ಬೆಂಗಳೂರು: ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ನವೆಂಬರ್ ಕೊನೆಯ ವಾರದಲ್ಲಿ ಹಣದ ಹೊಳೆಯೇ ಹರಿದು ಬಂದಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 3 ಕೋಟಿ ರೂಪಾಯಿಗೂ ಅಧಿಕ ಮೊತ್ತದ ದಂಡವನ್ನು ಕೇವಲ ಒಂದು ವಾರದಲ್ಲಿ ಸಂಗ್ರಹಿಸಲಾಗಿದೆ.
ಇದನ್ನೂ ಓದಿ: ಫೇಸ್ ಎಡಿಟಿಂಗ್ ಆ್ಯಪ್ ಬಳಸಿ ಮೋಸ ಮಾಡುತ್ತಿದ್ದ ಖದೀಮರು; 100ಕ್ಕೂ ಹೆಚ್ಚು ಜನರಿಗೆ ಸರ್ಕಾರಿ ಕೆಲಸ ಕೊಡಿಸಿದ ಗ್ಯಾಂಗ್
ನವೆಂಬರ್ 23ರಿಂದ 29ರವರೆರಗೆ ಬರೋಬ್ಬರಿ 79,359 ಪ್ರಕರಣಗಳನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ದಾಖಲಿಸಿದ್ದಾರೆ. ಹೆಲ್ಮೆಟ್ ಧರಿಸದ 26,118 ಪ್ರಕರಣ, ಸಿಗ್ನಲ್ ಜಂಪ್ ಮಾಡಿರುವ ಬಗ್ಗೆ 8,635 ಪ್ರಕರಣ ಮತ್ತು ನೋ ಎಂಟ್ರಿಯಲ್ಲಿ ಗಾಡಿ ನುಗ್ಗಿಸಿದವರ ಬಗ್ಗೆ 3,877 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಟ್ರಾಫಿಕ್ ಪೊಲೀಸ್ ಇಲಾಖೆಯು ಅಧಿಕೃತ ದಾಖಲೆ ಬಿಡುಗಡೆ ಮಾಡಿದ್ದು, ವಾರದಲ್ಲಿ 3 ಕೋಟಿಯ 34 ಲಕ್ಷದ 89 ಸಾವಿರದ 300 ರೂಪಾಯಿ (3,34,89,300) ದಂಡ ಸಂಗ್ರಹ ಮಾಡಿರುವುದಾಗಿ ತಿಳಿಸಿದೆ.
ಬೆಂಗಳೂರು ಟ್ರಾಫಿಕ್ ಪೊಲೀಸ್, ದಂಡ, Bangalore Traffic Police,