Eshwar Khandre | ಸಚಿವ ಈಶ್ವರ್ ಖಂಡ್ರೆ 
ಬೆಂಗಳೂರು

ಸಾವಿರ ಗ್ರಾಮೀಣ ಬಸ್ ತಂಗುದಾಣ

ವಿಬಿಜಿ ರಾಮ್‌ಜಿ ಅಡಿ ಗ್ರಾಮೀಣ ಭಾಗದಲ್ಲಿ ಒಂದು ಸಾವಿರ ಬಸ್​ ತಂಗುದಾಣ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲು ಪಂಚಾಯತ್​ ರಾಜ್​ ಇಲಾಖೆ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಬೆಂಗಳೂರು: ವಿಬಿಜಿ ರಾಮ್‌ಜಿ ಅಡಿ 1000 ಗ್ರಾಮೀಣ ಬಸ್ ತಂಗುದಾಣಗಳ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರ ಆಗಮನ- ನಿರ್ಗಮನ ಇರುವ 1000 ಸ್ಥಳಗಳನ್ನು ಗುರುತಿಸುವಂತೆ ಇಲಾಖೆ ಕಾರ್ಯದರ್ಶಿಗೆ ಹಾಗೂ ವಿಬಿಜಿ ರಾಮ್ ಜಿ ಆಯುಕ್ತರಿಗೆ ಸಚಿವರು ಲಿಖಿತ ಸೂಚನೆ ನೀಡಿದ್ದಾರೆ.

ಗ್ರಾಮೀಣ ಸೊಗಡಿನ ಹಾಗೂ ಸ್ಥಳೀಯ ಹಿರಿಮೆ ಬಿಂಬಿಸುವಂತಹ ವಿನ್ಯಾಸ ರೂಪಿಸಿ.ಅದಕ್ಕೆ ಆಗುವ ಸಾಮಗ್ರಿ ವೆಚ್ಚ ಮತ್ತು ವಿಬಿಜಿ ರಾಮ್ ಜಿ ಕೂಲಿಯ ವೆಚ್ಚವನ್ನು ಅಂದಾಜು ಮಾಡಿ 15 ದಿನಗಳ ಒಳಗಾಗಿ ಪ್ರಸ್ತಾವನೆ ಸಲ್ಲಿಸಲು ತಿಳಿಸಿದ್ದಾರೆ.