ಬೆಂಗಳೂರಿನ ನಾಗವಾರದಲ್ಲಿ ಶಿವಾಜಿ ಮಹಾರಾಜರ 396ನೇ ಅದ್ದೂರಿ ಜಯಂತ್ಯೋತ್ಸವ ಆಚರಣೆ 
ಬೆಂಗಳೂರು

ನಾಗವಾರದಲ್ಲಿ ಶಿವಾಜಿ ಮಹಾರಾಜರ 396ನೇ ಅದ್ದೂರಿ ಜಯಂತ್ಯೋತ್ಸವ.

ಬೆಂಗಳೂರು.ವಿಶ್ವ ಹಿಂದೂ ಪರಿಷತ್ ನಾಗವಾರ ಪ್ರಖಂಡದ ವತಿಯಿಂದ ಹಮ್ಮಿಕೊಂಡಿದ್ದ 396ನೇ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತ್ಯೋತ್ಸವಕ್ಕೆ ಚಾಲನೆ ದೊರೆಯಿತು. ಜಯಂತ್ಯೋತ್ಸವದಲ್ಲಿ ಭಾಗವಹಿಸಿದ್ದ ವಿವಿಧ ಕಲಾವಿದರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ರಾಜ್ಯದ ವಿವಿದೇಡೆಯಿಂದ ಆಗಮಿಸಿದ್ದ ಗಣ್ಯರು ಶಿವಾಜಿ ಹಲವು ವಿಷಯಗಳ ಕುರಿತು ಭಾಷಣ ಮಾಡಿ ಸಾರ್ವಜನಿಕರ ಗಮನ ಸೆಳೆದರು.
ಶ್ರೀ ಕೃಷ್ಣ ಗೋಶಾಲೆ, ದೊಡ್ಡ ಗುಬ್ಬಿ ಹಾಗೂ ಹೊಸೂರು ಬಂಡೆಯ ಪುಕರಾಜ್ ಜಿ ಮಹಾರಾಜ್ ಆಶೀರ್ವಚನ ನೀಡಿದರು. ಅವರ ಉಪನ್ಯಾಸದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಸಾಹಸ, ಧೈರ್ಯ, ರಾಷ್ಟ್ರಭಕ್ತಿ ಹಾಗೂ ಹಿಂದು ಧರ್ಮರಕ್ಷಣೆಯ ಮಹತ್ವವನ್ನು ತಿಳಿಸಿಕೊಟ್ಟರು.
ಜಯಂತ್ಯೋತ್ಸವದಲ್ಲಿ ಸ್ಥಳೀಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ರಾಷ್ಟ್ರಗೀತೆ ಮೂಲಕ ಕಾರ್ಯಕ್ರಮ ಸಮಾರೋಪಗೊಂಡಿತು. ಇದೇ ವೇಳೆ ವಿಶ್ವ ಹಿಂದೂ ಪರಿಷತ್ ನಾಗವಾರ ಪ್ರಖಂಡ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನಾಗವಾರ ಪ್ರಖಂಡದ ಓಂ ಪ್ರಕಾಶ್, ಮುನಿರಾಜು, ವಸಂತ್ ಕುಮಾರ್, ಗೋವಿಂದ ಸಿಂಹ, ಗಂಗಾಧರ್, ಜೈರಾಮ್ ಜಿ ಹಾಗೂ ಕರ್ನಾಟಕ ಶಿವಸೇನೆಯ ಕಾರ್ಯದರ್ಶಿಗಳಾದ ಅಮರನಾಥ ಹರೀಶ್ ಸೇರಿದಂತೆ ಅನೇಕ ಗಣ್ಯರು ಮತ್ತು ಕಾರ್ಯಕರ್ತರು ಭಾಗವಹಿಸಿದರು.