಿಸಿದೆ. ಅದಕ್ಕೆ ಆರು ವೃತ್ತಾಕಾರದ ಮುಚ್ಚಳಗಳಿವೆ. ಎಲ್ಲವೂ ಲಾಕ್ ಆಗಿರುತ್ತದೆ. ಯಾವುದೇ ಮುಚ್ಚಳವನ್ನು ಜನರಿಗೆ ಕೈಯಾರೆ ತೆರೆಯಲು ಸಾಧ್ಯವಿಲ್ಲ. ಕಸವನ್ನು ಬಿಸಾಡಲು ಬಯಸುವವರು ಬಿನ್ನ ಮೇಲ್ಭಾಗದಲ್ಲಿರುವ ಕ್ಯಾಮರಾ ಹಾಗೂ ಸೆನ್ಸಾರಿನ ಹತ್ತಿರ ಕಸವನ್ನು ತೋರಿಸಬೇಕು. ಕ್ಯಾಮರಾ ಮತ್ತು ಸೆನ್ಸಾರ್ಗಳು ಗುರುತುಹಿಡಿದು ಆಯಾ ಬಿನ್ಗೆ ಹಾಕುತ್ತದೆ. ಡಬ್ಬಿ ತುಂಬಿದಾಗ ಸಿಬ್ಬಂದಿಗೆ ಸೂಚನೆ ಹೋಗುತ್ತದೆ. ಸಿಬ್ಬಂದಿಗೆ ಮಾತ್ರ ಮತ್ತೆ ಅದನ್ನು ಸ್ಥಳಾಂತರಿಸಲು ಸಾಧ್ಯವಿದೆ ಎಂದು "ಎಐ ಸ್ಮಾರ್ಟ್ಬಿನ್ ಸಂಸ್ಥೆ ಪಾಲುದಾರ ಅವಿ ಮಹಾಜನ್ ತಿಳಿಸಿದ್ದಾರೆ.
ಬಿನ್ ಹಾಗೂ ಕ್ಯಾಮರಾ ಮಧ್ಯೆ ಒಂದು ಡಿಸ್ಪ್ಲೇ ನೀಡಲಾಗಿದ್ದು, ಅದರಲ್ಲಿ ಸೂಚನೆಗಳ ಜತೆ ಜಾಹೀರಾತುಗಳನ್ನು ನೀಡಲು ಅವಕಾಶವಿದೆ. ಇದರಿಂದ ಆದಾಯವನ್ನು ಗಳಿಸಬಹುದು. ಬೇರೆಬೇರೆ ಮಾದರಿಯ "ಎಐ ಸ್ಮಾರ್ಟ್ಬಿನ್'ಗಳಿದ್ದು 30 ಸಾವಿರ ರೂ.ನಿಂದ 2 ಲಕ್ಷ ರೂ. ವರೆಗೆ ಬೆಲೆ ಬಾಳುತ್ತದೆ.
