ಬೆಂಗಳೂರು ಸರ್ಕಾರದ ಶಕ್ತಿ ಯೋಜನೆಯನ್ನು ವಿರೋಧಿಸಿ ಖಾಸಗಿ ವಾಹನ ಮಾಲೀಕರು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸೋಮವಾರ (ಸೆ.11) ಖಾಸಗಿ ವಾಹನಗಳನ್ನು ಅಬಲಂಬಿಸಿರುವ ಶಾಲೆಗಳಿಗೆ ರಜೆ ನೀಡಲಾಗಿದೆ.
ಉಳಿದಂತೆ ಶಾಲಾ ಆಡಳಿತ ಮಂಡಳಿಗಳೇ ವಾಹನಗಳನ್ನು ಹೊಂದಿರುವ ಶಾಲೆಗಳು ಎಂದಿನಂತೆಯೇ ಕಾರ್ಯನಿರ್ವಹಿಸಲಿವೆ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಸ್ಪಷ್ಟಪಡಿಸಿವೆ. ಹೋರಾಟಕ್ಕೆ ನೈತಿಕ ಬೆಂಬಲ ನೀಡುವುದಾಗಿ ತಿಳಿಸಿವೆ.
ಶಾಲೆಗಳಿಗೆ ರಜೆ ನೀಡುವ ಸಂಬಂಧ ಸಂಘಟನೆಗಳು ಅಧಿಕೃತವಾಗಿ ಯಾವುದೇ ಆದೇಶಗಳು ಹಾಗೂ ನಿರ್ದೇಶನಗಳನ್ನು ನೀಡಿಲ್ಲ. ಆದರೆ, ಖಾಸಗಿ ವಾಹನಗಳು ಬಾರದಿದ್ದರೆ, ಶಾಲೆಗಳಿಗೆ ಮಕ್ಕಳನ್ನು ಕರೆತರುವ ಜವಾಬ್ದಾರಿಯನ್ನು ಪಾಲಕರೇ ಹೊರುವಂತೆ ಸೂಚನೆ ನೀಡಿವೆ. ಮತ್ತೊಂದೆಡೆ, ಮುನ್ನೆಚ್ಚರಿಕಾ ಕ್ರಮವಾಗಿ ಸಂಪೂರ್ಣವಾಗಿ ರಜೆ ೋಷಿಸಿವೆ.
ಈ ಕುರಿತತ ಮಾತನಾಡಿದ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಖಾಸಗಿ ಶಾಲಾ ವಾಹನ ಸಂಘಟನೆ ಮಾಲೀಕರು ಮತ್ತು ಚಾಲಕರು ತಾವು ವಾಹನಗಳನ್ನು ಚಲಾಯಿಸುವುದಿಲ್ಲವೆಂದು ನಿರ್ಣಯಿಸಿ ಬಂದ್‌ಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷವಾಗಿ ಕೆಲವು ಶಾಲೆಗಳು ರಜೆ ೋಷಿಸಿವೆ ಎಂದು ಹೇಳಿದ್ದಾರೆ.
ಶಾಲೆಗಳಿಗೆ ರಜೆ ಇರುವುದಿಲ್ಲ. ಆದರೆ, ಎಲ್ಲೆಲ್ಲಿ ಶಿಕ್ಷಣ ಸಂಸ್ಥೆಗಳು ಖಾಸಗಿ ವಾಹನಗಳನ್ನು ಅವಲಂಬಿಸಿರುವವರಿಗೆ ಕೆಲವಡೆ ಸಮಸ್ಯೆ ಎದುರಾಗಬಹುದು. ಪಾಲಕರು ತಮ್ಮ ಜವಾಬ್ದಾರಿ ಹೊತ್ತು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಬೇಕಾಗುತ್ತದೆ ಎಂದು ತಿಳಿಸಿದರು.
ಖಾಸಗಿ ಶಾಲಾ ವಾಹನಗಳ ಚಾಲಕರು ಕೂಡ ಶಿಕ್ಷಣ ಸಂಸ್ಥೆಗಳ ಒಂದು ಭಾಗವಾಗಿರುವ ಕಾರಣ ಸರ್ಕಾರವು ಅವರ ಸಮಸ್ಯೆಗಳನ್ನು ಚರ್ಚಿಸಿ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಸುಮಾರು 150ಕ್ಕೂ ಹೆಚ್ಚಿನ ಶಾಲೆಗಳಿಗೆ ರಜೆ ನೀಡಲಾಗಿದೆ. ಉಳಿದ ಶಾಲೆಗಳು ಎಂದಿನಂತೆಯೇ ಕಾರ್ಯನಿರ್ವಹಿಸಲಿವೆ. ವಿದ್ಯಾರ್ಥಿಗಳು ಹಾಗೂ ಶಾಲಾ ಆಡಳಿತ ಮಂಡಳಿಗಳು ಪರಸ್ಪರ ಸಂವಹನ ನಡೆಸಿ ರಜೆ ನಿರ್ಧರಿಸುವಂತೆ ಸೂಚಿಸಲಾಗಿದೆ. - ಲೋಕೇಶ್ ತಾಳಿಕಟ್ಟೆ, ಅಧ್ಯಕ್ಷ, ರುಪ್ಸಾ ಸಂಘಟನೆ