- ಯುದ್ದದಲ್ಲಿ ಮಡಿದ ವೀರ ಹುತಾತ್ಮ ಯೋಧರಿಗೆ ವಾಯುನೆಲೆ ಏರ್ ಆಫೀಸ್ ಕಮಾಂಡಿಗ್ ಚ್ೀ ಏರ್ ಮಾರ್ಷಲ್ ತೇಜೇಂದರ್ ಸಿಂಗ್ ಪುಷ್ಪನಮನ
ಬೆಂಗಳೂರು: ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಮಂಗಳವಾರ ಇಂಡೋ-ಪಾಕ್ ಯುದ್ದ (1971)ದ 54ನೇ ವಿಜಯ ದಿನವನ್ನು ಆಚರಿಸಲಾಯಿತು.
ಯುದ್ದದಲ್ಲಿ ಮಡಿದ ವೀರ ಹುತಾತ್ಮ ಯೋಧರಿಗೆ ವಾಯುನೆಲೆ ಏರ್ ಆಫೀಸ್ ಕಮಾಂಡಿಗ್ ಚ್ೀ ಏರ್ ಮಾರ್ಷಲ್ ತೇಜೇಂದರ್ ಸಿಂಗ್, ಎಎಸ್‌ಸಿ ಸೆಂಟರ್ ಮತ್ತು ಕಾಲೇಜಿನ ಕಮಾಂಡಂಟ್ ಲೆಫ್ಟಿನೆಂಟ್ ಜನರಲ್ ಜೆ.ಕೆ. ಗೆರಾ ಅವರು ಹುತಾತ್ಮರಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ 1971ರ ಯುದ್ದದಲ್ಲಿ ಪಾಲ್ಗೊಂಡಿದ್ದ ಯೋಧರು ಮತ್ತು ಅವರ ಕುಟುಂಬ, ಹುತಾತ್ಮ ಯೋಧರ ಕುಟುಂಬ ಸದಸ್ಯರು, ಪ್ರಸ್ತುತ ಸೇವೆಯಲ್ಲಿರುವ ಯೋಧರು, ಅಧಿಕಾರಿಗಳನ್ನು ಒಳಗೊಂಡಂತೆ ಹಲವರು ಗೌರವ ನಮನ ಸಲ್ಲಿಸಿದರು.
ನೌಕಾಪಡೆಯ ಸ್ಟೇಷನ್ ಕಮಾಡೋರ್ ವಿ.ಬಿ. ಬಳ್ಳಾರಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಸ್ಥಾಪನೆ ನಿರ್ದೇಶಕ ಎಂ.ಎಸ್. ಲೋಲಾಕ್ಷ, ರಾಷ್ಟ್ರೀಯ ಮಿಲಿಟರಿ ಸ್ಮಾರಕ ನಿರ್ವಹಣಾ ತಂಡ ಭಾಗವಹಿಸಿದ್ದರು.
ಈ ವೇಳೆ ಎನ್‌ಸಿಸಿ ಕೆಡೆಟ್ಸ್, ಸ್ಕೌಟ್ ಮತ್ತು ಗೈಡ್ಸ್ ಕೆಡೆಟ್ಸ್, ಶಾಲಾ ವಿದ್ಯಾರ್ಥಿಗಳು, ನಿವೃತ್ತ ಸೇನಾಧಿಕಾರಿಗಳು, ರಕ್ಷಣಾ ಇಲಾಖೆಯ ಅಧಿಕಾರಿಗಳು ಸಹ ಭಾಗವಹಿಸಿ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ನೌಕಾಪಡೆಯ ಸ್ಟೇಷನ್ ಕಮಾಡೋರ್ ವಿ.ಬಿ. ಬಳ್ಳಾರಿ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವುದನ್ನು ಪ್ರತಿಯೊಬ್ಬರೂ ತಿಳಿಯಬೇಕು. ಇಂಡೋ-ಪಾಕ್ ಯುದ್ಧ, ಇಂಡೋ-ಚೀನಾ ಯುದ್ಧ, ಕಾರ್ಗಿಲ್ ಸೇರಿ ಹಲವು ಸಂದರ್ಭದಲ್ಲಿ ಹುತಾತ್ಮ ಯೋಧರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟಿದ್ದರು. ಅಲ್ಲದೆ, ವೀರ ಮರಣ ಹೊಂದಿರುವ ಕುಟುಂಬ ಸದಸ್ಯರು ಆ ನೋವನ್ನು ಅನುಭವಿಸುತ್ತಿದ್ದಾರೆ. ಪ್ರತಿ ವರ್ಷ ಹೀಗೆ ಗೌರವ ಸಲ್ಲಿಸುವುದರಿಂದ ಕುಟುಂಬದವರಿಗೆ ಸಮಾಧಾನ, ಸಾಂತ್ವನ ಹೇಳುವ ಮೂಲಕ ಸೇನೆ ಮತ್ತು ಯೋಧನನ್ನು ಕಳೆದುಕೊಂಡಿರುವ ಕುಟುಂಬಕ್ಕೆ ಗೌರವ ಭಾವನೆ ಬರಲಿದೆ ಎಂದು ಹೇಳಿದರು.