ಜಿಲ್ಲೆ

ಬೆಂಗಳೂರಿನ ಹೆಗಡೆನಗರದಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಹೊತ್ತಿ ಉರಿದ ಗೋದಾಮು; 12 ಮಂದಿ ಕಾರ್ಮಿಕರು ಪಾರು

ಬೆಂಗಳೂರು: ಫರ್ನೀಚರ್ ತುಂಬಿದ್ದ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದಿದ್ದು 12 ಮಂದಿ ಅದೃಷ್ಟವಶಾತ್​ ಪಾರಾಗಿದ್ದಾರೆ. ಅವಘಡ ತಡರಾತ್ರಿ 2.30ಕ್ಕೆ ಹೆಗಡೆನಗರದಲ್ಲಿ ನಡೆದಿದೆ

ನೋಡ ನೋಡುತ್ತಲೆ ಗೋದಾಮು ಸುತ್ತ ಅಗ್ನಿ ಆವರಿಸಿದೆ. ಸ್ಥಳಕ್ಕೆ 6 ಆಗ್ನಿಶಾಮಕ ವಾಹನ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದವು. ಸದ್ಯ ಬೆಂಕಿ ಹತೋಟಿಗೆ ಬಂದಿದೆ. ಸತತ ಒಂದೂವರೆ ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ. ದಾಮೋದರ್ ಎಂಬುವರಿಗೆ ಸೇರಿದ ಗೋದಾಮು ಎಂದು ತಿಳಿದು ಬಂದಿದೆ.

ಮಧ್ಯರಾತ್ರಿ 2.30ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಗೋದಾಮಿನ ಹೊರಗಿರುವ ಕಸದ ರಾಶಿಗೆ ಹೊತ್ತಿಕೊಂಡುನಂತರ ಎಲ್ಲೆಡೆ ಆವರಿಸಿತ್ತು.

ರಾತ್ರಿ ವೇಳೆ ಫರ್ನೀಚರ್ ಗೋದಾಮಿನಲ್ಲಿ 12 ಮಂದಿ ಮಲಗಿದ್ದರು. ಒಳಗೆ ಮಲಗಿದ್ದ ಫರ್ಹಾನ್ ಎಂಬ ಕಾರ್ಮಿಕನಿಗೆ ಎಚ್ಚರವಾಗಿದ್ದು, ತಕ್ಷಣವೇ ಇನ್ನುಳಿದ 11 ಮಂದಿ ಕಾರ್ಮಿಕರನ್ನು ಎಬ್ಬಿಸಿ ಹೊರ ಕರೆದುಕೊಂಡು ಬಂದಿದ್ದಾನೆ. ಫರ್ಹಾನ್ ಸಮಯ ಪ್ರಜ್ನೆಯಿಂದ 11 ಮಂದಿ ಕಾರ್ಮಿಕರ ಪ್ರಾಣ ಉಳಿದಿದೆ.