ಜಿಲ್ಲೆ

ಬೆಂಗಳೂರು-ಕಲಬುರಗಿ ಬೇಸಿಗೆ ವಿಶೇಷ ರೈಲು ಸೇವೆ ರದ್ದು

ಬೆಂಗಳೂರು: ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿನ ಕಾರ್ಯಾಚರಣೆ ರ್ನಿಬಂಧಗಳ ಹಿನ್ನೆಲೆ ಬೆಂಗಳೂರಿನ ಸರ್​.ಎಂ. ವಿಶ್ವೇಶ್ವರಯ್ಯ ಟರ್ಮಿನಲ್​ ನಿಲ್ದಾಣ ಮತ್ತು ಕಲಬುರಗಿ ನಿಲ್ದಾಣಗಳ ನಡುವೆ ಸಂಚರಿಸುವ ಬೇಸಿಗೆ ವಿಶೇಷ ಎಕ್ಸ್​ಪ್ರೆಸ್​ ರೈಲುಗಳ (ಸಂಖ್ಯೆ 06261/ 06262) ಸೇವೆ ರದ್ದುಪಡಿಸಲಾಗಿದೆ.

ಎಸ್​ಎಂವಿಟಿ ಬೆಂಗಳೂರಿನಿಂದ ಇದೇ ತಿಂಗಳು 29ರಿಂದ ಜೂ.27ರ ವರೆಗೆ ಹಾಗೂ ಕಲಬುರಗಿಯಿಂದ ಇದೇ ತಿಂಗಳು 30ರಿಂದ ಜೂ. 28ರ ವರೆಗೆ ರದ್ದತಿ ಜಾರಿಗೆ ಬರಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಇತರ ಕಡೆಗಳಲ್ಲಿಯೂ ರೈಲು ಸಂಚಾರದಲ್ಲಿ ವ್ಯತ್ಯಯ

ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್​​​​​ನಲ್ಲಿ ಪ್ಲಾಟ್​​ಫಾರ್ಮ್​​ ವಿಸ್ತರಣೆಗಾಗಿ 36 ಗಂಟೆಗಳ ಸಂಚಾರ ನಿರ್ಬಂಧದ ಕಾರಣ ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ ಮೇ 31 ಮತ್ತು ಜೂನ್ 2 ರ ನಡುವೆ 69 ದೂರ ಸಂಚಾರದ ರೈಲುಗಳು ರದ್ದಾಗಿವೆ. 24 ಕೋಚ್ ಸಾಮರ್ಥ್ಯದ ರೈಲುಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಡುವುದಕ್ಕೆ ಸಂಬಂಧಿಸಿದ ವಿಸ್ತರಣಾ ಕಾಮಗಾರಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್​​​​​ನಲ್ಲಿ ನಡೆಯುತ್ತಿದೆ. ಇದು ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ ಇತರ ರೈಲುಗಳ ಸಂಚಾರದ ಮೇಲೂ ಪರಿಣಾಮ ಬೀರಿದೆ.

ದಕ್ಷಿಣ ರೈಲ್ವೆಯು ಸದ್ಯ ಉಪನಗರ ರೈಲುಗಳನ್ನು ಭಾಗಶಃ ರದ್ದುಗೊಳಿಸಿದೆ. ಚೆನ್ನೈ ಬೀಚ್ – ಚೆಂಗಲ್‌ಪೇಟ್ ಎಮು ಮೂಲಕ ಸಂಚರಿಸುವವರು ಚೆನ್ನೈ ಬೀಚ್‌ನಿಂದ ಹೊರಡುವುದು ಸಿಂಗಪೆರುಮಾಳ್ ಕೋಯಿಲ್‌ವರೆಗೆ ಮಾತ್ರ ಸಂಚರಿಸಬಹುದಾಗಿದೆ.

ದಕ್ಷಿಣ ರೈಲ್ವೆಯು ಭಾನುವಾರ ರಾತ್ರಿ ತಿರುಚ್ಚಿಯಿಂದ ಕುಂಭಕೋಣಂ ಮತ್ತು ಮೈಲಾಡುತುರೈ ಮೂಲಕ ತಾಂಬರಂಗೆ ಮೆಮು ವಿಶೇಷ ರೈಲನ್ನು ಓಡಿಸಲಿದೆ. ಆದರೆ, ಇದರಲ್ಲಿ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಇರುವುದಿಲ್ಲ.