ಬೆಳಗಾವಿ: ಕವಿ ಬೇಂದ್ರೆ ಅವರೊಂದಿಗೆ ಒಡನಾಟ ಹೊಂದಿರುವ ಹಲವು ಜನ ಇಂದು ಇಲ್ಲಿದ್ದಾರೆ. ಅವರು ಕಂಡು ಕೇಳಿದ ಘಟನೆಗಳು ಮರುಕಳಿಸುವಂತೆ ಮಾಡಿದೆ. ಹೊಸ ಪೀಳಿಗೆಗೆ ಬೇಂದ್ರೆ ಅವರನ್ನು ಪರಿಚಯಿಸುವ ಮಹತ್ವದ ಕೆಲಸವನ್ನು ಈ ನಾಟಕದ ಮೂಲಕ ರಾಜೇಂದ್ರ ಕಾರಂತ ಅವರು ಮಾಡಿದ್ದಾರೆ ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ್ ಹೇಳಿದರು.
ರಂಗಸಂಪದ ನಾಟಕ ತಂಡ ನಗರದ ಲೋಕಮಾನ್ಯ ರಂಗ ಮಂದಿರದಲ್ಲಿ ಬುಧವಾರ ಪ್ರದರ್ಶನಗೊಂಡ ‘ಗಂಗಾ ವತರಣ ನಾಟಕ’ ವೀಕ್ಷಣೆ ಮಾಡಿ ಮಾತನಾಡಿದರು.
ರಂಗಸಂಪದ ಅಧ್ಯಕ್ಷ ಡಾ.ಅರವಿಂದ ಕುಲಕರ್ಣಿ ಮಾತನಾಡಿ, ನಾಟಕದ ಕತೆ ಗಂಭೀರ ವಿಷಯದಿಂದ ಕೂಡಿದ್ದರೂ ಬೇಸರ ಬರದಂತೆ ನವಿರಾದ ಹಾಸ್ಯ ಅದರಲ್ಲಿ ಕೂಡಿದೆ. ಒಟ್ಟಿನಲ್ಲಿ ಕಾರಂತರ ನಾಟಕಗಳು ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಈ ನಾಟಕವು ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ, ಶತಾವಧಾನಿ ಗಣೇಶ ಮುಂತಾದ ಖ್ಯಾತನಾಮರ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಗಂಗಾವತರಣ ಬೇಂದ್ರೆ ಅವರ ಪದ್ಯಗಳಿಗೆ ಸಂಗೀತ ಅಳವಡಿಸಿ ಅದಕ್ಕೆ ತಕ್ಕಂತೆ ನೃತ್ಯ ಸಂಯೋಜನೆ ಮಾಡಿರುವುದರಿಂದ ಈ ನಾಟಕವನ್ನು ಸಂಗೀತ ನೃತ್ಯ ನಾಟಕವೆಂತಲೂ ಕರೆಯಬಹುದು.