ಬೆಂಗಳೂರು: ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಮೋಸವೆಸಗುತ್ತಿದ್ದ ಅಂತಾರಾಜ್ಯ ವಂಚಕರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್ಐಆರ್ ದಾಖಲಾಗಿದೆ.
ಕೇರಳ ಮೂಲದ ಅಮ್ಜದ್ ಮತ್ತು ಖುಷಿ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ತಾನೋರ್ವ ಬಿಲ್ಡರ್ ಎಂದು ಪರಿಚಯಿಸಿಕೊಂಡು ಅನೇಕರಿಗೆ ಅಮ್ಜದ್ ವಂಚನೆ ಎಸಗಿದ್ದಾನೆಂದು ತಿಳಿದುಬಂದಿದೆ. ಆತನ ಕೃತ್ಯಕ್ಕೆ ಖಷಿ ಎಂಬ ಮಹಿಳೆಯು ಸಹ ಕೈಜೋಡಿಸಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: VIDEO| ರಾತ್ರಿ ತನ್ನಷ್ಟಕ್ಕೆ ತಾನೇ ವರ್ಕೌಟ್ ಮಾಡುತ್ತಿರೋ ಜಿಮ್ ಯಂತ್ರ: ನಿಗೂಢ ಭೇದಿಸಿದ ಪೊಲೀಸರು!
ಬೆಂಗಳೂರಿನ ಉದ್ಯಮಿ ಶಾಜೀ ಜಾರ್ಜ್ ಥಾಮಸ್ ಎಂಬುವವರಿಗೂ ವಂಚಿಸಿರುವುದಲ್ಲದೆ, ಪಾವತಿಸಬೇಕಾದ ಹಣ ಕೇಳಿದಕ್ಕೆ ಜೀವ ಬೆದರಿಕೆ ಹಾಕಿದ್ದಾನಂತೆ.
ಘಟನೆ ಹಿನ್ನೆಲೆ ಏನು?
48 ಲಕ್ಷ ರೂ.ಗೆ ಬೆನ್ಜ್ ಕಾರು ಖರೀದಿಸುವುದಾಗಿ ಹೇಳಿ ಖತರ್ನಾಕ್ ಜೋಡಿ ಥಾಮಸ್ ಅವರಿಗೆ ವಂಚಿಸಿದೆ. ಬೆನ್ಜ್ ಕಾರು ಕೊಂಡ್ಯೂಯ್ದು ಎರಡು ತಿಂಗಳಾದರೂ ಹಣ ನೀಡದೆ ಆಟವಾಡಿಸುತ್ತಿರುವ ಅಮ್ಜದ್, ಹಣ ಕೇಳಿದ್ರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಇದೀಗ ಮತ್ತೊಂದು ವರಸೆ ತೆಗೆದಿರುವ ಅಮ್ಜದ್ ಬೆನ್ಜ್ ಕಾರನ್ನು 18 ಲಕ್ಷ ವೆಚ್ಚವಾಗುವಷ್ಟು ಹಾಳುಗೆಡವಿದ್ದಾನೆ.
ಶಾಜೀ ಜಾರ್ಜ್ ಥಾಮಸ್ ದೂರಿನ ಹಿನ್ನಲೆ ಎಫ್ಐಆರ್ ದಾಖಲಾಗಿದೆ. ಕೇರಳ ಸೇರಿದಂತೆ ರಾಜ್ಯದ ಹಲವೆಡೆ ವಂಚನೆ ಎಸಗಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಎಸ್ಕೇಪ್ ಆಗಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. (ದಿಗ್ವಿಜಯ ನ್ಯೂಸ್)