ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದು, ವಿವಿಧ ಪರೀೆಗಳು ನಡೆಯುತ್ತಿವೆ. ವರ್ಷಾಂತ್ಯದಿಂದ ಆರ್.ವಿ. ರಸ್ತೆ&ಬೊಮ್ಮಸಂದ್ರ ಮಾರ್ಗದಲ್ಲಿ ಮೆಟ್ರೋ ಸೇವೆ ಆರಂಭವಾಗಲಿದೆ. ಆರಂಭದಲ್ಲಿ 15 ನಿಮಿಷಗಳಿಗೆ ಒಂದರಂತೆ ಒಟ್ಟು 8 ರೈಲುಗಳು ಸಂಚರಿಸಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸ್ಪಷ್ಟಪಡಿಸಿದೆ.
ಪ್ರತಿ 20 ನಿಮಿಷಗಳಿಗೆ ಒಂದರಂತೆ 6-7 ರೈಲುಗಳ ಕಾರ್ಯಾಚರಣೆಯೊಂದಿಗೆ ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೋ ಸೇವೆ ಆರಂಭಿಸಲು ಬಿಎಂಆರ್ಸಿಎಲ್ ಈ ಹಿಂದೆ ಸಿದ್ಧತೆ ನಡೆಸಿತ್ತು. ಇದೀಗ ತಿರ್ಮಾನ ಬದಲಾಯಿಸಿದ್ದು, 8 ರೈಲುಗಳು ಪ್ರಯಾಣಿಕ ಸೇವೆಗೆ ಲಭ್ಯವಾಗಲಿವೆ.
ಆರು ಬೋಗಿಗಳುಳ್ಳ ಒಂದು ಸೆಟ್ ರೈಲು ಈಗಾಗಲೇ ಚೀನಾದಿಂದ ಆಗಮಿಸಿದ್ದು, ಪರೀಾರ್ಥ ಸಂಚಾರ ನಡೆಸುತ್ತಿದೆ. ಎರಡನೇ ರೈಲು ಪಶ್ಚಿಮ ಬಂಗಾಳದ ತಿತಾರ್ ಕಂಪನಿಯಿಂದ ಸೆಪ್ಟೆಂಬರ್ನಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಹೆಬ್ಬಗೋಡಿ ಡಿಪೋ ತಲುಪುವ ನಿರೀೆಯಿದೆ. ಈ ರೈಲುಗಳು ಚಾಲಕ ರಹಿತವಾಗಿದೆ. ಆದರೆ ಆರಂಭದ ಕೆಲ ತಿಂಗಳು ಲೋಕೋಪೈಲಟ್ ಮೂಲಕವೇ ಸಂಚಾರ ನಡೆಸಲಿವೆ.
ಸದ್ಯ ಹಳದಿ ಮಾರ್ಗದಲ್ಲಿ ವಿವಿಧ ಪರೀಕ್ಷೆಗಳು ನಡೆಯುತ್ತಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ ಬಹುತೇಕ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಆಗಸ್ಟ್ನಿಂದ ರೈಲಿನ ವೇಗ, ನಿಲ್ದಾಣದಿಂದ ನಿಲ್ದಾಣಕ್ಕೆ ತಲುಪುವ ಸಮಯ ಇತ್ಯಾದಿ ಅಂಶಗಳ ಬಗ್ಗೆ ಪರಿಶೀಲಿಸಲಾಗುತ್ತದೆ. ಅಂತಿಮ ಸುರಕ್ಷತಾ ಪರೀಕ್ಷೆಗಳ ಬಳಿಕ ರಿಸರ್ಚ್ ಡಿಸೈನ್ಸ್ ಮತ್ತು ಸ್ಟಾ$ಂಡರ್ಡ್ ಆರ್ಗನೈಸೇಶನ್ ಮೂಲಕ ಆಸಿಲೇಷನಲ್ ಟ್ರಯಲ್ಸ್, ಕಮಿಷನರ್ ಆ್ ಮೆಟ್ರೋ ರೈಲ್ ಸೇಫ್ಟಿ (ಸಿಎಮ್ಆರ್ಎಸ್) ಅವರಿಂದ ತಪಾಸಣೆ ನಡೆಯಲಿದೆ. ಇದು ಯಶಸ್ವಿಯಾಗುತ್ತಿದ್ದಂತೆ ವಾಣಿಜ್ಯ ಸೇವೆ ಪ್ರಾರಂಭಿಸಲು ರೈಲ್ವೆ ಮಂಡಳಿಯ ಅನುಮೋದನೆ ಪಡೆಯಲಾಗುತ್ತದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದ ಸಿಆರ್ಆರ್ಸಿ ಸಂಸ್ಥೆ ಹಳದಿ ಮಾರ್ಗಕ್ಕೆ ಅಗತ್ಯವಿರುವ 36 ರೈಲುಗಳನ್ನು (216 ಕೋಚ್) ಪೂರೈಸಲು 1,578 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದೆ. ಇದರಂತೆ ಎರಡು ರೈಲುಗಳನ್ನು ಚೀನಾದಲ್ಲಿ ನಿರ್ಮಿಸಲಾಗಿದೆ. ಉಳಿದ 34 ರೈಲುಗಳು ಪಶ್ಚಿಮ ಬಂಗಾಳದಲ್ಲಿರುವ ಟಿಟಾರ್ ರೈಲ್ ಸಿಸ್ಟಮ್ ಲಿ.ನಲ್ಲಿ ನಿರ್ಮಾಣವಾಗುತ್ತಿವೆ.
ಆರ್.ವಿ. ರಸ್ತೆ&ಬೊಮ್ಮಸಂದ್ರ ಸಂಪರ್ಕ ಕಲ್ಪಿಸುವ 19.15 ಕೀ.ಮೀ. ಹಳದಿ ಮಾರ್ಗ 5,745 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಆರ್.ವಿ.ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ಬೊಮ್ಮಸಂದ್ರ ಸೇರಿದಂತೆ ಒಟ್ಟು 16 ನಿಲ್ದಾಣಗಳನ್ನು ಒಳಗೊಂಡಿದೆ. ಹಳದಿ ಮಾರ್ಗ ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಗುಲಾಬಿ ಮಾರ್ಗ ಹಾಗೂ ಹಸಿರು ಮಾರ್ಗಕ್ಕೆ ಇಂಟರ್ಚೇಂಜ್ ನಿಲ್ದಾಣವಾಗಿದೆ.