ಜಿಲ್ಲೆ

ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆ ಈಡೇರಿಸಿದ ಬೆಂಗಳೂರು ವಿವಿ: ಗ್ರಂಥಾಲಯ ಸಮಯ ವಿಸ್ತರಣೆ, ಏನೆಲ್ಲಾ ಲಾಭ?

ಬೆಂಗಳೂರು ಅಧ್ಯಯನ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಸೇರಿ ಹೆಚ್ಚಿನ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಗ್ರಂಥಾಲಯದ ಸಮಯವನ್ನು ವಿಸ್ತರಿಸಿಸಬೇಕೆಂಬ ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆಯನ್ನು ಬೆಂಗಳೂರು ವಿಶ್ವವಿದ್ಯಾಲಯವು ಕೊನೆಗೂ ಈಡೇರಿಸಿದೆ.

ಈ ಮೊದಲು ಬೆಳಗ್ಗೆ 10ರಿಂದ ಸಂಜೆ 5.15ರವರೆಗಿದ್ದ ಸಮಯವನ್ನು ಈಗ ಬೆಳಗ್ಗೆ 7.30ರಿಂದ ರಾತ್ರಿ 9.30ರವರೆಗೂ ತೆಗೆದಿರುವಂತೆ ವ್ಯವಸ್ಥೆ ಮಾಡಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನಕ್ಕೆ ಅನುಕೂಲವಾಗುವಂತೆ ಗ್ರಂಥಾಲಯದ ಪರಾಮರ್ಶನ ವಿಭಾಗ, ನಿಯತಕಾಲಿಕ ವಿಭಾಗ ಮತ್ತು ಗ್ಯಾಲರಿ ತೆರೆದಿರುತ್ತದೆ. ಪರಾಮರ್ಶನ ವಿಭಾಗದಲ್ಲಿನ ಉದ್ಯೋಗ ಮಾಹಿತಿ ಸಂಪನ್ಮೂಲ ಕೇಂದ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಪನ್ಮೂಲಗಳು ಕೂಡ ಲಭ್ಯವಿರುವಂತೆ ಆದ್ಯತೆ ನೀಡಿದೆ.