ಜಿಲ್ಲೆ

ಸ್ವದೇಶಿ ಉತ್ಪನ್ನ ಬಳಸಿ, ಆರ್ಥಿಕತೆ ಹೆಚ್ಚಿಸಿ

ಬಳ್ಳಾರಿ : ಪ್ರತಿ ಮನೆಯೂ ಸ್ವದೇಶಿ - ಮನೆ ಹಾಗೂ ಮನೆಯೂ ಸ್ವದೇಶಿ ಅಂಗವಾಗಿ ಸೆ. 25 ರಿಂದ ಡಿ‌. 25 ರವರೆಗೆ ಆತ್ಮ ನಿರ್ಭರ ಭಾರತ ಸಂಕಲ್ಪ ಅಂಗವಾಗಿ ಸ್ವದೇಶಿ ಉತ್ಪನ್ನಗಳ ಬಳಸಿ ಎಂಬ ಅಭಿಯಾನವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ. ಎಂ. ಸತೀಶ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಜಿಲ್ಲಾದ್ಯಂತ ಬಿಜೆಪಿ ಕಾರ್ಯಕರ್ತರು ಕಳೆದ ಒಂದು ತಿಂಗಳಿಂದ ಮನೆ ಮನೆ ಹೋಗಿ ಆತ್ಮ ನಿರ್ಭರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಅಭಿಯಾನವು ಸೆ. 25 ರಂದು ( ಪಂಡಿತ ದೀನದಯಾಳ್ ಉಪಾಧ್ಯಾಯರ ಜನ್ಮದಿನ ) ಉದ್ಘಾಟನೆಯಾಗಿದ್ದು, ಡಿ‌.25 ರಂದು ( ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನರವರೆಗೆ ) ಸಮಾರೋಪಗೊಳ್ಳಲಿದೆ ಎಂದರು.

ಈ ಅಭಿಯಾನವು ಸಾಮಾನ್ಯ ನಾಗರಿಕರ ಪಾಲ್ಗೂಳ್ಳುವಿಕೆ ಬಗ್ಗೆ ಜನಜಾಗೃತಿ ಮೂಡಿಸಿ, ಪ್ರತಿಯೊಬ್ಬ ಭಾರತೀಯನಿಗೂ ಆತ್ಮನಿರ್ಭರ ಭಾರತ ಸಂದೇಶ ತಲುಪಿಸಲಿದೆ. ಆದ್ದರಿಂದ, ಬಳ್ಳಾರಿಯಲ್ಲಿ ಅ.25 ರಿಂದ ಮನೆ ಮನೆಗೆ ಸ್ಟಿಕರ್ ಅಂಟಿಸಲಾಗುವುದು. ಗೋಡೆ ಬರಹ ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಪ್ರಬಂಧ, ಕ್ವಿಜ್ ಹಾಗೂ ಪ್ರಮುಖರ ಮೂಲಕ ಭಾಷಣ, ಸಹಿ - ಸಂಗ್ರಹ ಅಭಿಯಾನ, ಬೀದಿ ನಾಟಕ, ಬ್ಯಾನರ್ ಹಾಗೂ ಹೋರ್ಡಿಂಗ್ಸ್ ಮುಖಾಂತರ ಪ್ರಚಾರ ಆಯೋಜಿಸಲಾಗುವುದು‌‌. ಅಲ್ಲದೆ, ವಿಶೇಷವಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸ್ವದೇಶಿ ವಸ್ತುಗಳನ್ನು ‌ಕೊಳ್ಳುವಂತಹ ಜಾಗೃತಿ ಅಭಿಯಾನ ನಡೆಸಲಿದ್ದೇವೆ ಎಂದರು. ರಾಜ್ಯದ ತಾಲೂಕು ಹಾಗೂ ನಗರಗಳಲ್ಲಿ ನಡೆಸಲಾಗುವುದು ಎಂದರು. ಜಿಲ್ಲಾಧ್ಯಕ್ಷ ಅನಿಲ ಕುಮಾರ್‌ ಮೋಕಾ, ಮುಖಂಡರಾದ ಡಾ.ಬಿ.ಕೆ.ಸುಂದರ್, ಕೆ.ಎಸ್.ದಿವಾಕರ್, ಗುರುಲಿಂಗನಗೌಡ, ಹನುಮಂತಪ್ಪ ಇದ್ದರು.