ಜಿಲ್ಲೆ

ವಿವಿ 16ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಜು 30

ಬಳ್ಳಾರಿ : ಇಲ್ಲಿನ ವಿಎಸ್‌ಕೆ ವಿವಿಯ 16ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮವನ್ನು ಜು 30 ರಂದು ಬೆಳಗ್ಗೆ 9.30 ಬಯಲು ರಂಗಮಂದಿರ ಆವರಣದಲ್ಲಿ ಆಯೋಜಿಸಲಾಗಿದೆ. ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಆಂಧ್ರಪ್ರದೇಶದ ಕೇಂದ್ರೀಯ ಗಿರಿಜನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ತೇಜಸ್ವಿ ವಿ.ಕಟ್ಟಿಮನಿ ದಿಕ್ಸೂಚಿ ಭಾಷಣ ಮಾಡುವರು.

ಬೆಂಗಳೂರಿನ ಡಾ.ಅಪ್ಪಗೆರೆ ತಿಮ್ಮರಾಜು ಅವರಿಂದ ಜಾನಪದ ಗೀತೆ, ವಿಜಯನಗರ ಜಿಲ್ಲೆಯ ಗೊಲ್ಲರಹಳ್ಳಿಯ ರಾಮವ್ವ ಜೋಗತಿ ತಂಡದಿಂದ ಜೋಗತಿ ನೃತ್ಯ, ಕಂಪ್ಲಿಯ ಆರ್.ಶೀಲಾ ತಂಡದಿಂದ ಆದಿವಾಸಿ ಬುಡಕಟ್ಟು ಹಕ್ಕಿ-ಪಿಕ್ಕಿ ನೃತ್ಯ, ಬಳ್ಳಾರಿಯ ಚಂದ್ರಶೇಖರ ತಂಡದಿಂದದ ಡೊಳ್ಳು ಕುಣಿತ, ಬಳ್ಳಾರಿಯ ಜಿ.ಮೋಹನ ತಂಡದಿಂದ ದ ತಾಷಾರಾಂ ಡೋಲು, ಬಳ್ಳಾರಿಯ ಎಂ.ನಾಗರಾಜ ತಂಡದಿಂದ ವೀರಗಾಸೆ ನೃತ್ಯ ಒಳಗೊಂಡಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ವಿವಿ ಪ್ರಕಟಣೆಯಲ್ಲಿ ಸತಿಳಿಸಿದೆ.

------------