ಹೂಡಿ ಗ್ರಾಮದ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿಯ ಬ್ರಹ್ಮರಥೋತ್ಸವ ಪ್ರಯುಕ್ತ ನಡೆದ ಗ್ರಾಮದೇವತೆಗಳ ಪಲ್ಲಕಿ ಉತ್ಸವ ಹಾಗೂ ಶ್ರೀ ದ್ರೌಪದಮ್ಮ ಹೂವಿನ ಕರಗ ಅದ್ದೂರಿಯಾಗಿ ಜರಗಿತು.
ಹೂಡಿ ಗ್ರಾಮದ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿಯ ಬ್ರಹ್ಮರಥೋತ್ಸವ ಪ್ರಯುಕ್ತ ನಡೆದ ಗ್ರಾಮದೇವತೆಗಳ ಪಲ್ಲಕಿ ಉತ್ಸವ ಹಾಗೂ ಶ್ರೀ ದ್ರೌಪದಮ್ಮ ಹೂವಿನ ಕರಗ ಅದ್ದೂರಿಯಾಗಿ ಜರಗಿತು.14 ಗ್ರಾಮ ದೇವತೆಗಳ ಪಲ್ಲಕ್ಕಿಗಳು ಮೆರವಣಿಗೆಯಲ್ಲಿ ಪಾಲ್ಗೋಂಡಿದ್ದು ಗ್ರಾಮದೆಲ್ಲೆಡೆ ಸಂಭ್ರಮ ಮುಗಿಲು ಮುಟ್ಟಿತ್ತು.
ಶ್ರೀ ಮಹಾಗಣಪತಿ, ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ, ಶ್ರೀ ಭೈರವೇಶ್ವರ ಸ್ವಾಮಿ , ಶ್ರೀ ಬಸವೇಶ್ವರ ,ಶ್ರೀ ಸುಬ್ರಹ್ಮಣ್ಯ ಸ್ವಾಮಿ , ಶ್ರೀ ಆಂಜನೇಯ ಸ್ವಾಮಿ, ಶ್ರೀ ವೆಂಕಟರಮಣ ಸ್ವಾಮಿ, ಶ್ರೀ ಅಣ್ಣಮ್ಮ ಮತ್ತು ಮದ್ದೂರಮ್ಮ ದೇವಿ ಸೇರಿದಂತೆ ಇತರೆ ಗ್ರಾಮ ದೇವತೆಗಳ ಪಲ್ಲಕ್ಕಿಗಳು ವಿಶೇಷ ಅಲಂಕಾರಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದು, ಭಕ್ತಾದಿಗಳ ಗಮನ ಸೆಳೆದವು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕಿಗಳ ಮೆರವಣಿಗೆ ಭಕ್ತಿ ಭಾವದಿಂದ ಸಾಗಿದ್ದು, ನಾದಸ್ವರ, ಗಾರಡಿ ಬೊಂಬೆ ಹಾಗೂ ಡೊಳ್ಳುಗಳ ಸದ್ದಿನ ನಡುವೆ ಭಕ್ತರು ಹಾಡುತ್ತಾ ಉತ್ಸವವನ್ನು ಮತ್ತಷ್ಟು ವೈಭವಮಯಗೊಳಿಸಿದರು.ಪಲ್ಲಕಿ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವರುಗಳ ದರ್ಶನ ಪಡೆದು ಆಶೀರ್ವಾದ ಪಡೆದರು. ಗ್ರಾಮದಲ್ಲಿ ಹಬ್ಬದ ವಾತಾವರಣ ನೆಲೆಸಿದ್ದು, ಎಲ್ಲೆಡೆ ಭಕ್ತಿಭಾವದ ಸಂಭ್ರಮ ಕಣ್ಣಿಗೆ ಕಂಡಿತು.
ಗ್ರಾಮದ ಮುಖಂಡರಾದ ಎಚ್ ಎಸ್ ಪಿಳ್ಳಪ್ಪ, ಎಚ್ ಡಿ ಶ್ರೀನಿವಾಸ ರೆಡ್ಡಿ, ಎಚ್ ವಿ ಮಂಜುನಾಥ್, ಹೆಚ್ ಬಿ ಅನುಪ್ ಕುಮಾರ್, ವಿಶ್ವನಾಥ್ , ಮೋಹನ್, ನರೇಂದ್ರಬಾಬು, ಮಹೇಂದ್ರ ಬಾಬು, ಎಲ್ ಟಿ ಟಿ ಶ್ರೀನಿವಾಸ್, ಎಚ್ ಎಸ್ ಪವನ್ ರೆಡ್ಡಿ, ಎಚ್‌ಎಸ್ ಮಹೇಶ್, ಎಚ್ ವಿಜಯ್ ಗೌಡ, ಜೆ ರಾಮಚಂದ್ರ ರೆಡ್ಡಿ, ಹೆಚ್.ಆರ್. ಶ್ರೀನಿವಾಸರೆಡ್ಡಿ ಮತ್ತಿತರರಿದ್ದರು.