ಜಿಲ್ಲೆ

ಮನೆ ಮುಂದೆ ನಿಲುಗಡೆಗೂ ಶುಲ್ಕ- ಬೆಂಗಳೂರು ಪಾರ್ಕಿಂಗ್ ಕರಡು ನೀತಿ ಪ್ರಕಟ | ಆಕ್ಷೇಪಣೆಗೆ ಏ.15ರವರೆಗೆ ಅವಕಾಶ

Mysuru Rural

ಬೆಂಗಳೂರು: ನಗರದ ಪ್ರಮುಖ, ಸಣ್ಣಪುಟ್ಟ ರಸ್ತೆಗಳಲ್ಲಿ, ಮನೆಯೆದುರಿನ ರಸ್ತೆಗಳಲ್ಲಿ ಉಚಿತವಾಗಿ ಕಾರು, ಬೈಕ್ ನಿಲ್ಲಿಸುವ ಮಾಡುವ ಪರಿಪಾಠಕ್ಕೆ ಬ್ರೇಕ್ ಹಾಕುವತ್ತ ರಾಜ್ಯ ಸರ್ಕಾರ ಹೆಜ್ಜೆ ಇಟ್ಟಿದೆ. ರಸ್ತೆಯಲ್ಲಿ ವಾಹನ ನಿಲ್ಲಿಸಿ ಸಂಚಾರ ದಟ್ಟಣೆಗೆ ಕಾರಣವಾಗುತ್ತಿರುವುದನ್ನು ನಿವಾರಿಸುವ ಜತೆಗೆ ಹೊಸ ಆದಾಯದ ಮೂಲವನ್ನು ಕಂಡುಕೊಳ್ಳು ವತ್ತ ‘ಬೆಂಗಳೂರು ರ್ಪಾಂಗ್ ನೀತಿ’ಯನ್ನು ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿದೆ. ನೀತಿಯ ಕುರಿತು ಸಾರ್ವಜನಿಕರ ಆಕ್ಷೇಪಣೆಗೆ ಏ.15ರವರೆಗೆ ಕಾಲಾವಕಾಶ ನೀಡಲಾಗಿದೆ.

ಉಚಿತ ಇಲ್ಲ: ಬೆಂಗಳೂರಿನ ಎಲ್ಲ ರಸ್ತೆಗಳನ್ನೂ ವಿವಿಧ ವರ್ಗಗಳಾಗಿ ವಿಂಗಡಿಸಿ, ಪಾರ್ಕಿಂಗ್ ಕಲ್ಪಿಸಬೇಕೇ- ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ. ರ್ಪಾಂಗ್​ಗೆ ಅವಕಾಶ ನೀಡಬೇಕು ಎಂದು ನಿರ್ಧಾರವಾಗುವ ಎಲ್ಲ ರಸ್ತೆಗಳಿಗೂ ‘ನೈಜ ಪ್ರಮಾಣದ’ ಶುಲ್ಕ ಭರಿಸ ಬೇಕು ಎಂದು ನೀತಿಯಲ್ಲಿ ತಿಳಿಸಲಾಗಿದೆ. ನೈಜ ಪಾರ್ಕಿಂಗ್ ಶುಲ್ಕ ಯಾವುದು ಎಂಬುದನ್ನು ಲೆಕ್ಕ ಹಾಕಲು ಸೂತ್ರವನ್ನೂ ನೀಡಲಾಗಿದೆ. ಪ್ರದೇಶದ ಭೂಮಿಯ ಮೌಲ್ಯವನ್ನು ಪ್ರಮುಖವಾಗಿಸಿಕೊಂಡು ಆಯಾ ಪ್ರದೇಶದ ವಾಣಿಜ್ಯ ಚಟುವಟಿಕೆ, ರಸ್ತೆಯ ಅಗಲಕ್ಕೆ ಅನುಗುಣವಾಗಿ ಶುಲ್ಕ ವಿಧಿಸಲಾಗುತ್ತದೆ.

ರಸ್ತೆಯ ಮೇಲೆ (ಆನ್​ಸ್ಟ್ರೀಟ್) ಹಾಗೂ ನಿಗದಿತ ಸ್ಥಳದಲ್ಲಿ (ಆಫ್​ಸ್ಟ್ರೀಟ್) ಎಂಬ ವಿಂಗಡಣೆ ಮಾಡಲಾಗಿದೆ. ಬಿಬಿಎಂಪಿ ವತಿಯಿಂದ ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗುವ ನಿಗದಿತ ಸ್ಥಳದಲ್ಲಿ ರ್ಪಾಂಗ್​ಗೆ ಒತ್ತು ನೀಡಲಾಗುತ್ತದೆ. ನಿಗದಿತ ಸ್ಥಳದ ರ್ಪಾಂಗ್ ಶುಲ್ಕಕ್ಕಿಂತಲೂ ರಸ್ತೆಯ ಮೇಲಿನ ರ್ಪಾಂಗ್ ಶುಲ್ಕವನ್ನು ಅಧಿಕವಾಗಿಸಬೇಕು. ಕಡಿಮೆ ಅವಧಿಯ ರ್ಪಾಂಗ್​ಗೆ ನೀಡುವ ಶುಲ್ಕಕ್ಕಿಂತ, ದೀರ್ಘಾವಧಿಯ ರ್ಪಾಂಗ್​ಗೆ ಹೆಚ್ಚಿನ ಶುಲ್ಕ ವಿಧಿಸಲು ತಿಳಿಸಲಾಗಿದೆ. ದೀರ್ಘಾವಧಿಗೆ ವಾಹನವನ್ನು ರಸ್ತೆಯಲ್ಲೇ ನಿಲ್ಲಿಸುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತದೆ ಎಂದು ತಿಳಿಸಲಾಗಿದೆ.

