ಜಿಲ್ಲೆ

ಸೈನಿಕರ ಶೌರ್ಯವನ್ನು ಗೌರವಿಸೋಣ

ಎ. ಆರ್. ರಘುರಾಮ

ಬೇಲೂರು : ಜೀವನದ ಸುಖಗಳನ್ನು ತ್ಯಾಗ ಮಾಡಿ ಹಗಲು ಇರುಳೆನ್ನದೆ ದೇಶದ ಗಡಿ ಕಾಯುವ ಸೈನಿಕರ ಶೌರ್ಯವನ್ನು ಗೌರವಿಸೋಣ ಎಂದು ಅರೇಹಳ್ಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ರಶ್ಮಿ ಹೇಳಿದರು.

ತಾಲೂಕಿನ ಅರೇಹಳ್ಳಿ ಬಸ್ ನಿಲ್ದಾಣದ ಮಿಲಿಟರಿ ಚಂದ್ರಶೇಖರ್ ವೃತ್ತದಲ್ಲಿ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಶನಿವಾರ ಮಳೆಯ ನಡುವೆಯೇ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶಾದ್ಯಂತ 26ನೇ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸುವ ಮೂಲಕ ವೀರ ಯೋಧರಿಗೆ

ಗೌರವ ಸಲ್ಲಿಸಲಾಗುತ್ತಿದೆ. ಭಾರತೀಯ ಸೇನೆಯ ಶಕ್ತಿ ಏನೆಂಬುದನ್ನು ಕಾರ್ಗಿಲ್ ಯುದ್ಧದ ಮೂಲಕ ಜಗತ್ತಿಗೆ ತೋರಿಸಿ ಕೊಟ್ಟಿದ್ದಾರೆ ಎಂದರು.

ಜಿಪಂ ಮಾಜಿ ಸದಸ್ಯ ಅಮಿತ್ ಶೆಟ್ಟಿ ಮಾತನಾಡಿ, 1999ರಲ್ಲಿ ಪಾಕ್‌ನ ನರಿ ಬುದ್ಧಿ ವಿರುದ್ಧ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಯುದ್ಧ ಘೋಷಿಸಿದರು. ಮೋಸಗಾರರಿಗೆ ಸೋಲಾಯಿತು ಎಂದರು. ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಚಾಮರಾಜ್, ಪ್ರಾಂತೀಯ ಮಾಜಿ ಅಧ್ಯಕ್ಷ ರಾಬಿ, ಪದಾಧಿಕಾರಿಗಳಾದ ಸೌಜನ್ಯಾ, ಬೃಂದನ್, ಸಂಕಪ್ಪ ಇತರರಿದ್ದರು.