- ಜನದಟ್ಟಣೆ ವೇಳೆ 5 ನಿಮಿಷಕ್ಕೊಂದು ರೈಲು ಸಂಚಾರ
ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಜನದಟ್ಟಣೆ ವೇಳೆ ಪ್ರತಿ ರೈಲುಗಳ ನುವಿನ ಅಂತರವನ್ನು ಮೇ ತಿಂಗಳೊಳಗೆ 5 ನಿಮಿಷಕ್ಕೆ ಇಳಿಸುವ ಸಾಧ್ಯತೆ ಇದೆ. ಆರ್.ವಿ. ರಸ್ತೆ& ಬೊಮ್ಮಸಂದ್ರ ಮಾರ್ಗದಲ್ಲಿ 10 ರೈಲುಗಳ ಸಂಚಾರಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಯೋಜನೆ ರೂಪಿಸಿದ್ದು, 9ನೇ ರೈಲು ಸೆಟ್ ಈಗಾಗಲೇ ಡಿಪೋ ತಲುಪಿದೆ.
ಪಶ್ಚಿಮ ಬಂಗಾಳ ಮೂಲದ ತಿತಾಗಢ ರೈಲು ಸಿಸ್ಟಮ್ಸ್ ಲಿಮಿಟೆಡ್ (ಟಿಆರ್ಎಸ್ಎಲ್) ಸಂಸ್ಥೆ ಈ ಮಾರ್ಗದ ರೈಲುಗಳನ್ನು ರವಾನಿಸಲು ಸಜ್ಜಾಗಿದೆ. ಈ ಮಾಸಾಂತ್ಯದೊಳಗೆ 10ನೇ ರೈಲು ರವಾನೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ರೈಲುಗಳು ಮುಖ್ಯ ಮಾರ್ಗದಲ್ಲಿ ಕಡ್ಡಾಯವಾಗಿ 750 ಕಿ.ಮೀ. ಟ್ರಯಲ್ ರನ್ ಪೂರ್ಣಗೊಳಿಸಿದ ಬಳಿಕ ಮೇನಲ್ಲಿ ಸೇವೆಗೆ ಸೇರ್ಪಡೆಗೊಳ್ಳಲಿದೆ. ಸಾಮಾನ್ಯವಾಗಿ ಈ ಪ್ರಕ್ರಿಯೆಗೆ ಎರಡು ವಾರ ಹಿಡಿಯುತ್ತದೆ. 19.15 ಕಿ.ಮೀ. ಉದ್ದದ ಆರ್. ವಿ. ರಸ್ತೆ& ಬೊಮ್ಮಸಂದ್ರ ಮಾರ್ಗದಲ್ಲಿ ವಾರದ ದಿನಗಳಲ್ಲಿ ಸರಾಸರಿ ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದಾರೆ. ಆದರೆ, ಜನದಟ್ಟಣೆ ಹೆಚ್ಚಾಗಿರುವಾಗ 9 ನಿಮಿಷಕ್ಕೊಂದು ಹಾಗೂ ಜನದಟ್ಟಣೆ ಇಲ್ಲದಿರುವ ಅವಧಿಯಲ್ಲಿ 14 ನಿಮಿಷಗಳ ಅಂತರದಲ್ಲಿ ಸೇವೆ ಲಭಿಸುತ್ತಿದೆ.
ಹೆಚ್ಚುವರಿ ರೈಲುಗಳ ಸಂಚಾರ ಬಳಿಕ ಪೀಕ್ ಅವಧಿಯಲ್ಲಿ 5&6 ನಿಮಿಷ ಮತ್ತು ನಾನ್-ಪೀಕ್ ಅವಧಿಯಲ್ಲಿ 10&12 ನಿಮಿಷಗಳ ಅಂತರದಲ್ಲಿ ರೈಲು ಸೇವೆ ಇರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.