ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ನಿಮಿತ್ತ ದೇವದುರ್ಗದ ಸಾರ್ವಜನಿಕ ಉದ್ಯಾನದಲ್ಲಿ ಬಿಜೆಪಿಯಿಂದ ಸ್ವಚ್ಛತಾ ಕಾರ್ಯ ನಡೆಯಿತು. ಎಸ್ಸಿ ಮೋರ್ಚಾ ಮಂಡಲ ಅಧ್ಯಕ್ಷ ರಮೇಶ ರಾಠೋಡ್, ಬಸವರಾಜ ಅಕ್ಕರಕಿ, ಸತೀಶ್ ಸಾಹುಕಾರ ಬಂಡೆಗುಡ್ಡ, ಜಹೀರ್ ಪಾಷಾ ಇಡಪನೂರು, ಸುನೀಲ್ ಕುಮಾರ್, ವೀರಣ್ಣಗೌಡ, ಕೊಂಡಯ್ಯ ನಾಯಕ, ರಮೇಶ್ ನಾಯಕ, ಮುರುಗಯ್ಯಸ್ವಾಮಿ ಇದ್ದರು. 
ಜಿಲ್ಲೆ

ಜನಪರ ಕಾರ್ಯಕ್ರಮಗಳಿಂದ ಅನುಕೂಲ

ನರೇಶ್ ಕುಮಾರ್

ದೇವದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರು ದೂರದೃಷ್ಟಿ ಇರಿಸಿಕೊಂಡು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಸ್ವಚ್ಛ ಭಾರತ ಅಭಿಯಾನ ಅದ್ಭುತವಾದ ಯೋಜನೆಯಾಗಿದ್ದು ಮಹಿಳೆಯರಿಗೆ ಭದ್ರತೆ ಒದಗಿಸಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ಮಂಡಲ ಅಧ್ಯಕ್ಷ ರಮೇಶ ರಾಠೋಡ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ನಿಮಿತ್ತ ಪಟ್ಟಣದ ನಗರಗುಂಡ ರಸ್ತೆಯಲ್ಲಿನ ಸಾರ್ವಜನಿಕ ಉದ್ಯಾನದಲ್ಲಿ ಆಯೋಜಿಸಿದ್ದ ಸ್ವಚ್ಛ ಶ್ರಮದಾನ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ ಯೋಜನೆ, ಜನಧನ, ಬಿಜಿಲಿ ಯೋಜನೆ ಸೇರಿ ವಿವಿಧ ಜನಪರ ಕಾರ್ಯಕ್ರಮ ಜಾರಿಗೊಳಿಸಿ ಬಡತನ ನಿವಾರಣೆ ಮಾಡಿದ್ದಾರೆ. ಅಲ್ಲದೆ ದೇಶದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಶತ್ರುಗಳಿಗೆ ತಕ್ಕಪಾಠ ಕಲಿಸಿದ್ದಾರೆ ಎಂದರು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಬಸವರಾಜ ಅಕ್ಕರಕಿ, ನಗರ ಘಟಕದ ಅಧ್ಯಕ್ಷ ಸತೀಶ್ ಸಾಹುಕಾರ ಬಂಡೆಗುಡ್ಡ, ಮುಖಂಡರಾದ ಮಂಜುನಾಥ್ ಡವಳಗಿ, ಲಿಂಗಪ್ಪ ಗೌಡರ್, ಮುರುಗಯ್ಯ ಸ್ವಾಮಿ, ಅಮರೇಶ್ ಮಡಿವಾಳ, ಗಿರೀಶ್ ರಾಠೋಡ್, ನರೇಶ ಜಾಧವ್, ದ್ಯಾಮಲಪ್ಪ ರಾಠೋಡ್, ಪಾಷಾ ನೀಲವಂಜಿ, ಶಿವು ಮಜ್ಜಿಗೆ, ನವೀನ್ ಕುಮಾರ್ ಅಕ್ಕರಕಿ ಇತರರಿದ್ದರು.