ಬೆಂಗಳೂರು

ಪರಿಷತ್ ಚುನಾವಣೆ ಕಣದಲ್ಲಿ 43 ಅಭ್ಯರ್ಥಿಗಳು

ಕಾಂಗ್ರೆಸ್‌ನಿಂದ 4, ಬಿಜೆಪಿಯಿಂದ 3, ಜೆಡಿಎಸ್, ಜೆಡಿಯು, ಸರ್ವಜನತಾ ಪಕ್ಷ, ಕಿತ್ತೂರು ಕಲ್ಯಾಣ ಕರ್ನಾಟಕ ಸೇನಾ, ಜನತಾ ಚಳವಳಿ ಭಾರತ, ಆಮ್ ಆದ್ಮಿಯಿಂದ ತಲಾ ಒಬ್ಬರು ಹಾಗೂ ಕರ್ನಾಟಕ ರಾಷ್ಟ್ರ ಸಮಿತಿಯಿಂದ ಇಬ್ಬರು ಸ್ಫರ್ಧೆ ಬಯಸಿ ಕಣದಲ್ಲಿದ್ದಾರೆ.

ಬೆಂಗಳೂರು: ಶಿಕ್ಷಕ್ಷರ ಹಾಗೂ ಪಧವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಇದೇ ತಿಂಗಳು ಅಕ್ಟೋಬರ್ 23 ರಂದು ನಡೆಯಲಿರುವ ದ್ವೆವಾರ್ಷಿಕ ಚುನಾವಣೆಯ ಅಂತಿಮ ಕಣದಲ್ಲಿ 43 ಅಭ್ಯರ್ಥಿಗಳಿದ್ದಾರೆ.

ಈ ಪೈಕಿ ಕಾಂಗ್ರೆಸ್‌ನಿಂದ 4, ಬಿಜೆಪಿಯಿಂದ 3, ಜೆಡಿಎಸ್, ಜೆಡಿಯು, ಸರ್ವಜನತಾ ಪಕ್ಷ, ಕಿತ್ತೂರು ಕಲ್ಯಾಣ ಕರ್ನಾಟಕ ಸೇನಾ, ಜನತಾ ಚಳವಳಿ ಭಾರತ, ಆಮ್ ಆದ್ಮಿಯಿಂದ ತಲಾ ಒಬ್ಬರು ಹಾಗೂ ಕರ್ನಾಟಕ ರಾಷ್ಟ್ರ ಸಮಿತಿಯಿಂದ ಇಬ್ಬರು ಸ್ಫರ್ಧೆ ಬಯಸಿ ಕಣದಲ್ಲಿದ್ದಾರೆ.

ಉಳಿದಂತೆ ನಾಲ್ಕೂ ಕ್ಷೇತ್ರಗಳಿಂದ 28 ಜನ ಪಕ್ಷೇತರರಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರ ಹಾಗೂ ಈಶಾನ್ಯ ಶಿಕ್ಷಕ ಕ್ಷೇತ್ರದಿಂದ ತಲಾ 9, ಆಗ್ನೇಯ ಪದವೀಧರ ಕ್ಷೇತ್ರದಿಂದ 7 ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಮೂವರು ಪಕ್ಷೇತರರು ಸ್ಪರ್ಧೆ ಬಯಸಿ ಕಣದಲ್ಲಿ ಉಳಿದಿದ್ದಾರೆ.

ಆಗ್ನೇಯ ಪದವೀಧರರ ಕ್ಷೇತ್ರ

ಕಾಂಗ್ರೆಸ್‌ನಿಂದ ಶಶಿಧರ ಹುಲಿಕುಂಟೆಮಠ , ಬಿಜೆಪಿಯಿಂದ ಕೆ.ಎಂ.ಸುರೇಶ್ ಹಾಗೂ ಸರ್ವ ಜನತಾ ಪಕ್ಷದಿಂದ ಜಿ.ಸಿ.ಪಟೇಲ್ ಕಣದಲ್ಲಿದ್ದಾರೆ.