ನಾಲ್ಕು ಉದ್ದೇಶಗಳು: ಈ ಹಿಂದೆ ರೂಪಿಸಿದ್ದ ಪಾರ್ಕಿಂಗ್ ನೀತಿಯನ್ನು ದಶಕ ಕಳೆದರೂ ಜಾರಿ ಮಾಡದ ಸರ್ಕಾರ, ಇದೀಗ ಅನೇಕ ವರ್ಷದ ಚರ್ಚೆಯ ನಂತರ ನೂತನ ನೀತಿ ಜಾರಿಗೆ ಮುಂದಾಗಿದೆ. ನಗರಾಭಿವೃದ್ಧಿ ಇಲಾಖೆಯ ಅಧೀನದ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಕರಡು ನೀತಿಯನ್ನು ಪ್ರಕಟಿಸಿದೆ. ನೀತಿಯನ್ನು ನಾಲ್ಕು ಉದ್ದೇಶಗಳಿಗಾಗಿ ವಿಂಗಡಣೆ ಮಾಡಿಕೊಳ್ಳಲಾಗಿದೆ.

  • ಅರಾಜಕಕ ಪಾರ್ಕಿಂಗ್ ​ನಿಂದ ಸಂಘಟಿತ ಪಾರ್ಕಿಂಗ್  ವ್ಯವಸ್ಥೆ ಅಗತ್ಯ.
  •  ಉಚಿತ ಪಾರ್ಕಿಂಗ್  ವ್ಯವಸ್ಥೆಯಿಂದ ಪಾವತಿಸಿದ ಪಾರ್ಕಿಂಗ್​ನತ್ತ ಬದಲಾವಣೆ.
  •  ಸರ್ಕಾರಿ ಚಾಲಿತ ಪಾರ್ಕಿಂಗ್​ನಿಂದ ಖಾಸಗಿ ಹಾಗೂ ಬೇಡಿಕೆ ಆಧಾರಿತ ಪಾರ್ಕಿಂಗ್​ಗೆ ಬದಲಾವಣೆ
  • ದುರ್ಬಲ ಪಾರ್ಕಿಂಗ್ ನಿರ್ವಹಣೆಯಿಂದ ಕ್ರಿಯಾಶೀಲ ಪಾರ್ಕಿಂಗ್ ಬೇಡಿಕೆ ನಿರ್ವಹಣೆಯತ್ತ ಹೊರಳುವಿಕೆ.

ಪ್ರಮುಖ ಅಂಶಗಳು ಪಾರ್ಕಿಂಗ್ ಉಚಿತವಾಗಿರುವ, ಅತ್ಯಂತ ಕಡಿಮೆ ಶುಲ್ಕವಿರುವ ಹಾಗೂ ಇತರೆ ಶುಲ್ಕದ ಜತೆಗೆ ಸೇರಿಸಿರುವ ಕಾರಣಕ್ಕೆ ಬಳಕೆದಾರರು ಪಾರ್ಕಿಂಗ್​ಗೆ ‘ನಿಜವಾದ’ ಶುಲ್ಕವನ್ನು ಪಾವತಿ ಮಾಡುತ್ತಿಲ್ಲ. ನಮ್ಮ ಮೆಟ್ರೋ, ಟಿಟಿಎಂಸಿ, ರೈಲು ನಿಲ್ದಾಣ ಸೇರಿ ಯಾವುದೇ ಬೃಹತ್ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸುತ್ತಲಿನ 250 ಮೀಟರ್ ಸುತ್ತಳತೆಯಲ್ಲಿರುವ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ರದ್ದು. ರಸ್ತೆಯ ಮೇಲೆ ಕೇವಲ 2 ಗಂಟೆ ರ್ಪಾಂಗ್​ಗೆ ಅವಕಾಶ ನೀಡಬೇಕು. 48 ಗಂಟೆ ರಸ್ತೆಯಲ್ಲೆ ಪಾರ್ಕಿಂಗ್ ಮಾಡಿದರೆ ದುಪ್ಪಟ್ಟು ಶುಲ್ಕ, ನಿಗದಿತ ಶುಲ್ಕ ಪಾವತಿಸದೆ 96 ಗಂಟೆ ಪಾರ್ಕಿಂಗ್ ಮಾಡಿದರೆ ಸಂಚಾರ ಪೊಲೀಸರಿಂದ ಕಾನೂನು ಕ್ರಮ. ಪಾರ್ಕಿಂಗ್ ಶುಲ್ಕ ಪಾವತಿಸಲು ಬಳಕೆದಾರ ಸ್ನೇಹಿ ಹಾಗೂ ಮೋಸ ಮಾಡಲು ಅವಕಾಶವಿಲ್ಲದ ತಂತ್ರಜ್ಞಾನ ವ್ಯವಸ್ಥೆಯನ್ನು ರೂಪಿಸಬೇಕು. ರಮೇಶ ದೊಡ್ಡಪುರ