ಜಿಲ್ಲೆ

ಖಾಸಗಿ ಫೋಟೋ-ವಿಡಿಯೋ ವೈರಲ್​ ಮಾಡೋದಾಗಿ ಬೆದರಿಕೆ; ಮಾವನ ಕಿರುಕುಳ ತಾಳಲಾರದೆ ಪ್ರಾಣಬಿಟ್ಟ Techie

ಬೆಂಗಳೂರು: ಮಾವನ ಕಿರುಕುಳ ತಾಳಲಾರದೆ ಯುವ ಟೆಕ್ಕಿಯೊಬ್ಬರು (Techie) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತರನ್ನು ಸುಹಾಸಿ ಸಿಂಗ್​ (25) ಎಂದು ಗುರುತಿಸಲಾಗಿದ್ದು, ಆರೋಪಿ ಪ್ರವೀಣ್​ ಸಿಂಗ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಜನವರಿ 12ರಂದು ಬೆಂಗಳೂರಿನ ಕುಂದಲಹಳ್ಳಿ ಬಳಿ ಇರುವ ಹೋಟೆಲ್​ ಒಂದರಲ್ಲಿ ಸುಹಾಸಿ ಸಿಂಗ್​ (Techie) ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಪ್ರಕರಣದ ಹಿನ್ನೆಲೆ? 

ಆರೋಪಿ ಪ್ರವೀಣ್​ ಸಿಂಗ್​ ಹಾಗೂ ಸಂತ್ರಸ್ತೆ ಸುಹಾಸಿ ಸಿಂಗ್​ (Techie) ಸಂಬಂಧಿಗಳಾಗಿದ್ದು, ಇಬ್ಬರು ಪ್ರತಿಷ್ಠಿತ ಐಟಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಸಂಬಂಧಿಕರಾಗಿದ್ದರಿಂದ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಇದನ್ನೇ ದುರುಪಯೋಗಪಡಿಸಿಕೊಂಡ ಆರೋಪಿ ಪ್ರವೀಣ್​ ಸಂತ್ರಸ್ತೆ ಜತೆಗಿರುವ ಖಾಸಗಿ ಕ್ಷಣದ ಫೋಟೋ ಹಾಗೂ ವಿಡಿಯೋ ತೆಗೆದು ಬ್ಲಾಕ್​ಮೇಲ್​ ಮಾಡಲು ಶುರು ಮಾಡಿದ್ದಾನೆ.

ಜನವರಿ 12ರಂದು ಕೂಡ ಆರೋಪಿಯು ಸಂತ್ರಸ್ತೆಗೆ ಹೋಟೆಲಿಗೆ ಬರುವಂತೆ ಸೂಚಿಸಿದ್ದು, ಆರೋಪಿ ಬರಲು ಹೇಳಿದ್ದ ಹೋಟೆಲಿನಲ್ಲೇ ಸಂತ್ರಸ್ತೆ ಪೆಟ್ರೋಲ್‌ ಸುರಿದುಕೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಆತನ ಬಳಿ ಇದ್ದ ಪೆನ್​ಡ್ರೈವ್​ಅನ್ನು ವಶಕ್ಕೆ ಪಡೆದಿದ್ದು, ಪರಿಶೀಲನೆಗೆ ಕಳುಹಿಸಿದ್ದಾರೆ.