ಎನ್.ಆರ್.ಪುರ: ಸೀತೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬೆಮ್ಮನೆ ಮೋಹನ್ ಹಾಗೂ ಉಪಾಧ್ಯಕ್ಷರಾಗಿ ಎಂ.ಎಸ್.ಗೀತಾ ಅವಿರೋದವಾಗಿ ಆಯ್ಕೆಯಾದರು.
ಸೀತೂರು ವಿಎಸ್‌ಎಸ್‌ಎನ್ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬೆಮ್ಮನೆ ಮೋಹನ್, ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಎಸ್.ಗೀತಾ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ನವೀನ್‌ಕುಮಾರ್ ಅಧ್ಯಕ್ಷ , ಉಪಾಧ್ಯಕ್ಷರ ಅವಿರೋಧ ಆಯ್ಕೆ ಘೋಷಿಸಿದರು.
ನಂತರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸಹಕಾರ ಭಾರತಿ ಉಪಾಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ ಮಾತನಾಡಿ, ಸಹಕಾರ ಭಾರತಿ ನೇತೃತ್ವದಲ್ಲಿ ನಡೆದ ಸಹಕಾರ ಸಂಘದ ಈ ಚುನಾವಣೆಯಲ್ಲಿ ಅದ್ಬುತ ಗೆಲುವು ಕಂಡಿದ್ದು, ಚುನಾವಣಾ ವೇಳೆ ಮತದಾರರಿಗೆ ನೀಡಿದ ಭರವಸೆ ಈಡೇರಿಸಬೇಕು. ನೂತನ ಅಧ್ಯಕ್ಷರು ಹಾಗೂ ಎಲ್ಲ ನಿರ್ದೇಶಕರು ಒಟ್ಟಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಸದಸ್ಯ ಎಚ್.ಇ.ದಿವಾಕರ, ಮುಖಂಡರಾದ ಎ.ಎಸ್.ವೆಂಕಟರಮಣ, ಶಶಿನಾಥ್, ಬಿ.ಎಸ್.ಶ್ರೀನಿವಾಸ್, ನಿರ್ದೇಶಕರಾದ ಎಸ್.ಉಪೇಂದ್ರರಾವ್, ಎಚ್.ವಿ.ಸಂದೀಪ್ ಕುಮಾರ್,ಕೆ.ಎಂ.ಜಗದೀಶ್, ಕೆ.ಜಿ.ರಮೇಶ್, ಜಿ.ಕೆ.ಜಯರಾಂ, ಎಚ್.ಎನ್.ಸತೀಶ್, ವೈ.ವಿ.ಲೋಲಾಕ್ಷಿ, ಎಚ್.ಎಚ್.ನಾರಾಯಣ, ಸುಧಾಕರ, ಸಿಇಒ ಅನಿಲ್ಕುಮಾರ್ ಇದ್ದರು.