ಯಕ್ಷಗಾನ 
ಬೆಂಗಳೂರು

ಯಕ್ಷಗಾನಕ್ಕೆ ಬರಲಿವೆ ವಿಶೇಷ ಪರೀಕ್ಷೆ!

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಮಂಗಳೂರು ವಿವಿಯಲ್ಲಿ ಪಠ್ಯಕ್ರಮ ಸಿದ್ಧತೆ
  • ಒಂದು ವರ್ಷದಲ್ಲಿ ಯೋಜನೆ ಸಾಕಾರಗೊಳ್ಳುವ ನಿರೀಕ್ಷೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು


ಭರತನಾಟ್ಯಂ, ಸಂಗೀತ ಇತ್ಯಾದಿ ಕಲೆಗಳ ರೀತಿಯಲ್ಲೇ ಕರಾವಳಿಯ ಗಂಡುಕಲೆ ಎನಿಕೊಂಡ ಯಕ್ಷಗಾನಕ್ಕೂ ಶೈಕ್ಷಣಿಕ ಆಯಾಮ ಕೊಡುವ ಕೆಲಸಗಳು ಕೆಲ ವರ್ಷಗಳಿಂದ ನಡೆಯುತ್ತಿದ್ದು, ಮಂಗಳೂರು ವಿಶ್ವವಿದ್ಯಾಲಯ ಈ ಯೋಜನೆಯನ್ನು ನಿಷ್ಠೆಯಿಂದ ಮಾಡುತ್ತಿದೆ. ಯಕ್ಷಗಾನದ ಬಗ್ಗೆ ವಿವಿಧ ವಿಶೇಷ ಪರೀ

ಕ್ಷೆ

ಗಳನ್ನು ತರಲು ವಿವಿ ತೆರೆಯ ಮರೆಯಲ್ಲೇ ಭಾರಿ ಸಿದ್ಧತೆ ನಡೆಸುತ್ತಿದೆ. 

ಮಂಗಳೂರು ವಿವಿ ಕುಲಪತಿ ಹಾಗೂ ಡಾ. ಪಿ.ದಯಾನಂದ ಪೈ ಶ್ರೀ ಪಿ. ಸತೀಶ್​ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಮುತುವರ್ಜಿಯಲ್ಲಿ ಯೋಜನೆ ಪ್ರಗತಿಯಲ್ಲಿದ್ದು, ಹಲವು ಯಕ್ಷಗಾನ ವಿದ್ವಾಂಸರು, ಹಿರಿಯ ಕಲಾವಿದರ ಸಹಕಾರದೊಂದಿಗೆ ಪಠ್ಯಕ್ರಮ, ಪರೀ

ಕ್ಷೆ

 ಇತ್ಯಾದಿ ವಿಷಯಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಪ್ರಾಥಮಿಕ ಹಂತದ ಪಠ್ಯಕ್ರಮಗಳು ಸಿದ್ಧಗೊಂಡಿದ್ದು, ಒಂದು ವರ್ಷದಲ್ಲಿ ಯಕ್ಷಗಾನಕ್ಕೆ ಅಕಾಡೆಮಿಕ್​ ಟಚ್​ ಸಿಗುವ ಸಾಧ್ಯತೆಗಳಿವೆ.

