ಬೇಲೂರು : ಶ್ರೀ ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ದೇವಾಲಯಕ್ಕೆ ಭೇಟಿ ನೀಡಿ ಸ್ವಚ್ಛತೆ, ಕುಡಿಯುವ ನೀರು, ದಾಸೋಹ ನಿಲಯದಲ್ಲಿ ಪರಿಶೀಲನೆ ನಡೆಸಿದರು.ಏ.2ರಿಂದ 15 ದಿನಗಳ ಕಾಲ ನಡೆಯಲಿರುವ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡಲಿದ್ದಾರೆ. ಅವರಿಗೆ ಶುದ್ಧ ಕುಡಿಯುವ ನೀರು ಸರಬರಾಜು, ಅನ್ನ ದಾಸೋಹ ಸಮಯದಲ್ಲಿ ಅಡುಗೆ ಸಿಬ್ಬಂದಿ ಬಳಸುವ ಪಾತ್ರೆ, ದಿನಸಿ, ಪ್ರಸಾದ ವಿತರಣಾ ಸಾಮಗ್ರಿಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ತಿಳಿಸಿದರು.
ಸೂಚನೆ: ಬೇಸಿಗೆ ಕಾಲವಾಗಿರುವುದರಿಂದ ನೀರು ಮತ್ತು ಆಹಾರದಿಂದ ಹರಡುವ ಕಾಯಿಲೆಗಳನ್ನು ನಿಯಂತ್ರಿಸಲು ಕ್ರಮ ವಹಿಸಬೇಕು. ಅತಿಸಾರ ಭೇದಿ, ಕಾಲರಾ, ವಿಷಮ ಶೀತ ಜ್ವರ, ಆಮಶಂಕೆ ಇನ್ನಿತರ ರೋಗಗಳು ಯಾರಿಗೂ ಹರಡದಂತೆ ಮುಂಜಾಗ್ರತ್ರಾ ಕ್ರಮ ವಹಿಸುವಂತೆ ದೇವಸ್ಥಾನದ ಇಒ ಯೋಗೀಶ್‌ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಸೂಚನೆ ನೀಡಿದರು.
ಆರೋಗ್ಯ ಶಿಕ್ಷಣಾಧಿಕಾರಿ ಉಷಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದಯಾನಂದ್, ಮೋಹನ್ ಸಿಬ್ಬಂದಿ ಮದನ್ ಇತರರಿದ್ದರು.