ಜಿಲ್ಲೆ

ಬೆಂಗಳೂರು-ಬೆಳಗಾವಿ ವಂದೇ ಭಾರತ ರೈಲು

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಕೆಎಸ್​ಆರ್ ಬೆಂಗಳೂರು-ಬೆಳಗಾವಿ-ಕೆಎಸ್​ಆರ್ ಬೆಂಗಳೂರು ಹೊಸ ವಂದೇ ಭಾರತ ಅರೆ ಹೈಸ್ಪೀಡ್ ರೈಲು ಬುಧವಾರ ಹೊರತುಪಡಿಸಿ, ವಾರದಲ್ಲಿ ಆರು ದಿನ ಸಂಚರಿಸಲಿದೆ.

ಆ. 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಈ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಉದ್ಘಾಟನೆಯ ದಿನ ಈ ರೈಲು ಕೆಎಸ್​ಆರ್ ಬೆಂಗಳೂರಿನಿಂದ ಬೆಳಗ್ಗೆ 11.15ಕ್ಕೆ ಹೊರಡುವ ರೈಲು, ಅದೇ ರಾತ್ರಿ 8 ಗಂಟೆಗೆ ಬೆಳಗಾವಿ ತಲುಪಲಿದೆ.

ಈ ರೈಲಿನ ನಿಯಮಿತ ಸೇವೆ ಆ. 11 ರಿಂದ ಆರಂಭಗೊಳ್ಳಲಿದೆ. ಈ ರೈಲು ಬೆಳಗಾವಿಯಿಂದ ಬೆಳಗಿನಜಾವ 5.20ಕ್ಕೆ ಹೊರಟು, ಅದೇ ದಿನ ಮಧ್ಯಾಹ್ನ 1.50ಕ್ಕೆ ಕೆಎಸ್​ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ. ಮಾರ್ಗ ಮಧ್ಯೆ ಧಾರವಾಡ (ಬೆಳಗ್ಗೆ 7.08/7.10 ಗಂಟೆ), ಎಸ್​ಎಸ್​ಎಸ್ ಹುಬ್ಬಳ್ಳಿ (7.30/7.35 ), ಎಸ್​ಎಂಎಂ ಹಾವೇರಿ (8.35/8.37 ), ದಾವಣಗೆರೆ (9.25/9.27), ತುಮಕೂರು (ಮಧ್ಯಾಹ್ನ 12.15/12.17 ) ಮತ್ತು ಯಶವಂತಪುರ (1.03/1.05) ನಿಲ್ದಾಣಗಳಲ್ಲಿ ನಿಲ್ಲಲಿದೆ.

ಮರಳಿ ಪ್ರಯಾಣಿಸುವಾಗ ಈ ರೈಲು ಕೆಎಸ್​ಆರ್ ಬೆಂಗಳೂರು ನಿಲ್ದಾಣದಿಂದ ಮಧ್ಯಾಹ್ನ 1.20ಕ್ಕೆ ಹೊರಟು, ರಾತ್ರಿ 10.40 ಕ್ಕೆ ಬೆಳಗಾವಿ ತಲುಪಲಿದೆ. ಮಾರ್ಗ ಮಧ್ಯೆ ಯಶವಂತಪುರ (2.28/2.30), ತುಮಕೂರು (3.03/3.05), ದಾವಣಗೆರೆ (5.48/5.50 ), ಎಸ್​ಎಂಎಂ ಹಾವೇರಿ (6.48/6.50 ), ಎಸ್​ಎಸ್​ಎಸ್ ಹುಬ್ಬಳ್ಳಿ (8/8.05) ಮತ್ತು ಧಾರವಾಡ (8.25/8.27) ನಿಲ್ದಾಣಗಳಲ್ಲಿ ನಿಲ್ಲುತ್ತದೆ.