ಜೂನಿಯರ್​, ಸೀನಿಯರ್​, ವಿದ್ವತ್​ ಪೂರ್ವ ಮತ್ತು ವಿದ್ವತ್​ ಅಂತಿಮ ಈ ನಾಲ್ಕು ಹಂತಗಳಲ್ಲಿ ಯಕ್ಷಗಾನ ಪಠ್ಯಕ್ರಮ ಸಿದ್ಧಪಡಿಸಲಾಗುತ್ತಿದ್ದು, ಮೊದಲಿಗೆ ಹಿಮ್ಮೇಳ, ಪೂರ್ವರಂಗ, ಪ್ರಾಥಮಿಕ ಹೆಜ್ಜೆಗಳು ಇತ್ಯಾದಿ ಪಠ್ಯಕ್ರಮಗಳ ನಿರ್ಮಾಣ ಅಂತಿಮ ಹಂತದಲ್ಲಿದೆ.
ಶೈಕ್ಷಣಿಕ ಪಠ್ಯಕ್ರಮ ಯಾಕೆ?: 
ಯಕ್ಷಗಾನ ಕ್ಷೇತ್ರವು ಬಹಳ ವಿಶಾಲವಾಗಿದ್ದು, ಇದರ ಕಲಿಕೆ, ಅಭ್ಯಾಸ ಹಾಗೂ ಪ್ರದರ್ಶನಗಳು ವೈವಿಧ್ಯಮಯವಾಗಿದೆ. ಯಕ್ಷಗಾನದ ಎರಡು ಗುರುಗಳು ಮಾಡಿದ ಪಾಠಗಳು ಅಪಸ್ವಲ್ಪ ವ್ಯತ್ಯಾಸ್ಥವಾಗಿಯೇ ಇರುತ್ತದೆ. ಇದರಿಂದ ಕಲೆಗೆ ಕೆಡುಕೇನಿಲ್ಲವಾದರೂ, ಮುಂದಿನ ತಲೆಮಾರಿಗೆ ಯಕ್ಷಗಾನದಲ್ಲಿ ಏಕರೂಪವಾದ ಪಠ್ಯಕ್ರಮವನ್ನು ಒದಗಿಸುವ ಮೂಲಕ ಯಕ್ಷಗಾನ ಕಲೆಯ ಸ್ಟ್ಯಾಂಡಡ್​​ ಹೆಚ್ಚಿಸುವ ಕಾಯಕಕ್ಕೆ ವಿವಿ ಮುಂದಾಗಿರುವುದು ಶ್ಲಾನೀಯ. ಈ ಕೆಲಸಕ್ಕೆ ಯಕ್ಷಗಾನ ಕ್ಷೇತ್ರ ಅಗ್ರಗಣ್ಯರೇ ಸಾಥ್​ ನೀಡಿರುವುದು ಈ ಯೋಜನೆಯ ವೇಗವನ್ನು ಹೆಚ್ಚಿಸಿದೆ. ಮಂಗಳೂರು ವಿವಿ ನೇತೃತ್ವದಲ್ಲಿ ಈಗಾಗಲೇ ಹೈಸ್ಕೂಲ್​ ಹಾಗೂ ಪದವಿ ತರಗತಿಗಳಲ್ಲಿ ತುಳು ಭಾಷೆಯನ್ನು ಕೋರ್ಸ್​ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಈ ಯೋಜನೆಯು ಕರಾವಳಿಯ ಕಲೆಗೆ ಇನ್ನಷ್ಟು ಪುಷ್ಠಿ ನೀಡುವುದರಲ್ಲಿ ಸಂಶಯವಿಲ್ಲ.
ಅಕಾಡೆಮಿಕ್​ ಅಧ್ಯಯನ ಇದೇ ಮೊದಲು:
ಪ್ರಾಚಿನ ಕಲೆಯಾದ ಯಕ್ಷಗಾನ ಮುಖ್ಯವಾಗಿ ತೆಂಕು ಮತ್ತು ಬಡಗು ಎಂದು ಎರಡು ವಿಭಾಗಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಯಕ್ಷಗಾನದ ಹುಟ್ಟಿನಿಂದ ತೊಡಗಿ ಇಲ್ಲಿ ವರೆಗಿನ ಸಾಧನೆಗಳ ಬಗ್ಗೆ ಅಕಾಡೆಮಿಕ್​ ರೀತಿಯಲ್ಲಿ ಸಮಗ್ರ ಅಧ್ಯಯನ ಇದುವರೆಗೆ ನಡೆದಿಲ್ಲ. ಹಾಗಾಗಿ ಇದು ಕೂಡ ಯಕ್ಷಗಾನದ ತವರು ನೆಲ ಕರಾವಳಿಯಲ್ಲೇ ಅಕಾಡೆಮಿಕ್​ ಆಗಿ ಅಧ್ಯಯನ ನಡೆಸಿದರೆ ಹೆಚ್ಚು ಅರ್ಥಪೂರ್ಣ ಎಂಬುದು ಯಕ್ಷಗಾನ ಅಭಿಮಾನಿಗಳ ಅಭಿಪ್ರಾಯವಾಗಿದೆ.

ತಜ್ಞರ ಜತೆ ಸಮಾಲೋಚನೆ 


ಕರಾವಳಿ ಯಕ್ಷಗಾನದ ಪ್ರದೇಶವಾದ್ದರಿಂದ ಯಕ್ಷಗಾನಕ್ಕೊಂದು ಕೊಡುಗೆ ನೀಡಬೇಕು ಎಂಬುದು ವಿವಿಯ ಸಂಕಲ್ಪ. ಸಂಗೀತ, ನೃತ್ಯ ವಿಶೇಷ ಪರೀೆ ಮಾದರಿಯಲ್ಲೇ ಯಕ್ಷಗಾನಕ್ಕೂ ಶೈಕ್ಷಣಿಕ ಆಯಾಮ ಒದಗಿಸುವುದು ನಮ್ಮ ಉದ್ದೇಶ. ಇದಕ್ಕಾಗಿ ಯಕ್ಷಗಾನದ ಹಿರಿಯ ಕಲಾವಿದರು, ತಜ್ಞರ ಜತೆ ಸಮಾಲೋಚನೆ ನಡೆಸಿ ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ಕುಲಪತಿ ಪ್ರೊ.ಪಿ.ಎಲ್​. ಧರ್ಮ ತಿಳಿಸಿದ್ದಾರೆ.

