ಜಿಲ್ಲೆ

Bengaluru Bandh; ಪೊಲೀಸರಿಗೆ ನೀಡಿದ ಊಟವನ್ನು ಪರಿಶೀಲಿಸಿದ ಕಮಿಷನರ್ ಬಿ.ದಯಾನಂದ್

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರದಲ್ಲಿ ಉಂಟಾಗಿರುವ ವಿವಾದ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ ನೆರೆ ರಾಜ್ಯಕ್ಕೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಇಂದು ಕನ್ನಡ ಪರ ಸಂಘಟನೆಗಳು ಮತ್ತು ರೈತರು ಕರೆ ನೀಡಿರುವ ಬಂದ್‌ಗೆ, ಮೊದಲ ದಿನ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ನೀಡಿದ್ದ ಬೆಳಗಿನ ತಿಂಡಿ ಪ್ಯಾಕೆಟ್‌ನಲ್ಲಿ ಇಲಿಯೊಂದು ಪತ್ತೆಯಾಗಿತ್ತು.

ಈ ಕುರಿತಾಗಿ ಆಕ್ರೋಶವ್ಯಕ್ತವಾಗಿದ್ದು, ಊಟ ಸರಬರಾಜು ಮಾಡಿದ ಹೋಟೆಲ್‌ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಮಿಷನರ್ ಖುದ್ದಾಗಿ ಊಟ ಪರಿಶೀಲನೆ ಮಾಡಿದ್ದಾರೆ.

 ನಡೆದಿದ್ದೇನು?: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ಕೈಗೊಂಡಿದ್ದ ಬೆಂಗಳೂರು ಬಂದ್‌ಗೆ ಭದ್ರತೆಗಾಗಿ ಮೊದಲ ದಿನ ಬೆಂಗಳೂರು ನಗರ ಪೊಲೀಸ್‌ ಇಲಾಖೆಯು ಹೊರ ಜಿಲ್ಲೆಗಳು ಹಾಗೂ ಬೆಂಗಳೂರಿನ ಹೊರ ವಲಯದ ವಿವಿಧ ಪೊಲೀಸ್‌ ಠಾಣೆಯಿಂದ ಬೆಂಗಳೂರು ಬಂದ್‌ ಭದ್ರತೆಗೆ ಬಂದ ಪೊಲೀಸ್‌ ಸಿಬ್ಬಂದಿಗೆ ಮೊದಲ ದಿನ ಬಂದ್​​​ನಲ್ಲಿ ಇಲಿ ಸತ್ತು ಬಿದ್ದಿರುವ ಊಟವನ್ನು ಸರಬರಾಜು ಮಾಡಲಾಗಿತ್ತು.

ಪೊಲೀಸ್‌ ಸಿಬ್ಬಂದಿಗೆ ಕಳಪೆ ಊಟ (ಊಟದಲ್ಲಿ ಸತ್ತಿರುವ ಇಲಿ ಪತ್ತೆ) ಸರಬರಾಜು ಮಾಡಿದ ಹೋಟೆಲ್‌ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಪ್ರತಿಭಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಬಿ.ದಯಾನಂದ್ ಭೇಟಿ ಕೊಟ್ಟು ಪೊಲೀಸರಿಗೆ ನೀಡಿದ್ದ ಊಟವನ್ನು ಪರಿಶೀಲನೆ ನಡೆಸಿದ್ದಾರೆ.