ಜಿಲ್ಲೆ

ವೇತನ ತಾರತಮ್ಯ ಸರಿಪಡಿಸಲು ಬಳ್ಳಾರಿ ವಿಮ್ಸ್ ಆಸ್ಪತ್ರೆಯ ಶುಶ್ರೂಷಕರ ಪ್ರತಿಭಟನೆ

Ballari

ಬಳ್ಳಾರಿ: ವೇತನ ತಾರತಮ್ಯ ಸರಿಪಡಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ವಿಮ್ಸ್ ಆಸ್ಪತ್ರೆಯ ಶುಶ್ರೂಷಕರು ಹಾಗೂ ಇತರ ವಿಭಾಗದ ನೌಕರರು ಮಂಗಳವಾರ ಸಂಸ್ಥೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

2019-20ನೇ ಸಾಲಿನಲ್ಲಿ ಮಿತಿ ವೇತನ ಆಧಾರದ ಮೇಲೆ ನೇಮಕಗೊಂಡಿರುವ ಶುಶ್ರೂಷಕರು, ಪ್ರಯೋಗಾಲಯ, ಎಕ್ಸ್‌ರೇ ತಂತ್ರಜ್ಞರು, ಎಲೆಕ್ಟ್ರೀಷಿಯನ್‌ಗಳನ್ನು ಗುತ್ತಿಗೆ ಆಧಾರಿತ ನೌಕರರಾಗಿ ಪರಿಗಣಿಸಬೇಕು. 20 ಸಾವಿರ ರೂ. ಬದಲಿಗೆ 14,800 ರೂ. ವೇತನ ನೀಡಲಾಗುತ್ತಿದೆ. ವೇತನ ತಾರತಮ್ಯ ಸರಿಪಡಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಮೂರು ತಿಂಗಳ ಬಾಕಿ ವೇತನ ಪಾವತಿಸಬೇಕು. ನಮ್ಮನ್ನು ಕೋವಿಡ್ ವಾರ್ಡ್‌ಗಳಿಗೆ ನಿಯೋಜನೆ ಮಾಡುತ್ತಿರುವುದರಿಂದ ಜೀವ ವಿಮೆ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.