ಪಕ್ಷೇತರರು

ಕಪನಿ ಗೌಡ, ಚಿಕ್ಕರಾಜು ಎಸ್.ಯಾದವ್, ಲಕ್ಷ್ಮಯ್ಯ ಆರ್., ಲಕ್ಷ್ಮಿಕಾಂತ ಎಸ್. ಯಾದವ್, ಶಶಿ ಹುಲಿಕಟ್ಟೆ, ಸೈಯದ್ ಅಾಕ್ ಅಹಮದ್, ಅಡ್ವೋಕೇಟ್ ಬರೀದ್

ಪಶ್ಚಿಮ ಪದವೀಧರ ಕ್ಷೇತ್ರ

ಕಾಂಗ್ರೆಸ್‌ನಿಂದ ಮೋಹನ್ ಲಿಂಬಿಕಾಯಿ, ಬಿಜೆಪಿಯಿಂದ ಎಸ್.ವಿ.ಸಂಕನೂರು, ಕರ್ನಾಟಕ ರಾಷ್ಟ್ರ ಸಮಿತಿಯಿಂದ ನಿಶಾಂತ ಶಂಕರ ಬಂಕಾಪುರ, ಕಿತ್ತೂರು ಕಲ್ಯಾಣ ಕರ್ನಾಟಕ ಸೇನಾದಿಂದ ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ, ಜನತಾ ಚಳವಳಿ ಭಾರತದಿಂದ ತಳವಾರ ಶಿವಕುಮಾರ್ ಕಣದಲ್ಲಿದ್ದಾರೆ.

ಪಕ್ಷೇತರರು

ಅಬ್ದುಲ್ ಮನ್ನಾನ, ಡಾ. ಜಿ.ಎಚ್.ಇಮ್ರಾಪುರ, ಉಮೇಶ ಕೃಷ್ಣಪ್ಪ ದೈವಜ್ಞ, ಕೃಷ್ಣ ಎಚ್.ಬಳೇಗಾರ, ಶಾಂತಕುಮಾರ್ ಆರ್., ಜಿಶಾನ ಡಿ.ಶಿರಸಿಂಗಿ, ಜೀಶಾನ ಅಹಮದ್ ಖಾನ್ ಪಠಾಣ್, ಶಿವರಾಜ ಶಂಕರಪ್ಪ ಕೋಟಗಿ , ಸಂತೋಷ ಮನೋಹರ ವೆರ್ಣೇಕರ್

ಈಶಾನ್ಯ ಶಿಕ್ಷಕರ ಕ್ಷೇತ್ರ

ಕಾಂಗ್ರೆಸ್‌ನಿಂದ ಶರಣಪ್ಪ ಮಟ್ಟೂರು, ಬಿಜೆಪಿಯಿಂದ ಶಶೀಲ್ ಜಿ. ನಮೋಶಿ ಆಮ್ ಆದ್ಮಿಯಿಂದ ಸೈಬಣ್ಣ ಜಮಾದಾರ್, ಸಂಯುಕ್ತ ಜನತಾದಳದಿಂದ ಶಂಕರ ರೆಡ್ಡಿ ಪಾಟೀಲ್ ಕಣದಲ್ಲಿದ್ದಾರೆ.

ಪಕ್ಷೇತರರು :

ಡಾ.ಕವಿರಾಜ ನಾಗಣ್ಣ ಮೋತಕಪಳ್ಳಿ , ಟಿ.ಕೆ.ದಾಸರ್, ಮೆಹಬೂಬ್ ಮಹಮದ್ ಖಾಜಾ ಹುಸೇನ್ ವಂಟೆಳಿ, ರಾಜಕುಮಾರ್ ಕೆ.ಕಲಬುರಗಿ, ರಾಜು ದೇವಪ್ಪ ಸೊನ್ನ , ಶರಣು ಪಿ. ಸೂಗೂರು , ಶಶಿಧರ ಬಸವರಾಜ್, ಶಿವಶಂಕರ ಅಣ್ಣಪ್ಪ ತರನಹಳ್ಳಿ , ಸುರೇಶ ದಾವೀದಪ್ಪ,

ಬೆಂಗಳೂರು ಶಿಕ್ಷಕರ ಕ್ಷೇತ್ರ

ಕಾಂಗ್ರೆಸ್‌ನಿಂದ ಪುಟ್ಟಣ್ಣ, ಜೆಡಿಎಸ್ ನಿಂದ ಎ.ಪಿ.ರಂಗನಾಥ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಡಾ.ಜಿ.ಆರ್.ಹೆಬ್ಬೂರು ಕಣದಲ್ಲಿದ್ದಾರೆ.

ಪಕ್ಷೇತರರು

ಉಮೇಶ ಬಾಬು ಪಿಳ್ಳೇಗೌಡ, ಬಿ.ಎಸ್.ನಾಗರಾಜ್, ಡಾ. ಎನ್.ಲಕ್ಷ್ಮಣ ಸ್ವಾಮಿ.