ಜಿಲ್ಲೆ

ಕಬಡ್ಡಿಯಲ್ಲಿ ಬೆನಕನಕೊಪ್ಪ ಮುರಾರ್ಜಿ ಶಾಲೆ ದ್ವಿತೀಯ

ವಿವೇಕಾನಂದ ದಾಸನಕೊಪ್ಪ

ನರಗುಂದ: ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬೆಳಗಾವಿ ವಿಭಾಗ ಮಟ್ಟದ 14 ವರ್ಷದೊಳಗಿನ ಬಾಲಕಿಯರ ಕಬಡ್ಡಿಯಲ್ಲಿ ತಾಲೂಕಿನ ಬೆನಕನಕೊಪ್ಪದ ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದಿದ್ದಾರೆ.

ಉತ್ತಮ ಪ್ರದರ್ಶನ ನೀಡಿದ ಮೇಘಾ ಮಳಸಿಗ್ಗನವರ, ಸಂಜನಾ ಗೌಳಿ, ವಿದ್ಯಾ ಕಾಕನೂರ, ಸೌಜನ್ಯಾ ಅಜ್ಜಿ, ಅಶ್ವಿನಿ ಮದಗುಣಕಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಪಾರಿತೋಷಕ, ಪ್ರಶಸ್ತಿ ಪ್ರಮಾಣ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು.