ಜಿಲ್ಲೆ

ಹವಮಾನ ವರದಿ : ರಾಜ್ಯಾದ್ಯಂತ ಬಿರುಸಾದ ಗಾಳಿ ಹಾಗೂ ಸಾಧಾರಣ ಮಳೆಯಾಗುವ ನಿರೀಕ್ಷೆ | Weather report

Weather report: ಬೆಂಗಳೂರು ನಗರದಲ್ಲಿ ಗುರುವಾರ (ಅಕ್ಟೋಬರ್​ 02) ರಂದು ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದ್ದು, ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕ್ರಮವಾಗಿ 21 ಡಿಗ್ರಿ ಸೆಲ್ಸಿಯಸ್ ಮತ್ತು 27 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ ಎಂದು ಹವಮಾನ ಇಲಾಖೆ ವರದಿ ಮಾಡಿದೆ.

X ನಲ್ಲಿ ಹವಾಮಾನ ವರದಿ ಹಂಚಿಕೊಂಡ KSNDMC

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ (KSNDMC) 7 ದಿನಗಳ ಹವಾಮಾನ ವರದಿಯನ್ನು X ಎಕ್ಸ್​ನಲ್ಲಿ ಹಂಚಿಕೊಂಡಿದ್ದು, ರಾಜ್ಯದಾದ್ಯಂತ ಬಿರುಸಾದ ಗಾಳಿಯೊಂದಿಗೆ ಸಾಧಾರಣದಿಂದ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಉತ್ತರ ಒಳನಾಡು ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಹಳದಿ ಎಚ್ಚರಿಕೆ ನೀಡಿದೆ.

ಆರ್ದ್ರತೆ

ಆರ್ದ್ರತೆಯು ಸುಮಾರು ಶೇ. 80 ರಷ್ಟಿರುವ ನಿರೀಕ್ಷೆಯಿದೆ. ವಾಯು ಗುಣಮಟ್ಟ ಸೂಚ್ಯಂಕ ಸುಮಾರು 33 ರಷ್ಟಿರುವ ನಿರೀಕ್ಷೆಯಿದೆ. ಇದು ನಗರ ಮತ್ತು ಸುತ್ತಮುತ್ತಲು ಉತ್ತಮ ಗಾಳಿ ಗುಣಮಟ್ಟವನ್ನು ಸೂಚಿಸಿದೆ.

IMD ಸಲಹೆ

ಮಧ್ಯಮ ಮಳೆಯಿಂದಾಗಿ ನಗರದಲ್ಲಿ ತಾತ್ಕಾಲಿಕ ವಿದ್ಯುತ್​ ವ್ಯತ್ಯಯ ಉಂಟಾಗಬಹುದು. ಸಂಚಾರದಲ್ಲಿ ಸಣ್ಣಪುಣ್ಣ ಅಡಚಣೆಗಳು ಹಾಗೂ ಗಾಳಿಯ ರಭಸಕ್ಕೆ ಮರದ ಕೊಂಬೆಗಳು ಧರೆಗುರುಳುವ ಸಾಧ್ಯತೆ ಇದೆ. ಇನ್ನು ನಿವಾಸಿಗಳು ಮನೆಯೊಳಗೆ ಕಿಟಕಿ, ಬಾಗಿಲುಗಳನ್ನು ಮುಚ್ಚುವಂತೆ ಹವಮಾನ ಇಲಾಖೆ ವರದಿ ಮಾಡಿದೆ.

ಮುಂಬರುವ ದಿನಗಳ ಹವಾಮಾನ ನವೀಕರಣ

ಹವಾಮಾನ ಇಲಾಖೆಯ ಪ್ರಕಾರ, ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕ್ರಮವಾಗಿ 20 ಡಿಗ್ರಿ ಸೆಲ್ಸಿಯಸ್ ಮತ್ತು 26 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ. ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿಯೊಂದಿಗೆ ಚಂಡಮಾರುತ ಉಂಟಾಗುವ ಸಾಧ್ಯತೆಯಿದೆ. ಶುಕ್ರವಾರ, ಅಕ್ಟೋಬರ್ 2, 2025 ರಿಂದ ಮಳೆಯ ತೀವ್ರತೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಸೂಚಿಸಿದೆ. (ಏಜೆನ್ಸೀಸ್​)