ವಚನ ಶ್ರಾವಣ 19ನೇ ದಿನ ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೀರಶೈವ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ಶಿವಕುಮಾರ್, ಶಿಕ್ಷಕ ನಿರಂಜನ್, ಸೌಮ್ಯಾ ಇದ್ದರು.
ಬೆಂಗಳೂರು: ಸಮಾಜವನ್ನು ಬದಲಾಯಿಸುವ ಶಕ್ತಿ, ಉತ್ತಮ ಜೀವನ ರೂಪಿಸಿಕೊಳ್ಳುವ ಮೌಲ್ಯಗಳು ವಚನಗಳಲ್ಲಿ ಆಡಗಿವೆ ಎಂದು ವಚನ ಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಹೇಳಿದ್ದಾರೆ.
ನಗರದ ಕಲ್ಯಾಣ ಪಟ್ಟಣದ ಮಧು ಶಿವಕುಮಾರ ಅವರ ಮನೆಯಂಗಳದಲ್ಲಿ ನಡೆದ ವಚನ ಶ್ರಾವಣ 19ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು ಎಂದು ಗಣ್ಯರು ದಾರಿ ತೋರಿದ್ದು, ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಶ್ರದ್ಧಾವಂತರಿಗೆ ಕಲ್ಪವೃಕ್ಷವಾಗಿ, ಕಾಯಕ ಜೀವಿಗಳಿಗೆ ಕಾಮಧೇನುವಾಗಿ ಸಾಧಕರಿಗೆ ಚಿಂತಾಮಣಿಯಾದ ವಚನಗಳನ್ನು ಬಸವಣ್ಣನವರು ರಚಿಸಿಕೊಟ್ಟಿದ್ದಾರೆ. ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಸ್ಪರ್ಧೆಗಳನ್ನು ನಡೆಸುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಯಿತು ಎಂದರು.
ಗಾಯಕಿಯರಾದ ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ ವಚನ ಗಾಯನ ನಡೆಸಿಕೊಟ್ಟಿರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವೀರಶೈವ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ಶಿವಕುಮಾರ್, ಶಿಕ್ಷಕ ನಿರಂಜನ್, ಸೌಮ್ಯಾ, ಮುಖಂಡರಾದ ಮಲ್ಲಿಕಾರ್ಜುನಯ್ಯ, ಚನ್ನಮಲ್ಲಯ್ಯ, ಶಿವಕುಮಾರ್, ಸುಶೀಲಾ ಪಂಚಾಕ್ಷರಯ್ಯ, ಪುಷ್ಪಾ, ಮೇಳದ ಪ್ರತಿಭೆಗಳಾದ ಸಾರಿಕಾ, ರಿಷಿಕಾ ಉಪಸ್ಥಿರಿದ್ದರು.