ಯಕ್ಷಗಾನ ಆಳ-ಅಗಲ


ಈಗಾಗಲೇ ಯಕ್ಷಗಾನ ಕ್ಷೇತ್ರದಲ್ಲಿ 50ಕ್ಕೂ ಅಧಿಕ ವೃತ್ತಿಪರ ಮೇಳಗಳು ತಿರುಗಾಟ ನಡೆಸುತ್ತಿವೆ. ಇದಲ್ಲದೆ ಅನೇಕ ಸಂಘ&ಸಂಸ್ಥೆಗಳು ಹವ್ಯಾಸಿಯಾಗಿ ಪ್ರದರ್ಶನ ನೀಡುತ್ತಿವೆ. ಬಾಲಕರಿಂದ ತೊಡಗಿ ಮಹಿಳೆಯರು ಕೂಡ ಈಗ ಯಕ್ಷಗಾನ ಕಲಾವಿದರಾಗಿದ್ದಾರೆ. ಶಾಲಾ ಕಾಲೇಜುಗಳಲ್ಲೂ ಸಾವಿರಾರು ಮಕ್ಕಳಿಗೆ ಯಕ್ಷಗಾನ ತರಬೇತಿ ನಡೆಯುತ್ತಿದ್ದು, ದೇಶ, ವಿದೇಶಗಳಲ್ಲೂ ಯಕ್ಷಗಾನ ತನ್ನ ಛಾಪನ್ನು ಮೂಡಿಸಿದೆ. ಇಂತಹ ಕಲೆಗೆ ಶೈಕ್ಷಣಿಕ ಆಯಾಮ ಲಭಿಸಬೇಕಿರುವುದು ಅನಿವಾರ್ಯ.

ಯಕ್ಷಗಾನದ ಪರಂಪರೆಯ ವಿವಿಧ ಶೈಲಿಗಳಲ್ಲಿ, ಕೆಲವು ವಿಭಾಗಗಳಲ್ಲಿ ಸಣ್ಣಪುಟ್ಟ ಗೊಂದಲಗಳು ಇವೆ. ಪರಂಪರೆ ಹಾಗೂ ಹೊಸತನಕ್ಕೆ ಚ್ಯುತಿ ಬಾರದ ರೀತಿ ಒಂದು ರ್ನಿಧಿಷ್ಟ ಚೌಕಟ್ಟು ನೀಡುವ ನಿಟ್ಟಿನಲ್ಲಿ ಯಕ್ಷಗಾನದ ಪಠ್ಯ ರಚನೆ ನಡೆಯುತ್ತಿದೆ. ಯಕ್ಷಗಾನದ ವಿದ್ವಾಂಸರ ಅಭಿಪ್ರಾಯ ಆಧಾರದಲ್ಲಿ ಪಠ್ಯಗಳನ್ನು ಜೋಡಿಸಲಾಗುತ್ತಿದೆ. ಯೋಜನೆ ಸಾಕಾರಗೊಂಡರೆ 14 ವರ್ಷದ ಒಬ್ಬ ಹುಡುಗನಿಗೆ ಜೂನಿಯರ್​ ಪರೀಕ್ಷೆ ಬರೆಯಬಹುದಾಗಿದೆ. ಸೀನಿಯರ್​ ಹಾಗೂ ವಿದ್ವತ್​ ಪರೀಕ್ಷೆಗಳ ಪಠ್ಯಕ್ರಮವೂ ನಿರ್ಮಾಣ ಹಂತದಲ್ಲಿದೆ.

— ಸತೀಶ್​ ಶೆಟ್ಟಿ ಪಟ್ಲ, ಯಕ್ಷಗಾನ ಭಾಗವತರು


ಇದು ಯಕ್ಷಗಾನವನ್ನು ಶೈಕ್ಷಣಿಕ ಆವರಣಕ್ಕೆ ತರುವ ಪ್ರಯತ್ನವಾಗಿದೆ. ವಿಶೇಷ ಪರೀಕ್ಷೆಗಳನ್ನು ವಿವಿಯ ವೆಬ್​ಸೈಟ್​ ಮೂಲಕ ಪ್ರಕಟಗೊಳಿಸಲಿದ್ದು, ಯಕ್ಷಗಾನ ಅಭ್ಯಾಸ ಕೇಂದ್ರಗಳಿಗೆ ಪಠ್ಯಕ್ರಮಗಳನ್ನು ನೀಡಲಾಗುತ್ತದೆ. ವರ್ಷದಲ್ಲಿ ಒಮ್ಮೆ ವಿವಿಧ ವಿಭಾಗಾವಾರು ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಳ್ಳಬಹುದಾಗಿದೆ. ಪಠ್ಯಕ್ರಮ ರೂಪೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದೆ. ಒಂದು ವರ್ಷದಲ್ಲಿ ಯೋಜನೆ ಶುರುವಾಗುವ ನಿರೀಕ್ಷೆ ಇದೆ.

— ಡಾ. ಧನಂಜಯ ಕುಂಭ್ಳೆ, ನಿರ್ದೇಶಕರು, ಡಾ. ಪಿ.ದಯಾನಂದ ಪೈ ಶ್ರೀ ಪಿ. ಸತೀಶ್​ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳಗಂಗೋತ್ರಿ