ಜಿಲ್ಲೆ

ಪ್ರತ್ಯೇಕ ಅಪಘಾತ ಇಬ್ಬರ ಸಾವು

ಎಸ್.ಎರ್ರಿಸ್ವಾಮಿ

ಬಳ್ಳಾರಿ : ತಾಲೂಕಿನ ಅಂತಾಪುರ ಗ್ರಾಮದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕ ಮೇಲೆ ಲಾರಿ ಹರಿದು ಮೃತಪಟ್ಟಿದ್ದಾನೆ. ದೊಡ್ಡಂತಾಪುರ ಗ್ರಾಮದ ಅನಿಲಕುಮಾರ (20) ಮೃತ. ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಂಚಾರಿಸುತ್ತಿದ್ದ ವೇಳೆ ಏಕಾಏಕಿ ಹಿಂಬದಿಯಿಂದ ಬಂದ ಲಾರಿ ಯುವಕನ ಮೇಲೆ ಹರಿದಿದೆ.

ತಾಲೂಕಿನ ಬನ್ನಿಹಟ್ಟಿಯ ಗ್ರಾಮದ ಬಳಿ ನಾರಿಹಳ್ಳದ ಸೇತುವೆಗೆ ಬೈಕ್ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ವಡ್ಡು ಗ್ರಾಮದ ರಿಯಾಜ್ (25)ಮೃತ. ಬೈಕ್ ಸವಾರ ಕಿರಣ್ ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲೆಯ ಟ್ರಾಮ್ ಕೇರ್ ಸೆಂಟರ್‌ಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಕುರಿತು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ.