ಕಾಸರಗೋಡು: ಕಾಸರಗೋಡು ನಗರದ ಬಿಇಎಂ ಹೈಯರ್ ಸೆಕೆಂಡರಿ ಶಾಲಾ ಪ್ರವೇಶೋತ್ಸವ ಸಂಭ್ರಮದಿಂದ ನೆರವೇರಿತು.
ಕಾರ್ಯಕ್ರಮಕ್ಕೆ ಮೊದಲು ಶಾಲಾ ವಿದ್ಯಾರ್ಥಿಗಳಿಂದ ಮೆರವಣಿಗೆ ನಡೆಯಿತು. ಪ್ರಾಂಶುಪಾಲ ರಾಜೇಶ್‌ಚಂದ್ರ, ಮುಖ್ಯ ಶಿಕ್ಷಕ ಗಣೇಶ್, ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಪ್ರೇಮ್‌ಜಿತ್, ಶಾಲಾ ಸಿಬ್ಬಂದಿ ಕಾರ್ಯದರ್ಶಿ ಯಶವಂತ್, ಬಾಲಕೃಷ್ಣ ಹಾಗೂ ಶಾಲಾ ಸಿಬ್ಬಂದಿ, ಪಿಟಿಎ ಸಮಿತಿ ಸದಸ್ಯರು, ಮಕ್ಕಳ ಪಾಲಕರು ಉಪಸ್ಥಿತರಿದ್ದರು.
ಬಾಲ ಭವನ ಆಂಗ್ಲ ಮಾಧ್ಯಮ ಶಾಲೆ: ಕಾಸರಗೋಡು ಅಶ್ವಿನಿ ನಗರದ ಬಾಲಭವನ ಆಂಗ್ಲ ಮಾಧ್ಯಮ ಶಾಲೆ ಪ್ರವೇಶೋತ್ಸವ ಮೆರವಣಿಗೆಯೊಂದಿಗೆ ಜರುಗಿತು. ಮುಖ್ಯ ಶಿಕ್ಷಕಿ ಲೀಲಾವತಿ ನಾಯರ್, ಅಕಾಡೆಮಿಕಲ್ ಅಡ್‌ವೈಸರ್ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ನಗರ ಸಭಾ ಸದಸ್ಯೆ ಪವಿತ್ರಾ, ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಗುರುದತ್ತ್ ಪೈ, ಉಪಾಧ್ಯಕ್ಷ ಸಲಾಂ, ಕೋಶಾಧಿಕಾರಿ ಪ್ರಕಾಶ್ ಹಾಗೂ ಸಮಿತಿ ಸದಸ್ಯರು, ಶಾಲಾ ಸಿಬ್ಬಂದಿ, ಮಕ್ಕಳ ಪಾಲಕರು ಪಾಲ್ಗೊಂಡಿದ್ದರು.