ಜಿಲ್ಲೆ

ಸಚಿವರ ಆದೇಶ ಮೀರಿ ಬೆಂಗಳೂರಿನಲ್ಲಿ ಮಕ್ಕಳಿಗೆ ತರಗತಿ ನಡೆಸಿದ ಶಾಲೆ!

Mandara

ಬೆಂಗಳೂರು: ಕರೊನಾ ವೈರಸ್ ಭೀತಿಯಲ್ಲಿ ರಾಜ್ಯದ ಎಲ್ಲ ಶಾಲೆ-ಕಾಲೇಜುಗಳಿಗೆ ರಜೆ ಘೊಷಿಸಿದ್ದರೂ ಸೋಮವಾರ ಬನ್ನೇರುಘಟ್ಟದ ಬೆಂಗಳೂರು ಪಬ್ಲಿಕ್ ಸ್ಕೂಲ್ ಪಾಠ ಮಾಡುವ ಮೂಲಕ ನಿರ್ಲಕ್ಷ್ಯನ ತೋರಿದೆ.

ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ಶಾಲೆಗಳಿಗೆ ರಜೆ ಘೊಷಿಸಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಸರ್ಕಾರದ ಆದೇಶ ಧಿಕ್ಕರಿಸಿ ತರಗತಿ ನಡೆಸಲಾಗುತ್ತಿದೆ. ಶಾಲೆಗಳಿಗೆ ರಜೆ ಘೊಷಿಸಿ 3 ದಿನ ಕಳೆದಿದೆ. ಹೀಗಿದ್ದರೂ ಶನಿವಾರ ಮತ್ತು ಸೋಮವಾರ ತರಗತಿ ನಡೆಸಲಾಗಿದೆ. 6ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕೂಡ ನಡೆಸಿದೆ ಎಂದು ತಿಳಿದು ಬಂದಿದೆ. ಮಕ್ಕಳಿಗೆ ಮಾಹಿತಿ ಇಲ್ಲದೆ ಶಾಲೆಗಳಿಗೆ ಬಂದಿದ್ದರು. ಅಂತಹ ಮಕ್ಕಳಿಗೆ ಪುನರಾವರ್ತನೆ ಮಾಡಿಸಲಾಗುತ್ತಿದೆ. ತರಗತಿ ಅಥವಾ ಪರೀಕ್ಷೆ ನಡೆಸುತ್ತಿಲ್ಲ ಎಂದು ಶಾಲೆಯ ಪ್ರಾಂಶುಪಾಲರು ಸಮರ್ಥಿಸಿಕೊಂಡಿದ್ದಾರೆ.