ಜಿಲ್ಲೆ

ಸಮಾಜದಲ್ಲಿ ಅರ್ಥಶಾಸ್ತ್ರದ ಬಳಕೆ ವ್ಯಾಪಕ

ಬಳ್ಳಾರಿ : ಉದ್ಯಮ, ಆರೋಗ್ಯ, ಶಿಕ್ಷಣ, ತಂತ್ರಜ್ಞಾನ ಹೀಗೆ ವಿಶ್ವದೆಲ್ಲೆಡೆ ಪ್ರಚಲಿತದಲ್ಲಿರುವ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವುದು ಅರ್ಥಶಾಸ್ತ್ರ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಹೇಳಿದರು.

ನಗರದ ವಿಎಸ್‌ಕೆ ವಿವಿಯಲ್ಲಿ ದಿ ಇನ್ಸಿಟ್ಯೂಟ್ ಆಫ್ ಇಂಜಿನಿಯರ್ಸ್‌ (ಇಂಡಿಯಾ) ಜಂಟಿ ಸಹಯೋಗದಲ್ಲಿ ಅರ್ಥಶಾಸ್ತ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕ್ರೆಡಿಟ್ ರೇಟಿಂಗ್ ಗೇಮ್ಸ್ ಆ್ಯಂಡ್ ಇಂಡಸ್ಟಿಯಲ್ ಇನ್‌ವೆಸ್ಟೆಮೆಂಟ್ ಡಿಸಿಶನ್ಸ್ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುನೈಟೆಡ್ ಕಿಂಗ್‌ಡಮ್ ದೇಶದ ಕಾರ್ಡಿಫ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರೊ.ರಮಾಕಾಂತ್ ಪಾತ್ರಾ ಮಾತನಾಡಿ, ಆರ್ಥಿಕ ಹೂಡಿಕೆದಾರರ ಯೋಜನೆಗಳು ಮತ್ತು ತಂತ್ರಗಳು, ಸಮತೋಲನ ಆಧಾರಿತ ಹೂಡಿಕೆಗಳು, ವ್ಯವಹಾರಿಕ ಜ್ಞಾನ, ಕ್ರೆಡಿಟ್ ಗೇಮ್ ಮೊದಲಾದ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ , ಗಣಿತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಉಪನ್ಯಾಸದ ನಂತರ ಸುಮಾರು ಅರ್ಧ ಗಂಟೆ ಕಾಲ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಂದ ಪ್ರಶ್ನೋತ್ತರ ಕಲಾಪ ಜರುಗಿತು.