ಜಿಲ್ಲೆ

6 ಲಕ್ಷಕ್ಕೂ ಅಧಿಕ ಕೆ.ಜಿ. ಮಾವು ರಫ್ತು ಮಾಡಿದ ಕೆಐಎ!

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಸ್ತುತ ವರ್ಷದಲ್ಲಿ 6,84,648 ಕೆ.ಜಿ.ಯಷ್ಟು ಮಾವಿನಹಣ್ಣನ್ನು ರಫ್ತು ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಋತುವಿನಲ್ಲಿ ಶೇ.124 ರಷ್ಟು ಏರಿಕೆ ಕಂಡಿದೆ.

ಬೆಂಗಳೂರು ಇಂಟರ್​ನ್ಯಾಶನಲ್​ ಏರ್​ಪೋರ್ಟ್​ ಲಿಮಿಟೆಡ್​ನ (ಬಿಐಎಎಲ್​) ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸತ್ಯಕಿ ರುನಾಥ್​ ಮಾತನಾಡಿ, ಬಿಎಲ್​ಆರ್​ ವಿಮಾನ ನಿಲ್ದಾಣವು ಭಾರತದಿಂದ ಫೆರಿಷಬಲ್​ ರಫ್ತುಗಳನ್ನು ಸುಗಮಗೊಳಿಸುವಲ್ಲಿ ಚಾಲನಾ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಗಣನೀಯ ಪ್ರಮಾಣದ ಷೇರುಗಳೊಂದಿಗೆ, ದಣ ಭಾರತದ ಮಾವಿನಹಣ್ಣಿನ ಜಾಗತಿಕ ವ್ಯಾಪ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ವ್ಯವಸ್ಥಿತ ಕೂಲ್​&ಪೋರ್ಟ್​ನಿಂದ ರಫ್ತು ವ್ಯವಹಾರ ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.

ಪ್ರಸಕ್ತ ಋತುವಿನಲ್ಲಿ ಕಾಯಿಗಳ ರಫ್ತಿನಲ್ಲಿ ಶೇ.86 ಹೆಚ್ಚಳ ಕಂಡಿದೆ. ಒಟ್ಟಾರೆಯಾಗಿ 17 ಲದಷ್ಟು ಮಾವಿನಹಣ್ಣುಗಳನ್ನು ರಫ್ತು ಮಾಡಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದ ರ್ತು ಜಾಲವು 60ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಥಳಗಳಿಗೆ ವಿಸ್ತರಿಸಿಕೊಂಡಿದೆ. ಈ ವರ್ಷ ಯುನೈಟೆಡ್​ ಸ್ಟೇಟ್ಸ್​ಗೆ ಮಾವಿನಹಣ್ಣಿನ್ನು ವಿಶೇಷವಾಗಿ ರಫ್ತು ಮಾಡಲಾಗಿದೆ. ಡಲ್ಲಾಸ್​ ಫೋರ್ಟ್​ ವರ್ತ್​, ವಾಷಿಂಗ್ಟನ್​ ಡಿಸಿ ಮತ್ತು ಸ್ಯಾನ್​ ಫ್ರಾನ್ಸಿಸ್ಕೋದಂತಹ ಪ್ರಮುಖ ಮೆಟ್ರೋಪಾಲಿಟನ್​ ಪ್ರದೇಶಗಳು ಈ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.