- ರಾಜ್ಯ ಚುನಾವಣಾ ಆಯೋಗದಿಂದ ಕರಡು ಮತದಾರರ ಪಟ್ಟಿ ಪ್ರಕಟ
- ಫೆಬ್ರವರಿ 3ರವರೆಗೆ ಹಕ್ಕು, ಆಕ್ಷೇಪಣೆ ಸಲ್ಲಿಸಲು ಅವಕಾಶ
ಬೆಂಗಳೂರು: ಬಹುನಿರೀಕ್ಷಿತ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಎಲೆಕ್ಷನ್ ಸಂಬಂಧ ಮತದಾರರ ಕರಡು ಪಟ್ಟಿ ಸೋಮವಾರ ಪ್ರಕಟಿಸಲಾಗಿದ್ದು, ಮಹಾನಗರದಲ್ಲಿ ಒಟ್ಟು 88.91 ಲಕ್ಷ ಮಂದಿ ಮತಹಕ್ಕು ಹೊಂದಿದ್ದಾರೆ.
ಜಿಬಿಎ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಸೋಮವಾರ ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ ಹಾಗೂ ಜಿಬಿಎ ಚುನಾವಣೆ ವಿಶೇಷ ಆಯುಕ್ತ ರಾಮಚಂದ್ರನ್ ಈ ಮಾಹಿತಿ ನೀಡಿದರು.
ಐದು ಪಾಲಿಕೆಗಳ ವಾರ್ಡ್‌ವಾರು ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 88.91 ಲಕ್ಷ ಮತದಾರರು ಇದ್ದಾರೆ. ಈ ಪೈಕಿ 45.69 ಲಕ್ಷ ಪುರುಷರು, 43.20 ಲಕ್ಷ ಮಹಿಳೆಯರು ಹಾಗೂ 1,635 ಇತರ ಮತದಾರರಿದ್ದಾರೆ. ಪಾಲಿಕೆಗಳ ಚುನಾವಣೆಗೆ 2025ರ ಅ.1ಅನ್ನು ಆಧಾರವಾಗಿ ಇಟ್ಟುಕೊಂಡು ಕರಡು ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಪಟ್ಟಿಯಲ್ಲಿ ಹೆಸರಿಲ್ಲದಿದ್ದಲ್ಲಿ ಸೂಕ್ತ ನಮೂನೆ ಮೂಲಕ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಿದೆ. ಜ.1ಕ್ಕೆ 18 ವರ್ಷ ತುಂಬಿದ ಎಲ್ಲರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು ಅರ್ಹರಿದ್ದಾರೆ ಎಂದು ತಿಳಿಸಿದರು.
ಮಾ.16ಕ್ಕೆ ಅಂತಿಮ ಪಟ್ಟಿ:
ಕರಡು ಮತದಾರರ ಪಟ್ಟಿಗೆ ಸಂಬಂಧಿಸಿ ಹಕ್ಕು ಹಾಗೂ ಆಕ್ಷೇಪಣೆ ಸಲ್ಲಿಸಲು ಫೆ.3ರವರೆಗೆ ಕಾಲಾವಕಾಶ ನೀಡಲಾಗಿದೆ. ಆನಂತರ ಆಕ್ಷೇಪಗಳಗನ್ನು ಫೆ.4 ರಿಂದ 18ರವರೆಗೆ ವಿಲೇವಾರಿ ಮಾಡಲಿದ್ದು, ಮಾ.16ರಂದು ಮತದಾರರ ಪಟ್ಟಿಯ ಅಂತಿಮ ಪ್ರಕಟಣೆ ಮಾಡಲಾಗುವುದು. ಕರಡು ಪ್ರತಿ ಆಧರಿಸಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಅವರು ವಿವರಿಸಿದರು.
