ಜಿಲ್ಲೆ

ಇಂದಿನಿಂದ 20ರವರೆಗೆ ರಾಜ್ಯಾದ್ಯಂತ ಫಲಾನುಭವಿಗಳ ಸಮಾವೇಶ

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

ವಿಧಾನಸಭಾಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗ ಒಂದೆಡೆ ವಿಜಯ ಸಂಕಲ್ಪ ಯಾತ್ರೆ, ಮತ್ತೊಂದೆಡೆ ಫಲಾನುಭವಿಗಳ ಸ ಮಾವೇಶಗಳ ಭರಾಟೆ.

ಪಕ್ಷ ಹಾಗೂ ಸರ್ಕಾರದ ಅಧಿಕೃತ ಕಾರ‌್ಯಕ್ರಮಗಳ ಮೂಲಕ ರಾಜ್ಯದಲ್ಲಿ ಭರ್ಜರಿ ಮತ ಇಳುವರಿ ಉದ್ದೇಶದೊಂದಿಗೆ ಬಿಜೆಪಿ, ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್,ಅಮಿತ್‌ಶಾ ಮೊದಲಾದ ಘಟಾನುಘಟಿ ನಾಯಕರೊಂದಿಗೆ ವಿಜಯ ಸಂಕಲ್ಪಯಾತ್ರೆ ಆರಂಭಿಸಿದೆ. ಈ ಯಾತ್ರೆಯೊಂದಿಗೆ ಫಲಾನುಭವಿಗಳ ಸಮಾವೇಶಕ್ಕೆ ಇಂದಿನಿಂದ ಮುನ್ನುಡಿ ಬರೆಯಲಿದೆ.

ಕೇಂದ್ರ-ರಾಜ್ಯ ಸರ್ಕಾರಗಳ ಫಲಾನುಭವಿಗಳ ಮೊದಲ ಸಮಾವೇಶಕ್ಕೆ ಚಿತ್ರದುರ್ಗದ ವಿಜ್ಞಾನ ಕಾಲೇಜು ಮೈದಾನದಲ್ಲಿ ಶನಿವಾರ ಚಾಲನೆ ಸಿಗಲಿದ್ದು,ರಾಜ್ಯಸರ್ಕಾರದ ಯೋಜನೆಗಳು ಹಾಗೂ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಸವಲತ್ತುಗಳನ್ನು ನೆನಪಿಸುವುದು. ಆ ಮೂಲಕ ಮತದಾರ ಪ್ರಭುಗಳನ್ನು ಓಲೈಸಲು ಬಿಜೆಪಿ ಸಜ್ಜಾ ಗುತ್ತಿದೆ. ಫಲಾನುಭವಿಗಳ ಸಮಾವೇಶ ಮಾರ್ಚ್ 20ರವರೆಗೆ ವಿವಿಧ ಜಿಲ್ಲೆಗಳಲ್ಲಿ ನಡೆಯಲಿದೆ. ಇದನ್ನು ಗಮನಿಸಿದರೆ ಮಾರ್ಚ್ ಕೊನೆ ವಾರದೊಳಗೆ ಚುನಾವಣೆ ಅಧಿಸೂಚನೆ ಪ್ರಕಟವಾಗಬಹುದೆನ್ನಲಾಗಿದೆ.

ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫಲಾನುಭವಿಗಳ ಸಮಾವೇಶ ಉದ್ಘಾಟಿಸುವರು. ಸಿಎಂ ಚಾಲನೆ ನೀಡಲಿ ದ್ದಾರೆ. ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಹಲವು ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಎ.ನಾರಾಯ ಣಸ್ವಾಮಿ,ಸಚಿವರಾದ ಆಚಾರ್ ಹಾಲಪ್ಪ ಬಸಪ್ಪ, ಎಸ್.ಟಿ. ಸೋಮಶೇಖರ್,ಆರಗ ಜ್ಞಾನೇಂದ್ರ,ಬಿ.ಸಿ.ಪಾಟೀಲ್ ಸೇರಿ ನಾನಾ ಗಣ್ಯರು ಭಾಗವಹಿಸುವ ಈ ಸಮಾವೇಶದ ಅಧ್ಯಕ್ಷತೆಯನ್ನು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ವಹಿಸಲಿದ್ದಾರೆ.

