ಜಿಲ್ಲೆ

ದುರ್ಗದ ಆಡುಮಲ್ಲೇಶ್ವರ ಮೃಗಾಲಯಕ್ಕೆ ಬೆಂಗಾಲ್ ಟೈಗರ್ಸ್‌

Chitradurga

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಿಂದ ಒಂದು ಜೋಡಿ ಬೆಂಗಾಲ್ ಟೈಗರ್ಸ್‌ ಮಂಗಳವಾರ ರಾತ್ರಿ ಚಿತ್ರದುರ್ಗ ಆಡುಮಲ್ಲೇಶ್ವರ ಸಣ್ಣ ಮೃಗಾಲಯವನ್ನು ತಲುಪಿವೆ.

ನಗರದ ಹೊರವಲಯ ಜೋಗಿಮಟ್ಟಿ ಆಡುಮಲ್ಲೇಶ್ವರ ಮೃಗಾಲಯದಲ್ಲಿ ನಾಲ್ಕು ಹುಲಿಗಳನ್ನು ಸಾಕಲು ಅವಕಾಶವಾಗುವಂತೆ 2700 ಚ.ಮೀ.ವಿಸ್ತೀರ್ಣ, ಅಂದಾಜು 67 ಲಕ್ಷ ರೂ. ವೆಚ್ಚದಲ್ಲಿ ಟೈಗರ್ ಎನ್‌ಕ್ಲೋಸರ್ ನಿರ್ಮಿಸಲಾಗಿದೆ. ಇಲ್ಲಿಗೆ ಮೈಸೂರು ಮೃಗಾಲಯದಲ್ಲಿ ಜನಿಸಿರುವ ನಾಲ್ಕು ವರ್ಷದ ನಿಶಾ ಹೆಸರಿನ ಹೆಣ್ಣು ಹುಲಿ ಹಾಗೂ ಒಂದು ವರ್ಷದ ಇನ್ನೂ ಹೆಸರಿಡದ ಗಂಡು ಹುಲಿ ಮರಿಯನ್ನು ದುರ್ಗಕ್ಕೆ ಕರೆತರಲಾಗುತ್ತಿದೆ. ಮಂಗಳವಾರ ತಡರಾತ್ರಿ ಅಥವಾ ಬುಧವಾರ ಬೆಳಗಿನ ಜಾವಕ್ಕೆ ಹುಲಿಗಳು ದುರ್ಗವನ್ನು ತಲುಪಲಿವೆ ಎಂದು ಅಧಿಕಾರಿಗಳು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ಹುಲಿಗಳು ಆಡುಮಲ್ಲೇಶ್ವರ ಮೃಗಾಲಯಕ್ಕೆ ಬಂದ ಬಳಿಕ ಅವು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯಾವಕಾಶ ಬೇಕಾ ಗುತ್ತದೆ. ಹೊಸದಾಗಿ ನಿರ್ಮಿಸಿರುವ ಹುಲಿ ಮನೆ ಇನ್ನೂ ಉದ್ಘಾಟನೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಕನಿಷ್ಠ 10 ದಿನಗಳ ಕಾಲ ಹು ಲಿಗಳನ್ನು ನೋಡಲು ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ.

ಹುಲಿಮನೆ ಉದ್ಘಾಟನೆ ಬಳಿಕವೇ ಮೃಗಾಲಯಕ್ಕೆ ಭೇಟಿ ನೀಡುವಂಥವರಿಗೆ ಹುಲಿಗಳನ್ನು ನೋಡಲು ಅವಕಾಶ ಸಿಗಲಿದೆ ಎಂದು ರಾ ಜ್ಯಮೃಗಾಲಯ ಪ್ರಾಧಿಕಾರದ ಕಾರ‌್ಯದರ್ಶಿ ಬಿ.ಪಿ.ರವಿ ತಿಳಿಸಿದ್ದಾರೆ.

ಈ ಹುಲಿಗಳನ್ನು ನೋಡಿಕೊಳ್ಳಲು ಈಗಾಗಲೇ ಆಡು ಮಲ್ಲೇಶ್ವರ ಮೃಗಾಲಯದ ಆಯ್ದ ಸಿಬ್ಬಂದಿಗೆ ಮೈಸೂರಲ್ಲಿ ತರಬೇತಿ ಕೊಡಿಸಲಾಗಿದೆ ಹಾಗೂ ಮೈಸೂರಿನಿಂದ ಆಗಮಿಸುವ ಸಿಬ್ಬಂದಿ ಕೂಡ ಇಲ್ಲಿ ಕೆಲ ದಿನಗಳ ಕಾಲ ವಾಸ್ತವ್ಯ ಹೂಡಿದ್ದಾರೆ.