3. ಉಪಯೋಗಿ "ಸಿ 4 ಪ್ಲಸ್'
ಸಾಮಾಜಿಕ ಜಾಲತಾಣದ ನಿರ್ವಹಣೆ ಬಹುತೇಕರಿಗೆ ತಲೆನೋವಾಗಿದ್ದರೆ ಇಲ್ಲಿದೆ ಎಐ ಪರಿಹಾರ. "ಸಿ 4 ಪ್ಲಸ್' ಸಂಸ್ಥೆ ಸಂಪೂರ್ಣ ಸಾಮಾಜಿಕ ಜಾಲತಾಣ ನಿರ್ವಹಣೆಯ ಎಐ ಟೂಲ್ ಅಭಿವೃದ್ಧಿಪಡಿಸಿದ್ದು, ಪೋಸ್ಟ್ ತಯಾರಿಕೆ, ಕಂಟೆಂಟ್ ಕ್ರಿಯೇಷನ್ ಮಾತ್ರವಲ್ಲ ೇಸ್ಬುಕ್, ಇನ್ಸ್ಟಾಗ್ರಾಂ, ಎಕ್ಸ್ ಇತ್ಯಾದಿಗಳಲ್ಲಿ ಪ್ರಚಾರದ ಕೆಲಸವೂ ಇದೇ ಮಾಡುತ್ತದೆ. ಶೇ.90 ಕೆಲಸಗಳನ್ನು ಎಐ ನಿರ್ವಹಿಸುತ್ತದೆ. ಉಳಿದಂತೆ ಶೇ.10 ಬಳಕೆದಾರ ಸೂಚನೆ ನೀಡಬಹುದು. ವಾಣಿಜ್ಯ ಉಪಯೋಗಕ್ಕೆ ಅನುಕೂಲವಾಗಿದ್ದು, ಪ್ರತಿಸ್ಪರ್ಧಿಯ ಚಟುವಟಿಕೆಗಳ ಮೇಲೂ ನಿಗಾ ಇಡುತ್ತದೆ. ಈ ಹಿಂದಿನ ಪೋಸ್ಟ್ಗಳಿಗೆ ಏನಾದರೂ ನಕಾರಾತ್ಮಕ ಸ್ಪಂದನೆ ಬಂದಿದ್ದರೆ ಅದೂ ತಿಳಿಸುತ್ತದೆ. ಯಾವಾಗ ಯಾವ ಪೋಸ್ಟ್ ಹೇಗೆ ಹಾಕಬೇಕು ಎಂದು ಮಾರ್ಗದರ್ಶನ ನೀಡುತ್ತದೆ ಎಂದು "ಸಿ 4 ಪ್ಲಸ್' ಸಂಸ್ಥಾಪಕ ಮಾನಸ್ ತಿಳಿಸಿದ್ದಾರೆ.
4. ಮಕ್ಕಳಿಗಾಗಿ ಸ್ಟಡಿ 100 ಆನ್ 100
ಮಕ್ಕಳಿಗೆ ಎಐ ತಂತ್ರಜ್ಞಾನದ ಅರಿವು ಮುಖ್ಯ ಎನ್ನುವುದಕ್ಕಿಂತ ಅದನ್ನು ಬಳಸಿ ಜ್ಞಾನ ವೃದ್ಧಿಸಲು ಪಳಗುವುದು ಮುಖ್ಯ ಎನ್ನುತ್ತದೆ ಸ್ಟಡಿ 100 ಆನ್ 100 ಸಂಸ್ಥೆ. ಶಿಕ್ಷಣಕ್ಕೆ ಅನುಕೂಲವಾಗುವ ಎಐ ಟೂಲ್ ಇದಾಗಿದ್ದು, ಮಕ್ಕಳ ಓದಿಗೆ ಚಿತ್ರ, ಧ್ವನಿ ಹಾಗೂ ಪಠ್ಯಗಳು ಇಲ್ಲಿ ಲಭ್ಯವಿದೆ. ವಾರ್ಷಿಕವಾಗಿ 800 ರೂ. ಕೊಟ್ಟು ಚಂದದಾರರಾದರೆ ಮಕ್ಕಳಿಗೆ ಉತ್ತಮ ಮಾರ್ಗದರ್ಶಿಯಾಗಿದೆ. ಅಂತೆಯೇ ನೀಟ್, ಜೆಇಇ ಮುಂತಾದ ಸ್ಪರ್ಧಾತ್ಮಕ ಪರೀೆಗಳಿಗೆ ತರಬೇತಿ, ಪಠ್ಯವನ್ನೂ ನೀಡುತ್ತದೆ. ಇದಕ್ಕೆ 8,000 ರೂ. ತಗಲುತ್ತದೆ. ಲಾಂತರ ರೂ. ಶಿಕ್ಷಣಕ್ಕೆ ಸುರಿಯುವ ಬದಲು ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದ ಎಲ್ಲ ಮಕ್ಕಳಿಗೂ ಶಿಕ್ಷಣ ಲಭಿಸಲಿ ಎಂಬುದು ನಮ್ಮ ಧ್ಯೇಯ ಎನ್ನುತ್ತಾರೆ ಸ್ಟಡಿ 100 ಆನ್ 100 ಸಂಸ್ಥೆಯ ಶ್ರೀನಿವಾಸ್.