70 ಲಕ್ಷಕ್ಕೂ ಅಧಿಕ ಸವಲತ್ತು

ಜಿಲ್ಲೆಯ ಅಂದಾಜು 18 ಲಕ್ಷ ಜನರಿಗೆ ಡಬಲ್ ಇಂಜಿನ್ ಸರ್ಕಾರಗಳಿಂದ ವಿವಿಧ ಇಲಾಖೆ, ನಿಗಮ ಮಂಡಳಿಗಳಿಂದ 70 ಲಕ್ಷಕ್ಕೂ ಹೆ ಚ್ಚು ಸವಲತ್ತಗಳು ಒದಗಿಸಲಾಗಿದೆ ಎಂಬುದು ಅಧಿಕಾರಿಗಳ ಮಾಹಿತಿ. ಪ್ರತಿ ಕುಟುಂಬ ಕನಿಷ್ಠ ಹಲವರಿಗೆ ಒಂದಲ್ಲ,ಒಂದು ಸವಲತ್ತುಗ ಳು ಸರ್ಕಾರಗಳಿಂದ ದೊರಕಿದ್ದು, ಫಲಾನುಭವಿಗಳನ್ನು ಸಮಾವೇಶಕ್ಕೆ ಕರೆತರಲು ಸಿದ್ಧತೆ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್,ಇತರೆ ವಾ ಹನ ಗಳಲ್ಲಿ ಜನರನ್ನು ಕರೆ ತರಲಾಗುತ್ತದೆ. ಸಮಾವೇಶ ಸ್ಥಳದಲ್ಲಿ ವಿವಿಧ ಇಲಾಖೆಗಳ ಹಾಗೂ ಮಹಿಳಾ ಸ್ವ ಸಹಾಯ ಗುಂಪುಗಳ 40 ಮಳಿಗೆ ಗಳಿರಲಿವೆ.

ಯಾವೆಲ್ಲ ಇಲಾಖೆಗಳು?

ವಸತಿ,ಕೃಷಿ,ಆರೋಗ್ಯ, ಪರಿಶಿಷ್ಟ ವರ್ಗಗಳ ಕಲ್ಯಾಣ, ಕೈಗಾರಿಕೆ, ಅಲ್ಪಸಂಖ್ಯಾತರ ಕಲ್ಯಾಣ, ರೇಷ್ಮೆ, ಸಮಾಜ ಕಲ್ಯಾಣ,ನಗರಾಭಿವೃದ್ಧಿ ಕೋಶ, ಬಿಸಿಎಂ, ಕೌಶಲಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಾರ್ಮಿಕ, ಪಶು ವೈದ್ಯಕೀಯ, ತೋಟಗಾರಿಕೆ, ಶಿಕ್ಷಣ, ಆಹಾರ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,ಸಹ ಕಾರ,ಕಂದಾಯ ಇಲಾಖೆ ಇಲಾಖೆ ಹಾಗೂ ಕೋವಿಡ್ ಲಸಿಕೆ, ಟೆಲಿಕನ್ಸ್‌ಲ್ಟೇಷನ್, ಸಾಲ,ನರೇಗಾ, ಎಆರ್‌ಎಲ್‌ಎಂ ಸಂಜೀವಿನಿ,ಸಹಿತ ಹಲವು ಯೋಜನೆಗಳು ಒಬ್ಬರಿಗೆ ರಿಪೀಟ್ ಸಾಧ್ಯತೆ ಇದೆಂಬ ಲೆಕ್ಕಾಚಾರದಲ್ಲಿ ಫಲಾನುಭವಿಗಳ ಸಂಖ್ಯೆಯನ್ನು 70.10 ಲಕ್ಷವೆಂದು ಗುರುತಿಸಲಾಗಿದೆ.

ಕೋಟ್

ಫಲಾನುಭವಿಗಳ ಸಂಖ್ಯೆಯನ್ನು 70 ಲಕ್ಷಕ್ಕೂ ಅಧಿಕವೆಂದು ಗುರುತಿಸಲಾಗಿದೆ. ಜನರನ್ನು ಕರೆತರಲು ವಾಹನಗಳನ್ನು ನಿಗದಿಪಡಿಸ ಲಾಗಿದೆ. ಸೂಕ್ತ ಬಂದೋಬಸ್ತ್‌ಗೆ ಸೂಚಿಸಲಾಗಿದೆ. ಸಮಾವೇಶದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 8ರಿಂದ ಸಂಜೆ 6ರವರೆಗೆ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಿ ಆದೇಶಿಸಲಾಗಿದೆ. ವಾಹನಗಳ ಪಾರ್ಕಿಂಗ್‌ಗೂ ಸ್ಥಳ ಗುರುತಿಸಲಾಗಿದೆ.

ದಿವ್ಯಾಪ್ರಭು,ಡಿಸಿ,ಚಿತ್ರದುರ್ಗ