ಈ ವೇಳೆ ನಗರ ಪಾಲಿಕೆಗಳ ಆಯುಕ್ತರರಾದ ರಾಜೇಂದ್ರ ಚೋಳನ್, ಪಿ. ಸುನೀಲ್ ಕುಮಾರ್, ಡಿ.ಎಸ್. ರಮೇಶ್, ಡಾ. ಕೆ.ವಿ. ರಾಜೇಂದ್ರ, ಚುನಾವಣಾ ವಿಭಾಗದ ವಿಶೇಷ ಕರ್ತವ್ಯಾಧಿಕಾರಿ ಸೆಲ್ವಮಣಿ ಹಾಜರಿದ್ದರು.
ವೆಬ್ಸೈಟ್ನಲ್ಲಿ ಪಟ್ಟಿ ಲಭ್ಯ:
ವಾರ್ಡ್‌ವಾರು ಕರಡು ಮತದಾರರ ಪಟ್ಟಿಯನ್ನು ಜಿಬಿಎ ಅಧಿಕೃತ ಜಾಲತಾಣದಲ್ಲಿ ಪಿಡಿಎಫ್ ಆವೃತ್ತಿಯಾಗಿ ಪ್ರಕಟಿಸಲಾಗಿದೆ. ಸಾರ್ವಜನಿಕರು ತಮ್ಮ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿರುವುದರ ಬಗ್ಗೆ ಪರಿಶೀಲಿಸಿಕೊಳ್ಳಬಹುದು.
ಪಾಲಿಕೆಗಳ ಸಹಾಯವಾಣಿ ವಿವರ:
ನಮೂನೆಗಳ ಮೂಲಕ ಅರ್ಜಿ ಸಲ್ಲಿಕೆ:
ವಾರ್ಡ್‌ವಾರು ಮತದಾರರ ಪಟ್ಟಿ ಸಿದ್ಧತೆಗೆ, ಆಯೋಗದಿಂದ ನೇಮಕಗೊಂಡ ಮತದಾರರ ನೋಂದಣಾಧಿಕಾರಿ / ಸಹಾಯಕ ಮತದಾರರ ನೋಂದಣಾಧಿಕಾರಿ / ಬಿಎಲ್ಒ ಬಳಿ ನಿಗದಿತ ನಮೂನೆಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ನಮೂನೆ 4 - ಮತದಾರರ ಹೆಸರು ಸೇರ್ಪಡೆ
ನಮೂನೆ 5 - ಹೆಸರು ಸೇರ್ಪಡೆಗೆ ಆಕ್ಷೇಪಣೆ
ನಮೂನೆ 6 - ಹೆಸರು ತಿದ್ದುಪಡಿ
ನಮೂನೆ 8 - ಹೆಸರು ತೆಗೆದುಹಾಕಲು
ಪಶ್ಚಿಮ ಪಾಲಿಕೆಯಲ್ಲಿ ಹೆಚ್ಚು ಮತದಾರರು:
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಪೈಕಿ ಪಶ್ಚಿಮ ಪಾಲಿಕೆಯಲ್ಲಿ ಅತಿ ಹೆಚ್ಚು ಮತದಾರರಿದ್ದಾರೆ. ಜತೆಗೆ 369 ವಾರ್ಡ್‌ಗಳ ಪೈಕಿ ಪಶ್ಚಿಮ ಕಾರ್ಪೋರೇಷನ್‌ನ ರಾಜರಾಜೇಶ್ವರಿನಗರ ವಾರ್ಡ್ ಸಂಖ್ಯೆ 23ರಲ್ಲಿ ಅತಿ ಹೆಚ್ಚು 49,530 ಮತದಾರರು ಹಾಗೂ ಅತಿ ಕಡಿಮೆ ಮತದಾರರು ಪೂರ್ವ ಪಾಲಿಕೆಯ ನ್ಯೂ ತಿಪ್ಪಸಂದ್ರ ವಾರ್ಡ್ 16ರಲ್ಲಿ ಅತಿ ಕಡಿಮೆ 10,926 ಮತದಾರರು ಇದ್ದಾರೆ. ಐದೂ ಪಾಲಿಕೆಗಳಲ್ಲಿ ಒಟ್ಟು 8,044 ಮತಗಟ್ಟೆಗಳು ಇರಲಿವೆ.
ಕಾರ್ಪೋರೇಷನ್‌ವಾರು ಮತದಾರರ ವಿವರ: