ಜಿಲ್ಲೆ

ಬೇಂದ್ರೆ ಸ್ಮರಣೆ 26ರಂದು

Dharwada - Vikram Nadiger

ಧಾರವಾಡ: ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್​ ವತಿಯಿಂದ ಇಲ್ಲಿನ ಸಾಧನಕೇರಿ ಡಾ. ದ.ರಾ. ಬೇಂದ್ರೆ ಭವನದಲ್ಲಿ ವರಕವಿ ಡಾ.ದ.ರಾ.ಬೇಂದ್ರೆ 43ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಅ. 26ರಂದು ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ.

ಹಿರಿಯ ಸಾಹಿತಿ ಡಾ.ಜಿ.ಎಂ.ಹೆಗಡೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಉಪ ಪೊಲೀಸ್​ ಆಯುಕ್ತ ರವೀಶ ಸಿ.ಆರ್​. ಅತಿಥಿಯಾಗಿ ಆಗಮಿಸುವರು. ಜಾನಪದ ಕಲಾವಿದ ಜ್ಯೋತಿರ್ಲಿ೦ಗ ಹೊನಕಟ್ಟಿ ಜಾನಪದ ಗಾಯನ ಪ್ರಸ್ತುತ ಪಡಿಸಲಿದ್ದಾರೆ. ಟ್ರಸ್ಟ್​ ಅಧ್ಯಕ್ಷ ಡಾ. ಡಿ.ಎಂ.ಹಿರೇಮಠ ಅಧ್ಯಕ್ಷತೆ ವಹಿಸುವರು. ಸದಸ್ಯರಾದ ಡಾ.ಕೆ.ಎಸ್​.ಶರ್ಮಾ, ಡಾ.ಶ್ಯಾಮಸುಂದರ ಬಿದರಕುಂದಿ, ಡಾ.ಕೆ.ಆರ್​.ದುರ್ಗಾದಾಸ್​ ಹಾಗೂ ಡಾ.ಕೃಷ್ಣ ನಾಯಕ ಉಪಸ್ಥಿತರಿರುವರು ಎಂದು ಟ್ರಸ್ಟ್​ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ ತಿಳಿಸಿದ್ದಾರೆ.