feedingspots 
ಬೆಂಗಳೂರು

ಬೀದಿನಾಯಿಗಳಿಗೆ ಆಹಾರ ನೀಡಲು 150 ಸ್ಥಳ ಗುರುತು

ಪ್ರಮುಖ ಮುಖ್ಯಾಂಶಗಳು

  • ಪೂರ್ವ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಮಾಹಿತಿ
ಬೆಂಗಳೂರು: ಬೀದಿ ನಾಯಿಗಳ ಕಲ್ಯಾಣ ಮತ್ತು ನಿರ್ವಹಣೆ ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆ ಹಿನ್ನೆಲೆಯಲ್ಲಿ ಸ್ಟ್ರೀಟ್ ಡಾಗ್ಸ್‌ಗೆ ಆಹಾರ ನೀಡಲು ಕೆ.ಆರ್.ಪುರ ಮತ್ತು ಮಹದೇವಪುರ ವಲಯದಲ್ಲಿ 150 ಸ್ಥಳಗಳನ್ನು ‘ಫೀಡಿಂಗ್ ಸ್ಪಾಟ್’ಗಳನ್ನು ಗುರುತಿಸಲಾಗಿದೆ ಎಂದು ಪೂರ್ವ ಪಾಲಿಕೆಯ ಆಯುಕ್ತ ಡಿ.ಎಸ್. ರಮೇಶ್ ಹೇಳಿದ್ದಾರೆ.
ಮಾನವ ಮತ್ತು ಸಮುದಾಯ ಪ್ರಾಣಿಗಳ ನಡುವೆ ಸಹಬಾಳ್ವೆ ವೃದ್ಧಿಸಲು ಮತ್ತು ಸಂಘರ್ಷ ಕಡಿಮೆಗೊಳಿಸಲು ಬೀದಿ/ಸಮುದಾಯ ನಾಯಿಗಳಿಗೆ ಆಹಾರ ನೀಡುವ ಕಾರ್ಯವು ಮಹತ್ತರವಾಗಿದೆ. ಈ ರೀತಿ ವ್ಯವಸ್ಥಿತವಾಗಿ ಆಹಾರ ಒದಗಿಸುವುದರಿಂದ ಶ್ವಾನಗಳ ಹಸಿವು ನೀಗಿಸುವ ಮೂಲಕ ಅವುಗಳ ಕ್ರೂರಸ್ವಭಾವ ಮತ್ತು ಕಚ್ಚುವ ಪ್ರವೃತ್ತಿಯನ್ನು ಕಡಿಮೆಗೊಳಿಸಬಹುದಾಗಿದೆ. ಜತೆಗೆ ಬೀದಿನಾಯಿಗಳ ಸಂತಾನಹರಣ ಶಸ್ತಚಿಕಿತ್ಸೆಗೆ ಹಾಗೂ ಸಾಮೂಹಿಕ ಲಸಿಕಾ ಕಾರ್ಯಕ್ರಮವನ್ನು ನಿರ್ವಹಿಸಲು ಇದು ಸಹಕಾರಿಯಾಗಿರುತ್ತದೆ ಎಂದು ತಿಳಿಸಿದ್ದಾರೆ.
ಫೀಡಿಂಗ್ ಸ್ಪಾಟ್‌ಗಳನ್ನು ಗುರುತಿಸಿರುವ ಜಾಗಗಳಲ್ಲಿ ಸೂಚನಾ ಫಲಕ ಅಳವಡಿಸಿ ನಾಗರಿಕರಿಗೆ ಮಾಹಿತಿ ಒದಗಿಸಲಾಗಿದೆ ಎಂದು ಆಯುಕ್ತರು ವಿವರಿಸಿದ್ದಾರೆ.

ಗುರುತಿಸಲಾದ ಫೀಡಿಂಗ್ ಸ್ಪಾಟ್‌ಗಳ ವಿವರ:

ಎಚ್‌ಎಎಲ್ ವಾರ್ಡ್-13 ಸ್ಥಳ, ಮಾರತ್‌ಹಳ್ಳಿ-41, ವಿಮಾನಪುರ-1, ವೈಟ್‌ಫೀಲ್ಡ್-22, ದೇವಸಂದ್ರ-11, ಕೆ.ಆರ್.ಪುರ-13, ವಿಜ್ಞಾನನಗರ-3, ಬೆಳ್ಳಂದೂರು-1, ರಾಮಮೂರ್ತಿನಗರ-3, ಎಇಸಿಎಸ್ ಬಡಾವಣೆ-3, ಮೇಡಹಳ್ಳಿ-4, ಬೆಳತ್ತೂರು-4, ಗರುಡಾಚಾರ್‌ಪಾಳ್ಯ-8, ದೊಡ್ಡನೆಕ್ಕುಂದಿ-4, ಹೊರಮಾವು-10, ವರ್ತೂರು-3, ಹೂಡಿ-2, ಬಿ.ನಾರಾಯಣಪುರ-3 ಹಾಗೂ ನಲ್ಲೂರಹಳ್ಳಿ-1.