ಬೇಲೂರು: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಮತ್ತು ತಾಲೂಕು ಘಟಕದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆಗೆ ಜುಲೈ 21ರಂದು ಚುನಾವಣೆ ನಡೆಯಲಿದೆ. ಜೂ.27ರಿಂದ ನಾಮ ಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ ಎಂದು ಸಹಾಯಕ ಚುನಾವಣಾಧಿಕಾರಿ ಬಿ.ಎಲ್.ರಾಜೇಗೌಡ ತಿಳಿಸಿದ್ದಾರೆ. ನಾಮ ಪತ್ರ ಸಲ್ಲಿಕೆಗೆ ಜುಲೈ 4 ಕಡೇ ದಿನ. ಜು. 5ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜು. 8ರಂದು ನಾಮ ಪತ್ರ ವಾಪಸ್ ಪಡೆಯಲು ಕಡೇ ದಿನ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಚುನಾವಣಾಧಿಕಾರಿಗಳಾದ ಭುವನೇಶ್ಚರಯ್ಯ, ಧನಂಜಯ, ಮೊಗಣ್ಣಗೌಡ ಇದ್ದರು.