ಬಳ್ಳಾರಿ : ಇಲ್ಲಿನ ಗಡಿಗಿ ಚೆನ್ನಪ್ಪ ವೃತ್ತದಿಂದ ರೈಲ್ವೆ ಕೆಳ ಸೇತುವೆವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯು ಆರಂಭದಿಂದ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.
ಸದ್ಯ ಈ ಕಾಮಗಾರಿ ಕಾರಣಕ್ಕೆ ದುರ್ಗಮ್ಮನ ಗುಡಿ ಮಾರ್ಗವಾಗಿ ಗವಿಯಪ್ಪ ವೃತ್ತದ ಕಡೆಗೆ ಎರಡೂ ಕಡೆ ಸಂಚಾರ ನಿರ್ಬಂಧಗೊಂಡಿದೆ. ದುರ್ಗಮ್ಮ ಗುಡಿ ಹಾಗೂ ರಾಯಲ್ ವೃತ್ತದ ಬಳಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಹೀಗಾಗಿ ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಗಡಿಗಿ ಚೆನ್ನಪ್ಪ ವೃತ್ತದಲ್ಲಿನ ಕಾಮಗಾರಿಯಿಂದಾಗಿ ವರ್ಷಗಳ ಕಾಲ ಸಂಚಾರ ಸಮಸ್ಯೆ ಎದುರಿಸಿದ್ದ ನಗರದ ನಾಗರಿಕರಿಗೆ ಈಗ ಮತ್ತೊಂದು ಕಾಮಗಾರಿಯಿಂದ ಸಂಚಾರ ಸಂಕಟ ಎದುರಾಗಿದೆ. ಈ ಮಾರ್ಗದಲ್ಲಿ ಸಂಚಾರ ಆರಂಭವಾಗಲು ಕನಿಷ್ಠ 20 ದಿನಗಳಾದರೂ ಬೇಕಾಗಲಿದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.