ಜಿಲ್ಲೆ

ನಮ್ಮ ಮೆಟ್ರೊಗೆ 318 ಕೋಚ್‌ಗಳನ್ನು ಪೂರೈಸಲಿದೆ ಬೆಮೆಲ್‌!

ಬೆಂಗಳೂರು: ನಮ್ಮ ಮೆಟ್ರೋ ಕೇಂದ್ರ ಕಚೇರಿಯಲ್ಲಿ ಶನಿವಾರ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್(ಬೆಮೆಲ್) ಅಧ್ಯಕ್ಷ ಶಾಂತನುರಾಯ್‌ ಅವರೊಂದಿಗೆ ನಮ್ಮ ಮೆಟ್ರೋದ ಹಂತ-2, 2ಎ ಮತ್ತು 2ಬಿ ಯೋಜನೆಗಳಿಗೆ 318 ಕೋಚ್‌ಗಳ ಪೂರೈಕೆಗಾಗಿ ಒಪ್ಪಂದ ಪತ್ರವನ್ನು ವಿನಿಮಯ ಮಾಡಿಕೊಂಡರು.

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ 2025ರ ಆರಂಭಕ್ಕೆ ಮೊದಲ ಬೋಗಿ ನೀಡಲಿದ್ದು, 2026ರ ಡಿಸೆಂಬರ್ ಒಳಗೆ ಎಲ್ಲ ಬೋಗಿಗಳನ್ನು ಪೂರೈಸಲಿದೆ. 2025ರ ಜನವರಿಯಿಂದ ಪ್ರತಿ ತಿಂಗಳು 12ರಿಂದ 14 ಬೋಗಿಗಳನ್ನು ಒದಗಿಸಲಿದೆ. ಹಿಂದೆಯೂ 'ನಮ್ಮ ಮೆಟ್ರೊ' ಸೆರಿದಂತೆ ದೇಶದ ವಿವಿಧ ಮೆಟ್ರೊಗಳಿಗೆ ಬೋಗಿಗಳನ್ನು ತಯಾರಿಸಿ ನೀಡಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.